Karnataka Weather Report: ಮುಂದಿನ ಮೂರು ಈ ಭಾಗದಲ್ಲಿ ಮಳೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ

ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1,60,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸುರಪುರ, ಶಹಾಪುರ, ಹುಣಸಗಿ, ವಡಗೇರಾ ತಾಲೂಕಿನ 35 ಹಳ್ಳಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು SP ಡಾ.ಸಿ.ಬಿ.ವೇದಮೂರ್ತಿ ಸೂಚನೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಕರಾವಳಿ ಜಿಲ್ಲೆಗಳಲ್ಲಿ (Coastal District) ಮುಂದಿನ ಮೂರು ದಿನ ಮಳೆಯಾಗುವ (Rainfall)ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಎಲ್ಲಾ ನದಿಗಳು (Rivers) ತುಂಬಿ ಹರಿಯುತ್ತಿವೆ. ಜಲಾಶಯಗಳಿಂದ (Dams) ಅಪಾರ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದ್ದು, ನದಿ ತೀರಕ್ಕೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ (Western Hills) ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯ (Belagavi) ಸಪ್ತನದಿಗಳು ಭರ್ತಿಯಾಗಿದ್ದು, ಪ್ರವಾಹದ (Flood) ಆತಂಕ ಎದುರಾಗಿದೆ. ಇನ್ನೂ ರಾಜ್ಯದಲ್ಲಿ ಇಂದು ಸಹ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಬಿಟ್ಟು ಬಿಟ್ಟು ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-19, ಮೈಸೂರು 27-20, ಚಾಮರಾಜನಗರ 27-21, ರಾಮನಗರ 28-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 27-18, ಕೋಲಾರ 28-21, ಹಾಸನ 24-19, ಚಿತ್ರದುರ್ಗ 27-21, ಚಿಕ್ಕಮಗಳೂರು 23-18, ದಾವಣಗೆರೆ 27-21, ಶಿವಮೊಗ್ಗ 26-21, ಕೊಡಗು 21-17, ತುಮಕೂರು 27-20

ಉಡುಪಿ 28-24, ಮಂಗಳೂರು 27-24, ಉತ್ತರ ಕನ್ನಡ 24-21, ಧಾರವಾಡ 25-21, ಹಾವೇರಿ 27-22, ಹುಬ್ಬಳ್ಳಿ 26-21, ಬೆಳಗಾವಿ 24-20, ಗದಗ 27-21, ಕೊಪ್ಪಳ 29-22, ವಿಜಯಪುರ 28-22, ಬಾಗಲಕೋಟ 29-22 , ಕಲಬುರಗಿ 29-22, ಬೀದರ್ 28-21, ಯಾದಗಿರಿ 30-22, ರಾಯಚೂರ 31-23 ಮತ್ತು ಬಳ್ಳಾರಿ 30-23

ಇದನ್ನೂ ಓದಿ:  Jog Falls Tour Package: ಕೆಎಸ್​ಆರ್​ಟಿಸಿ ಸ್ಪೆಶಲ್ ಆಫರ್! ಜೋಗ ಜಲಪಾತಕ್ಕೆ ಹೋಗಿಬನ್ನಿ

ಕೃಷ್ಣಾ ನದಿಯ ತೀರದ 35 ಹಳ್ಳಿ ಜನರು ಎಚ್ಚರಿಕೆ ಸಂದೇಶ

ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1,60,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸುರಪುರ, ಶಹಾಪುರ, ಹುಣಸಗಿ, ವಡಗೇರಾ ತಾಲೂಕಿನ 35 ಹಳ್ಳಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು SP ಡಾ.ಸಿ.ಬಿ.ವೇದಮೂರ್ತಿ ಸೂಚನೆ ನೀಡಿದ್ದಾರೆ.

ಸ್ಥಳೀಯರು ಕೃಷ್ಣಾ ಹಾಗೂ ಭೀಮಾ ನದಿಯೊಳಗೆ ಮೀನು ಹಿಡಿಯಲು ಹೋಗಬಾರದು. ನೀರು ನೋಡಿ ಸೆಲ್ಫಿ ತೆಗೆಸಿಕೊಳ್ಳುವ ದುಸ್ಸಾಹಸ ಮಾಡಬೇಡಿ. ದಯವಿಟ್ಟು ಇಂತಹ ಸಾಹಸ ಮಾಡಿ ಜೀವಕ್ಕೆ ತೊದರೆಕೊಳ್ಳಬೇಡಿ. ರೈತರು ನದಿ ತೀರದಲ್ಲಿರುವ ಐಪಿಸೆಟ್ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ. ಜಾನುವಾರುಗಳನ್ನು ಹಾಗೂ ಮಕ್ಕಳಿಗೆ ಯಾರನ್ನು ಬಿಡಬೇಡಿ ಎಂದು ವೇದಮೂರ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 ನಿರಂತರ ಮಳೆಗೆ ಕುಸಿದ ರಾಷ್ಟ್ರೀಯ ಹೆದ್ದಾರಿ

ನಿರಂತರ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸೂಳೆಮುರ್ಕಿ ಕ್ರಾಸ್ ಬಳಿರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಕುಸಿತ ಕಂಡಿದೆ. ಹೊನ್ನಾವರದಿಂದ ಸಾಗರಕ್ಕೆ ತೆರಳುವ ರಸ್ತೆ ಇದಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆ ಸಂಚಾರ ಬಂದ್ ಮಾಡಿದ್ದಾರೆ.

ಗೇರುಸೊಪ್ಪ ಗ್ರಾಮದಿಂದ ಮಾವಿನಗುಂಡಿ ಗ್ರಾಮದವರೆಗೆ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗವಾಗಿ ತೆರಳಲು ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Tungabhadra River: ತುಂಗಭದ್ರೆಯ ಒಡಲಲ್ಲಿ ನೀರುನಾಯಿಗಳ ಸಂಸಾರ, ಅಪರೂಪದ ಜೀವ ಸಂಕುಲಕ್ಕೆ ಜನರಿಂದ ಸಂಚಕಾರ!

ಮಾರ್ಕಂಡೇಯ ನದಿ ಒಳ ಹರಿವು ಹೆಚ್ಚಳ

ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ. ಮಾರ್ಕಂಡೇಯ ನದಿಯ ಒಳ ಹರಿವು ಹೆಚ್ಚಾಗಿದೆ. ಮಾರ್ಕಂಡೇಯ ನದಿ ತೀರದ ಗ್ರಾಮಗಳ ಕೃಷಿ ಜಮೀನಿಗೆ ನೀರು ನುಗ್ಗಿದೆ. ಅಂಬೇವಾಡಿ, ಅಲತಗಾ ಕಂಗ್ರಾಳಿ ಕೆ.ಹೆಚ್. ಗ್ರಾಮಗಳ ಬಳಿ ಜಮೀನಿಗೆ ನೀರು ನುಗ್ಗಿದ್ದು, ಕಬ್ಬು, ಮೆಕ್ಕೆಜೋಳ, ಭತ್ತ, ತರಕಾರಿ ಬೆಳೆಗಳು ಜಲಾವೃತಗೊಂಡಿವೆ. ಬೆಳೆಗಳು ಜಲಾವೃತದಿಂದ ಬೆಳಗಾವಿ ತಾಲೂಕಿನ ರೈತರು ಕಂಗಾಲು ಆಗಿದ್ದಾರೆ.

ರಕ್ಕಸಕೊಪ್ಪ ಜಲಾಶಯ ಭರ್ತಿಗೆ ಕೇವಲ ನಾಲ್ಕು ಅಡಿ ಬಾಕಿ ಇದೆ. ರಕ್ಕಸಕೊಪ್ಪ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ರೆ ಮತ್ತಷ್ಟು ಕೃಷಿ ಜಮೀನು ಜಲಾವೃತವಾಗುವ ಭೀತಿ ಎದುರಾಗಿದೆ
Published by:Mahmadrafik K
First published: