• Home
  • »
  • News
  • »
  • state
  • »
  • Karnataka Weather Report: ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್; ಇಂದು ಬೆಂಗಳೂರಿನಲ್ಲಿ ಮಳೆ ಆಗುತ್ತಾ?

Karnataka Weather Report: ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್; ಇಂದು ಬೆಂಗಳೂರಿನಲ್ಲಿ ಮಳೆ ಆಗುತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Weather Report: ಮೈಸೂರು ಭಾಗದಲ್ಲಿ ತುಂತುರು ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ನಗರದಲ್ಲಿಯೂ ಮಳೆಯ ಸಿಂಚನ ಇರಲಿದೆ.

  • Share this:

Karnataka Weather Report: ನಿನ್ನೆಯಿಂದ ತಗ್ಗಿದ್ದ ವರುಣನ (Rainfall) ಅಬ್ಬರ ಇಂದು ಹೆಚ್ಚಾಗುವ ಸಾಧ್ಯತೆಗಳಿವೆ. ಕರಾವಳಿ (Coastal), ಮಲೆನಾಡು (Malenadu) ಮತ್ತು ಉತ್ತರ ಕರ್ನಾಟಕದ (North Karnataka) ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯ ಹವಾಮಾನ ಇಲಾಖೆ ಇಂದು ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಿದೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಬೆಳಗಾವಿಯಲ್ಲಿ ಇಂದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಇದರ ಜೊತೆ ಉತ್ತರ ಒಳನಾಡಿನ ಕಲಬರುಗಿ  ಮತ್ತು ಬೀದರ್ ನಲ್ಲಿಯೂ ಯೆಲ್ಲೋ ಅಲರ್ಟ್ ಇದೆ.


ಇನ್ನುಳಿದ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ. ಮೈಸೂರು ಭಾಗದಲ್ಲಿ ತುಂತುರು ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ನಗರದಲ್ಲಿಯೂ ಮಳೆಯ ಸಿಂಚನ ಇರಲಿದೆ.


ಜಿಲ್ಲಾವಾರು ಹವಾಮಾನ ವರದಿ ( ಗರಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)


ಬೆಂಗಳೂರು 27-19, ಮೈಸೂರು 28-20, ಚಾಮರಾಜನಗರ 28-20, ರಾಮನಗರ 28-20, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 27-19, ಕೋಲಾರ 29-20, ಹಾಸನ 25-19, ಚಿತ್ರದುರ್ಗ 27-21, ಚಿಕ್ಕಮಗಳೂರು 23-18, ದಾವಣಗೆರೆ 27-21, ಶಿವಮೊಗ್ಗ 26-21, ಕೊಡಗು 22-17, ತುಮಕೂರು 28-19


ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 24-21, ಧಾರವಾಡ 24-20, ಹಾವೇರಿ 26-21, ಹುಬ್ಬಳ್ಳಿ 25-21, ಬೆಳಗಾವಿ 23-20, ಗದಗ 26-21, ಕೊಪ್ಪಳ 28-22, ವಿಜಯಪುರ 26-21, ಬಾಗಲಕೋಟ 27-22, ಕಲಬುರಗಿ 26-22, ಬೀದರ್ 24-20, ಯಾದಗಿರಿ 28-22, ರಾಯಚೂರ 27-21ಮತ್ತು ಬಳ್ಳಾರಿ 26-21


ಇದನ್ನೂ ಓದಿ:  South Karnataka: ಮಳೆಯಿಂದ ದಕ್ಷಿಣ ಕರ್ನಾಟಕದ ಹೆದ್ದಾರಿಗಳು ಬಂದ್; ವ್ಯಾಪಾರಿಗಳಿಗೆ ಭಾರೀ ನಷ್ಟ


ಹೆಚ್ಚಾಗಲಿದೆ ಗಾಳಿಯ ವೇಗ


ಕರಾವಳಿ ಭಾಗದಲ್ಲಿ ಗಾಳಿಯ ವೇಗ ಸದ್ಯ ಗಂಟೆಗೆ 40 ಕಿ. ಮೀ ಇದೆ. ಇದು ಇಂದು ಗಂಟೆಗೆ 50 ರಿಂದ 60 ಕಿಮೀ ಇರಲಿದೆ. ಸಮುದ್ರಕ್ಕೆ ಇಳಿಯುವ ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.


ಶಾಲಾ ಕಟ್ಟಡಕ್ಕೆ ಸಿಡಿಲು ಬಡಿದು 9 ಜನರಿಗೆ ಗಾಯ


ಕೊಪ್ಪಳದ ಕುಷ್ಟಗಿ ತಾ. ಕೊಡತಗೇರಿ ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಸಿಡಿಲು ತಾಗಿ 9 ಜನರು ಗಾಯಗೊಂಡಿದ್ದಾರೆ. ಅಬ್ಬರದ ಮಳೆಯ ವೇಳೆ ರಕ್ಷಣೆಗೆ ಶಾಲಾ ಕಟ್ಟದಲ್ಲಿ ಜನರು ನಿಂತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಶಾಲಾ ಮೇಲ್ಛಾವಣಿಗೆ ಸಿಡಿಲು ಬಡಿದಿದ್ದರಿಂದ ಜನರಿಗೆ ಕಲ್ಲಿನ ಚೂರುಗಳು ಸಿಡಿದ ಪರಿಣಾಮ ಗಾಯಗೊಂಡಿದ್ದಾರೆ.


ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲ್ಲಪ್ಪ ಮಂಗಳಪ್ಪ ಪೂಜಾರ,  ಮಲ್ಲಪ್ಪ ಹೋಬಳೆಪ್ಪ ಗೌಡರ,  ಹನುಮಪ್ಪ ಬಾಳಪ್ಪ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಹನುಮನಾಳ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಭಾನುವಾರ ಈ ಘಟನೆ ನಡೆದಿದ್ದರಿಂದ ಭಾರೀ ಅನಾಗಹುತವೊಂದು ತಪ್ಪಿದೆ.


ರಸ್ತೆ ಮೇಲೆ 5 ಅಡಿಯಷ್ಟು ನೀರು


ಇನ್ನು ಮಡಿಕೇರಿ ತಾಲ್ಲೂಕಿನ ಚೆರಿಯಪರಂಬು ಗ್ರಾಮ ಬಹುತೇಕ ಜಲಾವೃತವಾಗಿದ್ದು, ಕಲ್ಲುಮೊಟ್ಟೆ ರಸ್ತೆ ಮೇಲೆ ಐದು ಅಡಿಯಷ್ಟು ಎತ್ತರದ ಪ್ರವಾಹದ ನೀರು ಹರಿಯುತ್ತಿದೆ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ಪ್ರವಾಹದ ನೀರಿನಲ್ಲಿ ಓಡಾಡುವುದಕ್ಕೂ ಸಾಧ್ಯವಾಗದೆ ಜನರು ತೆಪ್ಪ ಬಳಸಿ ಹಗ್ಗ ಕಟ್ಟಿ ಅದರ ಸಹಾಯದಿಂದ ಓಡಾಡುತ್ತಿದ್ದಾರೆ.


ಅಡಿಕೆ, ಕಾಫಿ ತೋಟ ಮುಳುಗಡೆ


ವಿರಾಜಪೇಟೆ ತಾಲ್ಲೂಕಿನ ಭೇತ್ರಿಯಲ್ಲೂ ಕಾವೇರಿ ನದಿ ನೀರು ನುಗ್ಗಿ ಹತ್ತಾರು ಎಕರೆ ಪ್ರದೇಶದ ಕಾಫಿ, ಅಡಿಕೆ ತೋಟಗಳು ಮುಳುಗಡೆಯಾಗಿವೆ. ಅಡಿಕೆ ತೋಟಗಳಲ್ಲಿ ಏಳರಿಂದ ಎಂಟು ಅಡಿ ಎತ್ತರದ ಪ್ರವಾಹದ ನೀರು ನಿಂತಿದೆ.


ಇದನ್ನೂ ಓದಿ:  GST Rate Hike: ಜನರ ಮೇಲೆ ಕೇಂದ್ರದ GST ಬರೆ: ಸೋಮವಾರದಿಂದ ಈ ಎಲ್ಲಾ ವಸ್ತುಗಳ ಬೆಲೆ ಏರಿಕೆ!


ಹೊನ್ನಾವರದಲ್ಲಿ ಭಾರೀ ಮಳೆ, ಪ್ರವಾಹ


ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆ ಶನಿವಾರವು ಕೂಡ ಬಿಡುವು ಕೊಡದ ಕಾರಣ ಇಡೀ ಹೊನ್ನಾವರ ಜಲಾಮಯವಾಗಿತ್ತು. ನದಿಯಲ್ಲಿ ನೀರಿನ ಹರಿಯುವಿಕೆ ಜಾಸ್ತಿಯಾಗಿ ಮತ್ತೆ ಪ್ರವಾಹ ಉಂಟಾಗಿದೆ.

Published by:Mahmadrafik K
First published: