Karnataka Weather Report: ಅಲ್ಲಲ್ಲಿ ತುಂತುರು ಮಳೆ (Rain) ಹೊರತುಪಡಿಸಿದ್ರೆ ರಾಜ್ಯದಲ್ಲಿ ವರುಣನ ಅಬ್ಬರ ಕಡಿಮೆಯಾಗಿದೆ. ಭೂಕುಸಿತದ (Landslide) ಆತಂಕದಲ್ಲಿದ್ದ ಕೊಡಗು (Kodagu), ಚಿಕ್ಕಮಗಳೂರು (Chikkamagluru) ಭಾಗದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇಷ್ಟು ದಿನ ಮಳೆ ನಿಲ್ಲುತ್ತಿಲ್ಲ ಎಂದು ಹೇಳುತ್ತಿದ್ದ ಜನರಿಗೆ ಸೂರ್ಯದೇವ (Sun) ಚುರುಕು ಮುಟ್ಟಿಸುತ್ತಿದ್ದಾನೆ. ಬೆಳಗ್ಗೆ 10 ಗಂಟೆಯ ನಂತರ ಪ್ರಖರಗೊಳ್ಳುವ ಸೂರ್ಯನ ಶಾಖಕ್ಕೆ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇಂದು ಉತ್ತರ, ದಕ್ಷಿಣ ಒಳನಾಡು ಭಾಗದಲ್ಲಿ ಒಣಹವೆ ಇರಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)
ಬೆಂಗಳೂರು 29-19, ಮೈಸೂರು 31-20, ಚಾಮರಾಜನಗರ 31-21, ರಾಮನಗರ 31-20, ಮಂಡ್ಯ 31-20, ಬೆಂಗಳೂರು ಗ್ರಾಮಾಂತರ 29-19, ಚಿಕ್ಕಬಳ್ಳಾಪುರ 29-19, ಕೋಲಾರ 31-21. ಹಾಸನ 27-19, ಚಿತ್ರದುರ್ಗ 29-20, ಚಿಕ್ಕಮಗಳೂರು 26-18, ದಾವಣಗೆರೆ 29-21, ಶಿವಮೊಗ್ಗ 28-21, ಕೊಡಗು 25-17,ತುಮಕೂರು 29-20
ಉಡುಪಿ 29-24, ಮಂಗಳೂರು 29-24, ಉತ್ತರ ಕನ್ನಡ 28-20, ಧಾರವಾಡ 27-19, ಹಾವೇರಿ 29-21, ಹುಬ್ಬಳ್ಳಿ 28-21, ಬೆಳಗಾವಿ 26-19, ಗದಗ 29-21, ಕೊಪ್ಪಳ 32-22, ವಿಜಯಪುರ 30-21, ಬಾಗಲಕೋಟ 31-22 , ಕಲಬುರಗಿ 31-22, ಬೀದರ್ 28-21, ಯಾದಗಿರಿ 31-22, ರಾಯಚೂರ 32-23 ಮತ್ತು ಬಳ್ಳಾರಿ 32-23
ಸಂತಸದಲ್ಲಿ ರೈತ ವರ್ಗ
ನಿರಂತರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ. ಮತ್ತೊಂದೆಡೆ ಕೆರೆ ಕುಂಟೆಗಳೆಲ್ಲಾ ಭರ್ತಿಯಾಗಿದ್ದು, ರೈತ ವರ್ಗ ಸಂತಸದಲ್ಲಿದೆ. ಇದೇ ರೀತಿ ಹಿಂಗಾರು ಮಳೆಯಾಗಲಿ ಎಂದು ಕೃಷಿಕರು ವರುಣ ದೇವನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!
ಮಹಾರಾಷ್ಟ್ರದಲ್ಲಿ ಭಾರೀ ಮಳೆ
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೃಷ್ಣಾ ಮತ್ತು ಭೀಮಾ ನದಿಗಳ ಒಳ ಹರಿವು ಹೆಚ್ಚಳವಾಗುತ್ತಿದೆ. ಹಂತ ಹಂತವಾಗಿ ಆಲಮಟ್ಟಿ, ನಾರಾಯಣಪುರ ಬಸವ ಸಾಗರ ಜಲಾಶಯಗಳಿಂದ ನದಿಗೆ ನೀರನ್ನು ಬಿಡಲಾಗುತ್ತಿದೆ. ನದಿ ತೀರಕ್ಕೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ.
ನದಿ ತೀರದ ದೇವಸ್ಥಾನಗಳು ಮುಳುಗಡೆ
ಭೀಮಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ನದಿ ತೀರದ ದೇವಸ್ಥಾನಗಳು ಮುಳುಗಡೆಯಾಗಿವೆ. ಮುಂಜಾಗ್ರತ ಕ್ರಮವಾಗಿ ಭಕ್ತರು ಪುಣ್ಯಸ್ನಾನಕ್ಕೆ ನದಿಗೆ ಇಳಿಯದಂತೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.
ವಾಡಿಕೆಗಿಂತ ಅಧಿಕ ಮಳೆ
ಆನೇಕಲ್ (Anekal) ತಾಲ್ಲೂಕಿನಲ್ಲಿ ವಾಡಿಕೆ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ (Heavy Rainfall) ಈ ಬಾರಿ ರಾಗಿ (Paddy) ಬಿತ್ತನೆ ಕುಂಠಿತವಾಗಿದೆ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಸುರಿದಿದ್ದರಿಂದ ಸಕಾಲಕ್ಕೆ ರೈತರು (Farmers) ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಕಳೆದ ಒಂದು ವಾರದಿಂದ ಮಳೆ ಬಿಡುವು ನೀಡಿದ್ದು, ಬಿತ್ತನೆಗಾಗಿ ಜಮೀನು ಹದಗೊಳಿಸಬಹುದಾಗಿದೆ. ಸದ್ಯ ಮಳೆ ಎಡೆಬಿಡದೆ ಸುರಿದಿದ್ದರಿಂದ ಭೂಮಿ (Agriculture Land) ಬಂಡೆಯಂತಾಗಿದೆ. ಈಗ ಬಿತ್ತನೆ ಮಾಡಿದರು ರಾಗಿ ಬೆಳೆ (Paddy Crop) ಉತ್ತಮವಾಗಿ ಬೆಳೆಯುವುದಿಲ್ಲ.
ಹಾಗಾಗಿ ಈಗಾಗಲೇ ಬಿತ್ತನೆ ಸಮಯ ಮುಗಿದಿದ್ದು, ಈಗಲೂ ಬಿತ್ತನೆ ಮಾಡಲು ಜಮೀನು ಹದ ಮಾಡಿ ಮಳೆ ಸುರಿದು ಭೂಮಿ ತೇವ ಆದ ಬಳಿಕ ಬಿತ್ತನೆ ಮಾಡಿದರೆ ಒಳಿತು ಎಂದು ರೈತ ರಾಜಗೋಪಾಲ್ ಹೇಳುತ್ತಾರೆ.
ಪ್ರತಿ ವರ್ಷ ಅಗಸ್ಟ್ ತಿಂಗಳು ಕೊನೆ ವಾರದ ಹೊತ್ತಿಗೆ ಆನೇಕಲ್ ತಾಲ್ಲೂಕಿನ ಬಹುತೇಕ ಎಲ್ಲಾ ರೈತರು ಬಿತ್ತನೆ ಚಟುವಟಿಕೆಗಳು ಮುಗಿಸುತ್ತಿದ್ದರು. ಆದ್ರೆ ಈ ವರ್ಷ ಆಗಸ್ಟ್ ಕೊನೆ ವಾರ ಸಮೀಪಿಸುತ್ತಿದ್ದರೂ ಅರ್ಧದಷ್ಟು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ