• Home
  • »
  • News
  • »
  • state
  • »
  • Karnataka Weather Report: ರಾಜ್ಯದ ಹಲವೆಡೆ ಮತ್ತೆ ವರುಣನ ಆಟ ಶುರು; ಬೆಂಗಳೂರಲ್ಲಿ ರಾತ್ರಿಯಿಡೀ ಜಿಟಿಜಿಟಿ ಮಳೆ

Karnataka Weather Report: ರಾಜ್ಯದ ಹಲವೆಡೆ ಮತ್ತೆ ವರುಣನ ಆಟ ಶುರು; ಬೆಂಗಳೂರಲ್ಲಿ ರಾತ್ರಿಯಿಡೀ ಜಿಟಿಜಿಟಿ ಮಳೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಬಳಿ ಸಿಡಿಲು ಬಡಿದು 23 ವರ್ಷದ ಕೋಟ್ರೇಶ್ ಸಾವನ್ನಪ್ಪಿದ್ದಾನೆ. ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ.

  • Share this:

Karnataka Weather Report: ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ  (North Karnataka Rains) ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಸಹ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಮಳೆಯಾಗುವ ನಿರೀಕ್ಷೆಗಳಿವೆ. ಇತ್ತ ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapur) , ಬೆಂಗಳೂರು ವ್ಯಾಪ್ತಿಯಲ್ಲಿಯೂ ಸಣ್ಣ ಮಳೆಯಾದ್ರೆ, ಕರಾವಳಿ ಮತ್ತು ಮಲೆನಾಡು ಪರಿಸರದಲ್ಲಿ ಮಳೆಯ ಪ್ರಮಾಣ ಕೊಂಚ ಏರಿಕೆಯಾಗಿದೆ.  ಬೆಂಗಳೂರಲ್ಲಿ (Bengaluru Rains) ರಾತ್ರಿ ಆರಂಭವಾದ ಜಿಟಿ ಜಿಟಿ ಮಳೆ, ಮುಂಜಾನೆ ತನಕ ಸುರಿದಿದೆ. ಮೆಜಸ್ಟಿಕ್, ಕಾರ್ಪೋರೇಷನ್, ವಿಧಾನಸೌಧ, ಚಂದ್ರಾಲೇಔಟ್, ಆರ್ ಟಿ ನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ರಾತ್ರಿ ಮನೆಗೆ ಹೋಗಲು ಜನ ಪರದಾಡಿದರು. ಇಂದು ಸಹ ಬೆಂಗಳೂರಿನಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (IMD) ಹೇಳಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weathr) ಗರಿಷ್ಠ 23 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.


ಗದಗ ಜಿಲ್ಲೆಯಲ್ಲಿ ನಿನ್ನೆ ವರುಣನ ಅಬ್ಬರಿಸಿದ್ದಾನೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ದೊಡ್ಡೂರು ಗ್ರಾಮದಲ್ಲಿ ಭಾರೀ ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಚಾಲಕನೊಬ್ಬ ಟ್ರ್ಯಾಕ್ಟರ್ ಚಲಾಯಿಸಿದ್ದಾನೆ. ಚಾಲಕನ ಹುಚ್ಚು ಸಾಹಸಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ.


ಸಿಡಿಲು ಬಡಿದು ಗೋಪುರಕ್ಕೆ ಹಾನಿ


ಇನ್ನು ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಬನಶಂಕರಿ ದೇವಸ್ಥಾನದ ಗೋಪರಕ್ಕೆ ಸಿಡಿಲು ಬಡಿದಿದ್ದು,  ಗೋಪುರ ಜಖಂ ಆಗಿದೆ. ದೇವಸ್ಥಾನದಲ್ಲಿ ನಿಂತಿದ್ದ ಏಳೆಂಟು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಜನರು ಆತಂಕಕ್ಕೆ ಒಳಗಾಗಿದ್ರು.


ಸಿಡಿಲ ಬಡಿದು 23 ವರ್ಷದ ಯುವಕ ಸಾವು


ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಬಳಿ ಸಿಡಿಲು ಬಡಿದು 23 ವರ್ಷದ ಕೋಟ್ರೇಶ್ ಸಾವನ್ನಪ್ಪಿದ್ದಾನೆ. ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು,  ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಗಾಯಾಳು ಅನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.


Karnataka Weather Report 1st october 2022 mrq
ಕೃಷಿ ಭೂಮಿ ಜಲಾವೃತ


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


ಬೆಂಗಳೂರು 23-19, ಮೈಸೂರು 25-20, ಚಾಮರಾಜನಗರ 25-20, ರಾಮನಗರ 25-20, ಮಂಡ್ಯ 26-21, ಬೆಂಗಳೂರು ಗ್ರಾಮಾಂತರ 23-19, ಚಿಕ್ಕಬಳ್ಳಾಪುರ 23-18, ಕೋಲಾರ 25-21, ಹಾಸನ 23-19,  ಚಿತ್ರದುರ್ಗ 26-20, ಚಿಕ್ಕಮಗಳೂರು 23-18, ದಾವಣಗೆರೆ 26-21, ಶಿವಮೊಗ್ಗ 25-21, ಕೊಡಗು 22-17, ತುಮಕೂರು 24-19, ಉಡುಪಿ 28-24


ಮಂಗಳೂರು 27-23, ಉತ್ತರ ಕನ್ನಡ 25-21, ಧಾರವಾಡ 26-20, ಹಾವೇರಿ 26-21,  ಹುಬ್ಬಳ್ಳಿ 27-21, ಬೆಳಗಾವಿ 26-20, ಗದಗ 27-21, ಕೊಪ್ಪಳ 28-22, ವಿಜಯಪುರ 29-21,  ಬಾಗಲಕೋಟ 29-22 ,ಕಲಬುರಗಿ 31-22, ಬೀದರ್ 29-21, ಯಾದಗಿರಿ 31-23, ರಾಯಚೂರ 30-22 ಮತ್ತು ಬಳ್ಳಾರಿ 28-22


ಇದನ್ನೂ ಓದಿ:  Free Site: ಅಗಲಿದ ಮಗನ ಹೆಸರಲ್ಲಿ ಮಹಾನ್ ಕಾರ್ಯಕ್ಕೆ ಮುಂದಾದ ತಂದೆ-ತಾಯಿ; 40 ಬಡ ಕುಟುಂಬಕ್ಕೆ ಉಚಿತ ಸೈಟ್ ಹಂಚಿಕೆ!


ಕೊಪ್ಪಳದ ತಲ್ಲೂರು ಕೆರೆಗೆ ಜೀವಕಳೆ


ಕೊಪ್ಪಳದಲ್ಲಿ ಯಶೋಮಾರ್ಗದಿಂದ ಹೂಳೆತ್ತಿದ್ದ ಕೆರೆಗೆ ಜೀವಕಳೆ ಬಂದಿದೆ. 14 ವರ್ಷದ ನಂತರ ಯಲಬುರ್ಗಾದ ತಲ್ಲೂರು ಕೆರೆ ತುಂಬಿದೆ. 2016ರಲ್ಲಿ ನಟ ಯಶ್ ಅವರು ಯಶೋಮಾರ್ಗ ಫೌಂಡೇಷನ್​ನಿಂದ ಕೆರೆಯನ್ನು ಜೀಣೋದ್ಧಾರ ಮಾಡಿದ್ರು.


4 ಕೋಟಿ ವೆಚ್ಚದಲ್ಲಿ 96 ಎಕರೆ ವಿಸ್ತಾರದ ಕೆರೆ ಜೀಣೋದ್ಧಾರ ಮಾಡಿದ್ರು. ಸದ್ಯ ಕೆರೆ ಭರ್ತಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ನಟ ಯಶ್ ಮಾಡಿದ ಕೆಲಸಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.


Karnataka Weather Report 1st october 2022 mrq
ಚಿಕ್ಕಮಗಳೂರು ಮಳೆ


ಇದನ್ನೂ ಓದಿ: Bengaluru: ಬನಶಂಕರಿ ಅಮ್ಮನ ನವರಾತ್ರಿ ವಿಶೇಷ ಫೋಟೋ ಇಲ್ಲಿದೆ ನೋಡಿ


ಮತ್ತೆ ನದಿಗಳ ಒಳ ಹರಿವು ಹೆಚ್ಚಳ


ಇನ್ನುಳಿದಂತೆ ವಿಜಯಪುರ, ಕಲಬುರಗಿ, ಬೀದರ್, ಚಿತ್ರದುರ್ಗ ಭಾಗದಲ್ಲಿಯೂ ಮಳೆಯಾಗಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಇವತ್ತು ನಿಗಧಿತ ಪ್ರಮಾಣಕ್ಕಿಂತ ಅಧಿಕ ಮಳೆಯಾಗುವ ನಿರೀಕ್ಷೆಗಳಿವೆ.  ಈ ಹಿನ್ನೆಲೆ ನದಿ ತೀರಕ್ಕೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ. ಇತ್ತ ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿದ್ದು, ಕೃಷ್ಣ ನದಿಯ ಒಳಹರಿವು ಪ್ರಮಾಣ ಮತ್ತೆ ನಿಧಾನವಾಗಿ ಏರಿಕೆಯಾಗುತ್ತಿದೆ.

Published by:Mahmadrafik K
First published: