Karnataka Weather Report: ತುಂಬಿ ಹರಿಯುತ್ತಿವೆ ನದಿಗಳು, ಈ ಭಾಗದಲ್ಲಿಂದು ಮಳೆ ಸಾಧ್ಯತೆ

Karnataka Weather Report: ಜಿಲ್ಲೆಯ ಮಲಪ್ರಭಾ, ಘಟಪ್ರಭಾ (Malaprabha And Ghataprabha) ಜಯಲಾಶಯಗಳು ಭರ್ತಿಯಾಗಿದ್ದು, ಉತ್ತರ ಕರ್ನಾಟಕ ಜನರಿಗೆ ವರ್ಷ ಪೂರ್ತಿ ಬೆಳೆ, ಕುಡಿಯುವ ನೀರು ಸಿಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈ ಬಾರಿಯ ವರುಣರಾಯನ (Karnataka Rains) ಅಬ್ಬರ ಊಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷದಂತೆ ನಿಗಧಿತ ಪ್ರಮಾಣದಲ್ಲಿ ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸುರಿದಿದೆ. ಇನ್ನು ಕೆಲವು ಭಾಗಗಳಲ್ಲಿ ಮಳೆ (Rainfall) ಮುಂದುವರಿದಿದೆ. ಉತ್ತರ ಕರ್ನಾಟಕದ ಕಲಬುರಗಿ (Kalaburagi), ಬೀದರ್ (Bidar) ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗಿದೆ. ಜುಲೈ ತಿಂಗಳಿನಿಂದ ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ನದಿಗಳು (Rivers) ತುಂಬಿ ಹರಿಯುತ್ತಿವೆ. ಇನ್ನು ಕಳೆದ ಮೂರು ವಾರಗಳಿಂದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಆದ್ರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ (Western Hills) ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹದ (Krishna River Flood) ಆತಂಕ ಎದುರಾಗಿದೆ.

  ಸತಾರಾ ಜಿಲ್ಲೆಯ ಕೊಯ್ನಾ ಜಲಾಶಯ (Koyan Dam) ಸಹ ಭರ್ತಿಯಾಗಿದ್ದು, ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದೆ. ಒಳಹರಿವು ಹೆಚ್ಚಳವಾದ್ರೆ ಹೊರ ಹರಿವು ಸಹ ಏರಿಕೆಯಾಗಲಿದೆ. ಒಂದು ವೇಳೆ ಕೊಯ್ನಾ ಜಲಾಶಯದಿಂದ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದಲ್ಲಿ, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಬಹುದು. ಕೃಷಿ ಜಮೀನುಗಳು ಜಲಾವೃತಗೊಳ್ಳಬಹುದು.

  ನೆರೆಯುಂಟಾಗುವ ಸಾಧ್ಯತೆ

  ದಕ್ಷಿಣ ಒಳನಾಡು ಭಾಗದಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಮತ್ತೆ ಮಳೆ ಹೆಚ್ಚಾದ್ದಲ್ಲಿ ಕೋಡಿ ಹರಿದು ನೆರೆಯುಂಟಾಗುವ ಸಾಧ್ಯತೆಗಳಿವೆ. ರಾಜಧಾನಿ ಬೆಂಗಳೂರಿನಲ್ಲಿ ಮಳೆ (Bengaluru Rains) ಇಳಿಕೆಯಾಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ರಾಜಧಾನಿಯಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಲಿದೆ.

  ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

  ಬೆಂಗಳೂರು 29-19, ಮೈಸೂರು 30-19, ಚಾಮರಾಜನಗರ 31-19, ರಾಮನಗರ 31-20, ಮಂಡ್ಯ 31-20, ಬೆಂಗಳೂರು ಗ್ರಾಮಾಂತರ 29-19, ಚಿಕ್ಕಬಳ್ಳಾಪುರ 28-18, ಕೋಲಾರ 31-20, ಹಾಸನ 27-19, ಚಿತ್ರದುರ್ಗ 29-21, ಚಿಕ್ಕಮಗಳೂರು 26-18, ದಾವಣಗೆರೆ 29-21, ಶಿವಮೊಗ್ಗ 28-21, ಕೊಡಗು 24-18, ತುಮಕೂರು 30-19, ಉಡುಪಿ 29-24

  ಮಂಗಳೂರು 29-24, ಉತ್ತರ ಕನ್ನಡ 27-21, ಧಾರವಾಡ 27-20, ಹಾವೇರಿ 29-27, ಹುಬ್ಬಳ್ಳಿ 28-21, ಬೆಳಗಾವಿ 26-20, ಗದಗ 29-21, ಕೊಪ್ಪಳ 31-22, ವಿಜಯಪುರ 31-22, ಬಾಗಲಕೋಟ 32-22 , ಕಲಬುರಗಿ 31-22, ಬೀದರ್ 28-21, ಯಾದಗಿರಿ 32-22, ರಾಯಚೂರ 32-22  ಮತ್ತು ಬಳ್ಳಾರಿ 32-22

  MLA Appachu ranjan asks 2018 kodagu relief fund data rsk mrq
  ಕೊಡಗು ಪ್ರವಾಹ


  ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

  ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.ಅಲ್ಲದೇ  ಬೆಂಗಳೂರು ನಗರದಲ್ಲೂ ಮಳೆ ಸುರಿಯುವ ಸಾಧ್ಯತೆ ಇದೆ. ಜೊತೆಗೆ ಬೀದರ್, ಕಲಬುರಗಿ, ಬೆಳಗಾವಿ, ಯಾದಗಿರಿ ಜಿಲ್ಲೆಗಳಲ್ಲೂ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆ ದೊಡ್ಡಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಭಾರೀ ಪ್ರಮಾಣದಲ್ಲಿ ಬೀಳಬಹುದು ಎಂದು ಹವಾಮಾನ ಇಲಾಖೆ ಮುಂಜಾಗೃತೆಗಾಗಿ ಮುನ್ಸೂಚನೆ ನೀಡಿದೆ.

  ಇದನ್ನೂ ಓದಿ: D.K Shivakumar: ವೇದಿಕೆ ಮೇಲೆ ಶಾಸಕರ ವಿರುದ್ಧ ಸಿಡಿದೆದ್ದ ಡಿಕೆಶಿ; ದೇಶಪಾಂಡೆಗೆ ಕೊಟ್ರು ಡಿಚ್ಚಿ!

  ಮಲಪ್ರಭಾ, ಘಟಪ್ರಭಾ ಜಯಲಾಶಯಗಳು ಭರ್ತಿ

  ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ, ಪ್ರವಾಹದಿಂದ ನಷ್ಟ ಸಂಭವಿಸಿದೆ. ಜಿಲ್ಲೆಯ ಮಲಪ್ರಭಾ, ಘಟಪ್ರಭಾ (Malaprabha And Ghataprabha) ಜಯಲಾಶಯಗಳು ಭರ್ತಿಯಾಗಿದ್ದು, ಉತ್ತರ ಕರ್ನಾಟಕ ಜನರಿಗೆ ವರ್ಷ ಪೂರ್ತಿ ಬೆಳೆ, ಕುಡಿಯುವ ನೀರು ಸಿಗಲಿದೆ.

  MLA Appachu ranjan asks 2018 kodagu relief fund data rsk mrq
  ಕೊಡಗು ಪ್ರವಾಹ


  ಇದನ್ನೂ ಓದಿ: BBMP: ರಾಜಕಾಲುವೆ ಒತ್ತುವರಿ 'ಬೃಹತ್​' ನಾಟಕ ಇಂದಿಗೆ ಮುಕ್ತಾಯ!?

  ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Minister Govind Karjol) ಬೆಳಗಾವಿ ಉಸ್ತುವಾರಿ ಸಚಿವರೇ ಆಗಿದ್ದಾರೆ. ಆದರೇ ಜಿಲ್ಲೆ ಜಲಾಶಯಗಳು ಭರ್ತಿಯಾಗಿದ್ದು, ಬಾಗಿನ ಅರ್ಪಿಸುವ ಸಂಪ್ರದಾಯ ಕಣ್ಮರೆಯಾಗಿದೆ. ಜೀವನಾಡಿಗಳಿಗೆ ಗೌರವ ಸಲ್ಲಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.
  Published by:Mahmadrafik K
  First published: