Karnataka Weather Report: ಕೆಲ ಭಾಗಗಳಲ್ಲಿ ಕೊಂಚ ಬ್ರೇಕ್ ನೀಡಿದ ವರುಣ; ದೇವಸ್ಥಾನ, ಸೇತುವೆಗಳು ಜಲಾವೃತ

Karnataka Weather: ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಗದೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಹೆಸರಾಂತ ನಾಗಕ್ಷೇತ್ರ‌ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಮಳೆ (Karnataka Rains) ಇಂದು ಕೊಂಚ ಇಳಿಮುಖವಾಗುವ ಸಾಧ್ಯತೆಗಳಿವೆ. ನಿರಂತರ ಮಳೆಯಿಂದಾಗಿ (Heavy Rainfall) ಕರುನಾಡಿನ ಜನತೆಗೆ ಸೂರ್ಯದೇವನ (Sun) ದರ್ಶನವೇ ಸಿಗುತ್ತಿಲ್ಲ. ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗಲಿದೆ.  ಇನ್ನುಳಿದಂತೆ ಕರಾವಳಿ, ಬೆಂಗಳೂರು, ಮೈಸೂರು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಮಳೆಯ ಜತೆ ಗಾಳಿಯ (Wind) ವೇಗ ಹೆಚ್ಚಾಗುತ್ತಿರುವ ಪರಿಣಾಮ ಚಳಿ ಪ್ರಮಾಣ (Cold Weather) ಸಹ ಕೊಂಚ ಏರಿಕೆಯಾದಂತೆ ಕಾಣಿಸುತ್ತಿದೆ. ನಿರಂತರ ಮಳೆಯಿಂದಾಗಿ ರೈತರು (Farmers) ಕೃಷಿ ಚಟುವಟಿಕೆಯಲ್ಲಿ (Agriculture Activities) ತೊಡಗಿಕೊಳ್ಳಲು ಆಗುತ್ತಿಲ್ಲ.

ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 28 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದ್ದು, ಜಿಟಿ ಜಿಟಿ ಮಳೆ ಮುಂದುವರಿಯಲಿದೆ. ಇಡೀ ದಿನ ಮೋಡ ಕವಿದ ವಾತಾವರಣದ ಜೊತೆ ಸುಳಿಗಾಳಿ ಸಹ ಬೀಸಲಿದೆ. ಬದಲಾದ ಹವಾಮಾನದಿಂದಾಗಿ ರಾಜಧಾನಿಯಲ್ಲಿ ಮಕ್ಕಳು, ವಯೋವೃದ್ಧರು ಸೇರಿದಂತೆ ಎಲ್ಲಾ ವಯೋಮಾನದ ಜನರು ಶೀತ ಸಂಬಂಧಿಕ ಲಕ್ಷಣಗಳಿಂದ ಬಳಲುತ್ತಿದ್ದಾರೆ

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 28-19, ಮೈಸೂರು 28-19, ಚಾಮರಾಜನಗರ 28-20, ರಾಮನಗರ 29-20, ಮಂಡ್ಯ 29-20, ಬೆಂಗಳೂರು ಗ್ರಾಮಾಂತರ 28-19, ಚಿಕ್ಕಬಳ್ಳಾಪುರ 29-19, ಕೋಲಾರ 30-20, ಹಾಸನ 26-19, ಚಿತ್ರದುರ್ಗ 28-20, ಚಿಕ್ಕಮಗಳೂರು 24-18, ದಾವಣಗೆರೆ 29-21, ಶಿವಮೊಗ್ಗ 27-21, ಕೊಡಗು 22-18, ತುಮಕೂರು 28-19

ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 26-21, ಧಾರವಾಡ 26-20, ಹಾವೇರಿ 28-21, ಹುಬ್ಬಳ್ಳಿ 27-21, ಬೆಳಗಾವಿ 25-20, ಗದಗ 29-21, ಕೊಪ್ಪಳ 30-22, ವಿಜಯಪುರ 29-21, ಬಾಗಲಕೋಟ 30-22 , ಕಲಬುರಗಿ 30-22, ಬೀದರ್ 28-21, ಯಾದಗಿರಿ 31-23, ರಾಯಚೂರ 32-23 ಮತ್ತು ಬಳ್ಳಾರಿ 32-22

ಇದನ್ನೂ ಓದಿ: Curd Price: ಮೊಸರು-ಮಜ್ಜಿಗೆ ಬೆಲೆ ನಿನ್ನೆ ಏರಿಕೆ, ಇಂದು ಇಳಿಕೆ; KMFನಿಂದ ನೂತನ ದರ ಜಾರಿ

ಕುಮಾರಧಾರಾ ಸ್ನಾನಘಟ್ಟ ಮುಳುಗಡೆ

ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಗದೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಹೆಸರಾಂತ ನಾಗಕ್ಷೇತ್ರ‌ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಈ ಹಿನ್ನೆಲೆ ಭಕ್ತರ ಪವಿತ್ರ ಸ್ನಾನಕ್ಕೆ ತೊಂದರೆ ಆಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರು ಸ್ನಾನಘಟ್ಟಕ್ಕೆ ಇಳಿಯದಂತೆ ಬ್ಯಾರಿಕೇಡ್ ಹಾಕಲಾಗಿದೆ.

ಹಾಸನದ ಹಾಲೇಬೇಲೂರು ಕೆರೆ ಏರಿ ಕುಸಿತ

ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸಕಲೇಶಪುರ ತಾಲ್ಲೂಕಿನ ಹಾಲೇಬೇಲೂರು ಗ್ರಾಮದಲ್ಲಿರುವ ಕೆರೆಯ ಏರಿ ಕುಸಿತವಾಗಿದೆ. ಸುಮಾರು 23 ಎಕರೆ ವ್ಯಾಪ್ತಿಯಲ್ಲಿ ಈ ಕೆರೆ ವ್ಯಾಪಿಸಿದ್ದು, ಗ್ರಾಮಸ್ಥರು ಜೆಸಿಬಿ ಮೂಲಕ ಕೆರೆಯ ಕೋಡಿ ಪಕ್ಕ ಅಗೆದು ನೀರು ಹೊರ ಹರಿಸುತ್ತಿದ್ದಾರೆ. ಹಾಲೇಬೇಲೂರು ಗ್ರಾಮಸ್ಥರೇ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಟಾರ್ಪಾಲ್ ಮುಚ್ಚಿ ಏರಿ ಕುಸಿಯದಂತೆ ತಡೆಗೋಡೆ ನಿರ್ಮಿಸುತ್ತಿದ್ದಾರೆ.

ಛಾಯಾ ಭಗವತಿ ದೇವಸ್ಥಾನ ಜಲಾವೃತ

ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಈ ಹಿನ್ನೆಲೆ ಕೃಷ್ಣಾ ನದಿ ದಡದಲ್ಲಿರುವ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ. ನೀರು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದೆ. ಈ ದೇವಸ್ಥಾನ ಬಸವ ಸಾಗರ ಜಲಾಶಯದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿದೆ. ಗರ್ಭಗುಡಿ ಮುಳುಗಡೆಯಾದ ಪರಿಣಾಮ ಮೆಟ್ಟಿಲುಗಳ ಮೇಲೆ ವಿಗ್ರಹ ಇರಿಸಿ ಪೂಜೆ ಮಾಡಲಾಗುತ್ತಿದೆ.

ಇದನ್ನೂ ಓದಿ:  Wife Murder: 10 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟ್ರಿ; ಕುಡಿದ ಮತ್ತಲ್ಲಿ ಬಾಯ್ಬಿಟ್ಟ ಭಯಾನಕ ಸ್ಟೋರಿ

ತುಂಬಿದ ಹಳ್ಳ, ಸಂಪರ್ಕ ಕಡಿತ

ಚಿಕ್ಕಮಗಳೂರು : ಧಾರಾಕಾರ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ತರೀಕೆರೆ ತಾಲೂಕಿನ ತ್ಯಾಗದಭಾಗಿ ತಾಂಡ್ಯ-ಸಿದ್ದಾಪುರ ನಡುವಿನ ಸಂಪರ್ಕ ಕಡಿತವಾಗಿದೆ. ಕಳೆದ ಮೂರು ದಿನಗಳಿಂದ ಕಡಿತಗೊಂಡಿರುವ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಶಾಲಾ ಕಾಲೇಜುಗಳಿಗೆ ಹೋಗಲಾರದೇ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.
Published by:Mahmadrafik K
First published: