Karnataka Weather Report: ವರುಣನ ಒಂದೊಂದು ಹನಿಗೂ ಆತಂಕ, ಭಯದಲ್ಲಿ ಜನರು; 1998ರ ಬಳಿಕ ಬೆಂಗಳೂರಿನಲ್ಲಿ ದಾಖಲೆ ಮಳೆ

ಇಂದು ಸಹ ಸಿಲಿಕಾನ್ ಸಿಟಿಯಲ್ಲಿ ಮಳೆ ಮುಂದುವರಿಯಲಿದೆ. ಪ್ರವಾಹ ಪರಿಸ್ಥಿತಿ ಉಂಟಾಗಿರುವ ಏರಿಯಾಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇವತ್ತು ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಪ್ರವಾಹ

ಪ್ರವಾಹ

  • Share this:
Karnataka Weather Report: ರಾಜ್ಯದಲ್ಲಿ ಮಳೆರಾಯ (Karnataka Rains) ಶಾಂತವಾಗುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ವರುಣನ (Heavy Rainfall) ಅಬ್ಬರ ಹೆಚ್ಚಾಗುತ್ತಲೇ ಇದೆ. ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಜಲರಾಶಿಯೇ ಕಾಣುತ್ತಿದೆ. ಪರಿಣಾಮ ರಾಜ್ಯದ ಎಲ್ಲಾ ಜಲಾಶಯಗಳು (Dams) ಭರ್ತಿಯಾಗಿ, ಅಪಾರ ಪ್ರಮಾಣದ ನೀರು ಹೊರಕ್ಕೆ  ಬಿಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಅಂಡರ್​ಪಾಸ್​ಗಳು (Underpass) ಜಲಾವೃತಗೊಂಡಿವೆ. ಕೆರೆ (Lake) ಕೋಡಿಗಳು ಒಡೆದ ಪರಿಣಾಮ ಕೃಷಿ ಜಮೀನುಗಳು ಜಲಾವೃತಗೊಂಡು ಬೆಳೆಗಳು (Crops) ನಾಶವಾಗಿವೆ. ಬೆಳಗಾವಿ, ಹಾವೇರಿ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ವರುಣ ಅಬ್ಬರಿಸುತ್ತಿದ್ದಾನೆ. ಮಣ್ಣಿನ ಮನೆಗಳು (Mud Houses) ಕುಸಿಯುತ್ತಿದ್ದು, ಜನರು ಸಂಬಂಧಿಗಳ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಇನ್ನೂ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇ ಏನಿಲ್ಲ. ಈ ಬಾರಿ ಹೊಸ ಏರಿಯಾಗಳು ಜಲಾವೃತಗೊಂಡಿವೆ. ಈ ವರ್ಷ 209 ವಾರ್ಡ್​ಗಳನ್ನು ಡೇಂಜರ್ ಝೋನ್ ಎಂದು ಬಿಬಿಎಂಪಿ ಗುರುತಿಸಿತ್ತು. ಆದ್ರೆ ಕೆರೆಯ ಕೋಡಿಗಳು ಬಿದ್ದ ಪರಿಣಾಮ ಪ್ರತಿಷ್ಠಿತ ಕಾಲೋನಿಗಳೆಲ್ಲಾ ಜಲಾವೃತಗೊಳ್ಳುತ್ತಿವೆ.

ಬೆಂಗಳೂರಿನಲ್ಲಿ ಮುಂದುವರಿದ ಮಳೆ

ಇಂದು ಸಹ ಸಿಲಿಕಾನ್ ಸಿಟಿಯಲ್ಲಿ ಮಳೆ ಮುಂದುವರಿಯಲಿದೆ. ಪ್ರವಾಹ ಪರಿಸ್ಥಿತಿ ಉಂಟಾಗಿರುವ ಏರಿಯಾಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇವತ್ತು ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಇದನ್ನೂ ಓದಿ:  Baby Death: ಗಣೇಶ ಹಬ್ಬದಂದೇ ಭೀಕರ ರಸ್ತೆ ಅಪಘಾತ‌, 8 ತಿಂಗಳ ಮಗು ದುರ್ಮರಣ!

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

ಬೆಂಗಳೂರು 28-20, ಮೈಸೂರು 28-21, ಚಾಮರಾಜನಗರ 27-21, ರಾಮನಗರ 28-21, ಮಂಡ್ಯ 29-21, ಬೆಂಗಳೂರು ಗ್ರಾಮಾಂತರ 28-20, ಚಿಕ್ಕಬಳ್ಳಾಪುರ 28-20, ಕೋಲಾರ 28-21, ಹಾಸನ 27-19, ಚಿತ್ರದುರ್ಗ 29-21, ಚಿಕ್ಕಮಗಳೂರು 27-19, ದಾವಣಗೆರೆ 30-22, ಶಿವಮೊಗ್ಗ 30-21, ಕೊಡಗು 25-18, ತುಮಕೂರು 29-21, ಉಡುಪಿ 29-24, ಮಂಗಳೂರು 28-24

Karnataka Weather Report 1st september 2022 mrq
ಪ್ರವಾಹ


ಉತ್ತರ ಕನ್ನಡ 29-21, ಧಾರವಾಡ 29-21, ಹಾವೇರಿ 31-22, ಹುಬ್ಬಳ್ಳಿ 29-22, ಬೆಳಗಾವಿ 28-21, ಗದಗ 30-22, ಕೊಪ್ಪಳ 31-23, ವಿಜಯಪುರ 30-23, ಬಾಗಲಕೋಟ 31-23 , ಕಲಬುರಗಿ 32-23, ಬೀದರ್ 31-22, ಯಾದಗಿರಿ 32-23, ರಾಯಚೂರ 32-23, ಬಳ್ಳಾರಿ 32-23

ದಾಖಲೆಯ ಮಳೆ

ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ಕೊಡಗು, ದಕ್ಷಿಣ ಕನ್ನಡದ ಜಿಲ್ಲೆಗಳಲ್ಲಿ ಮತ್ತೆ ಭೂಕುಸಿತ ಉಂಟಾಗುತ್ತಿರೋದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಒಳನಾಡು ಸಹ ಈ ಬಾರಿ ದಾಖಲೆಯ ಮಳೆಯನ್ನು ಕಂಡಿದೆ.

ಬಿಬಿಎಂಪಿ ಲೆಕ್ಕಾಚಾರ ಬುಡಮೇಲು, ಆಗಸ್ಟ್ ತಿಂಗಳಲ್ಲಿ ವರುಣಾರ್ಭಟ

24 ವರ್ಷಗಳ ಬಳಿಕ ರಾಜಧಾನಿ ಕಂಡು ಕೇಳರಿಯದ ಮಳೆಗೆ ತತ್ತರಗೊಂಡಿದೆ. ಆಗಸ್ಟ್‌ಗೆ ಬಿದ್ದ ಮಳೆಗೆ ಬೆಂಗಳೂರಿನ ಹೊಸ ಹೊಸ ಏರಿಯಾಗಳಲ್ಲೂ ಪ್ರವಾಹ ಉಂಟಾಗಿದೆ. ಪಾಲಿಕೆ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶ  ಎಂದು 209 ಏರಿಯಾಗಳನ್ನು ಗುರುತಿಸಿತ್ತು.  ಆದರೆ ಈ ಬಾರಿ ಹೊಸ ಏರಿಯಾಗಳಲ್ಲೂ ಮಳೆಯ ಅವಾಂತರ ಸೃಷ್ಟಿಯಾಗಿದೆ.

Karnataka Weather Report 1st september 2022 mrq
ಪ್ರವಾಹ


ಐಟಿ ಬಿಟಿ ವಲಯಗಳು ಜಲಾವೃತ

ಬೆಳ್ಳಂದೂರು, ವರ್ತೂರು, ನಲ್ಲೂರಹಳ್ಳಿ ಕೆರೆ.. ಕೆರೆ ಉಕ್ಕಿ ಹರಿದಿರುವುದೇ ಪ್ರವಾಹಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇದರಿಂದ ಮಾರತಹಳ್ಳಿ, ಸರ್ಜಾಪುರ, ಔಟರ್ ರಿಂಗ್ ರಸ್ತೆ, ಬೆಳ್ಳಂದೂರು ಭಾಗದಲ್ಲಿ ಪ್ರವಾಹ ಉಂಟಾಗಿದೆ. ಆರ್ ಆರ್ ನಗರ, ಹೊರಮಾವು, ದಾಸರಹಳ್ಳಿ ಭಾಗದಲ್ಲಿ ಪ್ರತಿ ಭಾರಿ ಮಳೆ ಅವಾಂತರ ಉಂಟಾಗುತ್ತಿತ್ತು. ಈ ಬಾರಿ ವರುಣ ತನ್ನ ದಿಕ್ಕು ಬದಲಿಸಿದ ಕಾರಣ ಐಟಿ ಬಿಟಿ ವಲಯಗಳು ಜಲಾವೃತಗೊಳ್ಳುತ್ತಿವೆ.

ಇದನ್ನೂ ಓದಿ:  Bengaluru: ಬೆಂಗಳೂರಿಗೆ ಯೋಗಿ ಆದಿತ್ಯನಾಥ್; ನಿಮ್ಮ ಪ್ರಯಾಣದ ರಸ್ತೆ ಹೀಗೆ ಬದಲಿಸಿ

ಈ ಬಾರಿ ಆಗಸ್ಟ್ ತಿಂಗಳಲ್ಲಿ 364.2 ಮಿಲಿ ಮೀಟರ್ ಮಳೆ ದಾಖಲು ಆಗಿದೆ. 1998ರ ಬಳಿಕ ದಾಖಲೆಯ ಮಳೆಗೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ.
Published by:Mahmadrafik K
First published: