• Home
  • »
  • News
  • »
  • state
  • »
  • Karnataka Weather Report: ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ; ಇಂದು ಈ ಪ್ರದೇಶದಲ್ಲಿ ಮಳೆ

Karnataka Weather Report: ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ; ಇಂದು ಈ ಪ್ರದೇಶದಲ್ಲಿ ಮಳೆ

ಬೆಂಗಳೂರು ಮಳೆ

ಬೆಂಗಳೂರು ಮಳೆ

ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ತುಮಕೂರು ಮತ್ತು ದಾವಣಗೆರೆಯಲ್ಲಿ ಇವತ್ತು ಸಹ ಮಳೆಯಾಗಲಿದೆ. ಮಲೆನಾಡು ಭಾಗದಲ್ಲಿಯೂ ಸಣ್ಣ ಮಳೆ ಇರಲಿದೆ.

  • News18 Kannada
  • Last Updated :
  • Karnataka, India
  • Share this:

ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರೋ ಧಾರಾಕಾರ ಮಳೆಗೆ (Heavy Rainfall) ಜನರು ತತ್ತರಿಸಿ ಹೋಗಿದ್ದಾರೆ. ದಕ್ಷಿಣ ಒಳನಾಡು ಭಾಗದಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಮಳೆ ಇಳಿಮುಖವಾಗಿದೆ. ಕರಾವಳಿ ಭಾಗದಲ್ಲಿ (Coastal Rains) ಚದುರಿದ ರೀತಿ ಮಳೆ ಬೀಳಲಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ತುಮಕೂರು ಮತ್ತು ದಾವಣಗೆರೆಯಲ್ಲಿ ಇವತ್ತು ಸಹ ಮಳೆಯಾಗಲಿದೆ. ಮಲೆನಾಡು ಭಾಗದಲ್ಲಿಯೂ ಸಣ್ಣ ಮಳೆ ಇರಲಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru Rains) ನಿನ್ನೆ ರಾತ್ರಿಯೂ ವರುಣನ ಅಬ್ಬರಿಸಿ ಬೊಬ್ಬಿರಿದಿದ್ದಾನೆ


ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆ, ಕಾರ್ಪೊರೇಷನ್ ಸರ್ಕಲ್, ಬಸವನಗುಡಿ, ಜಯನಗರ, ಚಾಮರಾಜಪೇಟೆ, ಜಯನಗರ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಭಾರೀ ಮಳೆಯಾಯ್ತು.


ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)


ಬೆಂಗಳೂರು: 27-19, ಮೈಸೂರು: 29-20, ಮಂಡ್ಯ: 29-20, ಮಡಿಕೇರಿ: 24-17, ರಾಮನಗರ: 28-18, ಬೆಂಗಳೂರು ಗ್ರಾಮಾಂತರ: 27-19, ತುಮಕೂರು: 28-19, ಕೊಪ್ಪಳ: 30-22, ರಾಯಚೂರು: 31-22, ಚಿಕ್ಕಬಳ್ಳಾಪುರ: 27-19, ಕೋಲಾರ: 27-20, ಹಾಸನ: 27-19, ಚಾಮರಾಜನಗರ: 28-21, ಮಂಗಳೂರು: 30-24, ಶಿವಮೊಗ್ಗ: 29-21


ಬೆಳಗಾವಿ: 28-21, ಹಾವೇರಿ: 30-22,. ದಾವಣಗೆರೆ: 29-21, ಚಿತ್ರದುರ್ಗ: 28-19, ವಿಜಯಪುರ: 29-22, ಉಡುಪಿ: 30-24, ಕಾರವಾರ: 31-26, ಗದಗ: 29-22, ಯಾದಗಿರಿ: 31-22, ಚಿಕ್ಕಮಗಳೂರು: 26-19, ಬೀದರ್: 28-21, ಬಾಗಲಕೋಟೆ: 30-22, ಕಲಬುರಗಿ: 30-22 ಮತ್ತು ಬಳ್ಳಾರಿ: 30-22


ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತ


ಇನ್ನು ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ರು. ವಿಠಲ ಮಲ್ಯ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಅಲ್ದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಕೆ.ಆರ್.ಪುರಂ ಅಪಾರ್ಟ್‌ಮೆಂಟ್ ಬೇಸ್ ಮೆಂಟ್‌ ಒಳಗೆ ನೀರು ನುಗ್ಗಿದ್ದು, ಜನರು ಪರದಾಡಿದ್ರು.


ಮಳೆ ಆರ್ಭಟಕ್ಕೆ ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್​ ಕಚೇರಿ ಬಳಿ ಮೆಟ್ರೋ ತಡೆಗೋಡೆ ಕುಸಿದು ಬಿದ್ದಿದ್ದು, 7ಕ್ಕೂ ಹೆಚ್ಚು ಕಾರುಗಳು ಜಖಂ ಆಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಟ್ರಾಫಿಕ್‌ನಲ್ಲಿ ಸಿಲುಕಿದ ಆ್ಯಂಬುಲೆನ್ಸ್


ಮಲ್ಲೇಶ್ವರ ಮಂತ್ರಿಮಾಲ್ ಮುಂಭಾಗ ರಸ್ತೆಯುದ್ದಕ್ಕೂ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದ್ರು. ರಸ್ತೆಯಲ್ಲಿ ಸುಮಾರು ಮೂರು ನಾಲ್ಕು ಅಡಿಯಷ್ಟು ನೀರು ನಿಂತಿತ್ತು. ಧಾರಾಕಾರ ಮಳೆಗೆ ಶಾಂತಿ ನಗರದ ವಿಲ್ಸನ್ ಗಾರ್ಡನ್ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಇನ್ನು ಮಳೆ ಹಿನ್ನೆಲೆ ನಗರದೆಲ್ಲೆಡೆ ನಿನ್ನೆ ರಾತ್ರಿ ಭಾರೀ ಟ್ರಾಫಿಕ್ ಉಂಟಾಗಿತ್ತು. ನಗರದ ಹೆಬ್ಬಾಳ ಬಳಿಯ ಲುಂಬಿನಿ ಗಾರ್ಡನ್‌ನಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿ ಆ್ಯಂಬುಲೆನ್ಸ್ ಚಾಲಕ ಪರದಾಡಿದ್ರು.


ಮೇಲ್ಛಾವಣಿ ಕುಸಿದು ಮಹಿಳೆಗೆ ಗಾಯ


ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಮುಳಬಾಗಿಲು ಪಟ್ಟಣದ ತಾತಿಪಾಳ್ಯದಲ್ಲಿ ಮನೆ ಮುಂಭಾಗದ ಮೇಲ್ಛಾವಣಿ ಕುಸಿದು ಮಹಿಳೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡಿರೋ ಮಂಜುಳಾ ಅವರನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.


ಇದನ್ನೂ ಓದಿ:  Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!


ಕೆರೆ ಕೋಡಿಯಲ್ಲಿ ಸಿಲುಕಿದ ವಾಹನ


ಬೆಂಗಳೂರು ಹೊರವಲಯ ಆನೇಕಲ್‌ನಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಮುತ್ತಾನಲ್ಲೂರು ಕೆರೆ ಕೋಡಿ ಬಿದ್ದಿದೆ. ರಸ್ತೆ ಮೇಲೆಲ್ಲಾ ನೀರು ತುಂಬಿ ಹರಿಯುತ್ತಿದೆ. ಈ ವೇಳೆ ಬೊಲೆರೋ ವಾಹನ ಸಿಕ್ಕಾಕಿಕೊಂಡಿದೆ. ಸ್ಥಳೀಯರ ಸಹಾಯದಿಂದ ವಾಹನವನ್ನ ಮೇಲೆತ್ತಿದ್ರು. ಕೆರೆ ಕೋಡಿ ಬಿದ್ದಿದ್ರಿಂದ ವಾಹನ ಸವಾರರು ಪರದಾಡ್ತಿದ್ದಾರೆ.


ಇದನ್ನೂ ಓದಿ: Hubballi: ಹಜ್ ಯಾತ್ರೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ; ಪ್ರಮುಖ ಆರೋಪಿ ಸಾವಿನ ಸುತ್ತ ಅನುಮಾನದ ಹುತ್ತ!

ಸೋಲಾರ್ ಪಾರ್ಕ್​ ಮುಳುಗಡೆ

ತುಮಕೂರು ಜಿಲ್ಲೆಯ ಪಾವಗಡ ಸೋಲಾರ್ ಪಾರ್ಕ್ ಜಲಾವೃತವಾಗಿದೆ. ನಿರಂತರವಾಗಿ 3 ದಿನಗಳಿಂದ ಸುರಿದ ಮಳೆಗೆ ಕ್ಯಾದಗಾನಕೆರೆ ಕೋಡಿ ಬಿದ್ದಿದೆ. ಆ ನೀರು ಸೋಲಾರ್ ಪಾರ್ಕ್​​ಗೆ ನುಗ್ಗಿದೆ. ಸೋಲಾರ್ ಪಾರ್ಕ್​ ಮುಳುಗಿರೋದ್ರಿಂದ ಕಾರ್ಮಿಕನೋರ್ವ ಪ್ಲಾಂಟ್​ನಲ್ಲೇ ಈಜಾಡಿದ್ದಾನೆ.

Published by:Mahmadrafik K
First published: