Karnataka Weather Report: ಜಲಾಶಯಗಳು ಭರ್ತಿ,ಅಲ್ಲಲ್ಲಿ ಮಳೆ; ಇಂದಿನ ಹವಾಮಾನ ವರದಿ ಇಲ್ಲಿದೆ

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೃಷ್ಣಾ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ನದಿ ತೀರಕ್ಕೆ ಜಾನುವಾರುಗಳನ್ನು ಬಿಡದಂತೆ ಡಂಗೂರ ಮೂಲಕ ಸೂಚನೆ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ಬೆಳಗಾವಿ, ಯಾದಗಿರಿ, ಕಲಬುರಗಿ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಭಾಗದಲ್ಲಿ ತುಂತುರು ಮಳೆಯಾಗಲಿದೆ. ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿದ್ದ ಮಳೆ (Rain) ಬ್ರೇಕ್ ನೀಡಿದ ಹಿನ್ನೆಲೆ ರೈತರು (Farmers) ಕೃಷಿ ಚಟುವಟಿಕೆಗಳಲ್ಲಿ (Agriculture Activities) ತೊಡಗಿಕೊಂಡಿದ್ದಾರೆ. ಎರಡು ವಾರಗಳಿಂದ ಏರಿಕೆಯಾಗಿದ್ದ ತರಕಾರಿ ಬೆಲೆ (Vegetable Price) ಸಹ ಇಳಿದಿದೆ. ಮಹಾರಾಷ್ಟ್ರದಲ್ಲಿ (Maharashtra Rains) ನಿರಂತರ ಸುರಿಯುತ್ತಿರುವ ಮಳೆಯಿಂದ ಕೊಯ್ನಾ ಜಲಾಶಯ (Koyna Dam) ಭರ್ತಿಯಾಗಿದ್ದು, ಕೃಷ್ಣಾ ನದಿಗೆ (Krishna Rivers) 1 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರು ಹರಿಬಿಡಲಾಗುತ್ತಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೃಷ್ಣಾ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ನದಿ ತೀರಕ್ಕೆ ಜಾನುವಾರುಗಳನ್ನು ಬಿಡದಂತೆ ಡಂಗೂರ ಮೂಲಕ ಸೂಚನೆ ನೀಡಲಾಗಿದೆ.

ಇನ್ನು ರಾಜಧಾನಿಯಲ್ಲಿ (Bengaluru Weather) ಬಿಸಿಲು ಮತ್ತು ಮೋಡಗಳ ಮಧ್ಯೆ ಆಟ ನಡೆಯುತ್ತಿದೆ. ಸಂಜೆ ವೇಳೆಗೆ ಸುಳಿಗಾಳಿ ಹೆಚ್ಚಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 29-19, ಮೈಸೂರು 29-20,ಚಾಮರಾಜನಗರ 30-19, ರಾಮನಗರ 31-20, ಮಂಡ್ಯ 31-20, ಬೆಂಗಳೂರು ಗ್ರಾಮಾಂತರ 29-19, ಚಿಕ್ಕಬಳ್ಳಾಪುರ 29-19, ಕೋಲಾರ 30-20, ಹಾಸನ 27-19, ಚಿತ್ರದುರ್ಗ 29-20, ಚಿಕ್ಕಮಗಳೂರು 26-18, ದಾವಣಗೆರೆ 28-21, ಶಿವಮೊಗ್ಗ 28-21, ಕೊಡಗು 24-18

ತುಮಕೂರು 29-19, ಉಡುಪಿ 29-24, ಮಂಗಳೂರು 29-24, ಉತ್ತರ ಕನ್ನಡ 28-21, ಧಾರವಾಡ 27-20, ಹಾವೇರಿ 29-21, ಹುಬ್ಬಳ್ಳಿ 28-21, ಬೆಳಗಾವಿ 27-20, ಗದಗ 31-21, ಕೊಪ್ಪಳ 31-21, ವಿಜಯಪುರ 31-21, ಬಾಗಲಕೋಟ 31-22, ಕಲಬುರಗಿ 31-21, ಬೀದರ್ 28-21, ಯಾದಗಿರಿ 32-23, ರಾಯಚೂರ 32-23 ಮತ್ತು ಬಳ್ಳಾರಿ 32-22

Karnataka Weather Report 18 September 2022 mrq
ಬೆಂಗಳೂರು ಮಳೆ


ಇದನ್ನೂ ಓದಿ:  Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

ನದಿಗಳಿಗೆ ಬಾಗಿನ ಅರ್ಪಿಸುವಂತೆ ರೈತರ ಮನವಿ

ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Minister, Major and Medium Irrigation Department) ಬೆಳಗಾವಿ ಉಸ್ತುವಾರಿ ಸಚಿವರೇ ಆಗಿದ್ದಾರೆ. ಆದರೇ ಜಿಲ್ಲೆ ಜಲಾಶಯಗಳು ಭರ್ತಿಯಾಗಿದ್ದು, ಬಾಗಿನ ಅರ್ಪಿಸುವ ಸಂಪ್ರದಾಯ ಕಣ್ಮರೆಯಾಗಿದೆ. ಜೀವನಾಡಿಗಳಿಗೆ ಗೌರವ ಸಲ್ಲಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ. ವರ್ಷವೀಡಿ ಬೆಳೆ, ಕುಡಿಯುವ ನೀರು ಪೂರೈಕೆ ಮಾಡಲು ಆಧಾರವಾಗಿರೋ ಜಲಾಶಯಕ್ಕೆ ಕನಿಷ್ಠ ಗೌರವ ಸಲ್ಲಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ವಾಡಿಕೆಗಿಂತ ಹೆಚ್ಚಿನ ಮಳೆ, ಜಲಾಶಯಗಳು ಭರ್ತಿ

ಈ ಬಾರಿ ವಾಡಿಕೆಗಿಂತಲೂ ಹೆಚ್ಚಾಗಿ ಸುರಿದ ಮಳೆ ಪ್ರಭಾವದಿಂದಾಗಿ (Karnataka Rains) ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಬಹುತೇಕ ಜಲಾಶಯಗಳು (Karnataka Dams Water Level) ಭರ್ತಿಯಾಗಿವೆ. ಕೆಲ ದಿನಗಳ ಹಿಂದೆ ಜಾಸ್ತಿಯಾಗಿದ್ದ ಒಳಹರಿವಿನ ಪ್ರಮಾಣ ಪ್ರಸ್ತುತ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಕಡಿಮೆಯಾಗಿದ್ದ ಮಳೆ ಮತ್ತೆ ಕೆಲ ದಿನಗಳಿಂದ ರಾಜ್ಯದ ಅಲ್ಲಲ್ಲಿ ಸುರಿಯುತ್ತಿದೆ. ಹಿಂದೆ ಮಳೆಯ ಆರ್ಭಟ ಸಾಕಷ್ಟಿದ್ದ ಕಾರಣ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿತ್ತು.

Karnataka Weather Report 18 September 2022 mrq
ಕೃಷಿ ಭೂಮಿ ಜಲಾವೃತ


ಇದನ್ನೂ ಓದಿ:  Narendra Modi Birthday: ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಮೋದಿ ಹುಟ್ಟುಹಬ್ಬ ಆಚರಣೆ; ರಕ್ತದಾನ ಶಿಬಿರ ಆಯೋಜನೆ

ಉಮರಾಣಿ ಸೇತುವೆ ಮುಳುಗಡೆ, ಏಳು ಗ್ರಾಮಗಳಿಗೆ ಪ್ರವಾಹ ಅತಂಕ

ಭೀಮಾ ನದಿಯಲ್ಲಿ ಪ್ರವಾಹ (Bhima River Flood) ಹೆಚ್ಚಾದ ಹಿನ್ನೆಲೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಸೇತುವೆ (Umarani Bridge Submerge) ಮುಳುಗಡೆಯಾಗಿದೆ. ಉಮರಾಣಿ ಸೇತುವೆ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕ್ಷಣ ಕ್ಷಣಕ್ಕೂ ಭೀಮಾ ನದಿಯಲ್ಲಿ ಹರಿವು ಹೆಚ್ಚಾಗುತ್ತಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಉಮರಾಣಿ ಸೇತುವೆ ವ್ಯಾಪ್ತಿಯ ಏಳೆಂಟು ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದ್ದು, ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.
Published by:Mahmadrafik K
First published: