Karnataka Weather Report: ರಾಜ್ಯದಲ್ಲಿ ಭಾಗಶಃ ಒಣ ಹವೆ; ಮಹಾ ಮಳೆಗೆ ಭೀಮೆಯ ಅಬ್ಬರ

ಉತ್ತರ ಕನ್ನಡ (Uttara Kannada), ಬೆಳಗಾವಿ (Belagavi), ಧಾರವಾಡ (Dharwad) ಜಿಲ್ಲೆಗಳಲ್ಲಿ ಚದುರಿದ ರೀತಿ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಎಲ್ಲಾ ಭಾಗದಲ್ಲಿ  ಒಣ ಹವೆ ಇರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather: ರಾಜ್ಯದಲ್ಲಿ ವರುಣನ (Rainfall) ಅಬ್ಬರ ಕಡಿಮೆಯಾಗಿದೆ. ದಕ್ಷಿಣ ಮತ್ತು ಒಳನಾಡು ಭಾಗದಲ್ಲಿಯೂ ಒಣ ಹವೆ ಇರಲಿದೆ. ಉತ್ತರ ಕನ್ನಡ (Uttara Kannada), ಬೆಳಗಾವಿ (Belagavi), ಧಾರವಾಡ (Dharwad) ಜಿಲ್ಲೆಗಳಲ್ಲಿ ಚದುರಿದ ರೀತಿ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಎಲ್ಲಾ ಭಾಗದಲ್ಲಿ  ಒಣ ಹವೆ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಳೆ (Bengaluru Rains) ಅಬ್ಬರ ಕಡಿಮೆಯಾಗಿದ್ದು, ಇಂದು ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಉತ್ತರ ಭಾರತದ (North India) ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

ಬೆಂಗಳೂರು 29-19, ಮೈಸೂರು 31-20, ಚಾಮರಾಜನಗರ 31-21, ರಾಮನಗರ 31-21, ಮಂಡ್ಯ 32-21, ಬೆಂಗಳೂರು ಗ್ರಾಮಾಂತರ 29-19, ಚಿಕ್ಕಬಳ್ಳಾಪುರ 29-19, ಕೋಲಾರ 31-20, ಹಾಸನ 28-18, ಚಿತ್ರದುರ್ಗ 29-20, ಚಿಕ್ಕಮಗಳೂರು 27-18, ದಾವಣಗೆರೆ 29-21, ಶಿವಮೊಗ್ಗ 29-21, ಕೊಡಗು 26-17, ತುಮಕೂರು 30-19, ಉಡುಪಿ 29-24, ಮಂಗಳೂರು 29-24

Karnataka Weather Report 17 August 2022 mrq
ಭೀಮಾ ನದಿ


ಉತ್ತರ ಕನ್ನಡ 27-21, ಧಾರವಾಡ 27-20, ಹಾವೇರಿ 29-21, ಹುಬ್ಬಳ್ಳಿ 28-21, ಬೆಳಗಾವಿ 26-19, ಗದಗ 29-21, ಕೊಪ್ಪಳ 31-22, ವಿಜಯಪುರ 30-21, ಬಾಗಲಕೋಟ 31-22, ಕಲಬುರಗಿ 31-22, ಬೀದರ್ 29-21, ಯಾದಗಿರಿ 32-22, ರಾಯಚೂರ 33-23 ಮತ್ತು ಬಳ್ಳಾರಿ 34-23

ಇದನ್ನೂ ಓದಿ:  Uttara Kannada: ಹುಷಾರು ತಪ್ಪಿದರೆ ದೇವರೇ ಗತಿ! ಇದು ಹೊನ್ನಾವರದ ಮಹಿಮೆ!

'ಮಹಾ'ಮಳೆಗೆ ಭೀಮೆಯ ಅಬ್ಬರ

ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ರಾಜ್ಯದ ಕೃಷ್ಣೆ ಮತ್ತು ಭೀಮೆಗೆ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಪರಿಣಾಮ ಭೀಮಾ ನದಿ ಅಪಾಯ ಮಟ್ಟ ಉಕ್ಕಿ ಹರಿಯುತ್ತಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್ ನಿಂದ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಭೀಮಾನದಿ ತೀರದ ದೇಗುಲಗಳು ಜಲಾವೃತಗೊಂಡಿವೆ. ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಡಂಗೂರ ಮೂಲಕ ಸೂಚನೆ ನೀಡಲಾಗುತ್ತಿದೆ. ವೀರಾಂಜನೇಯ ಹಾಗೂ ಕಂಗಳೇಶ್ವರ ದೇಗುಲಗಳು ಸಂಪೂರ್ಣ ಮುಳುಗಡೆಯಾಗಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಅವಾಂತರಗಳು

ಕಾಫಿನಾಡಿನ ಜನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಅನಾಹುತಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಬೆಟ್ಟ-ಗುಡ್ಡ ಕುಸಿಯುವುದು, ರಸ್ತೆ ಸಂಪರ್ಕ ಕಡಿತ, ತೋಟಗಳ ಮಣ್ಣು ಜರಿಯುವುದು ಮಾತ್ರ ನಿಂತಿಲ್ಲ. ಕಳೆದೊಂದು ವಾರದಿಂದ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ವರುಣದೇವ ತಕ್ಕಮಟ್ಟಿಗೆ ಶಾಂತನಾಗಿದ್ದರೂ ಸುಮಾರು 20 ಮೀಟರ್ ಕಾಂಕ್ರೀಟ್ ರಸ್ತೆ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಬಳಿ ನಡೆದಿದೆ.

ಸಂಚಾರಕ್ಕೆ ಮುಕ್ತವಾದ ಸೇತುವೆಗಳು

ನಿರಂತರ ಮಳೆಯಿಂದಾಗಿ ಮಲೆನಾಡು ಸೇರಿದಂತೆ ರಾಜ್ಯದ ಕೆಳ ಹಂತದ ಸೇತುವಗಳು ಜಲಾವೃತಗೊಂಡಿದ್ದವು. ಮಳೆ ಕಡಿಮೆಯಾದ ಹಿನ್ನೆಲೆ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

Karnataka Weather Report 17 August 2022 mrq
ಭೀಮಾ ನದಿ


ಈ ಭಾಗದಲ್ಲಿ ಮಳೆ ಸಾಧ್ಯತೆ

ರಾಜಸ್ಥಾನ, ಗುಜರಾತ್ ಮತ್ತು ಕೊಂಕಣ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಲಡಾಖ್ ಭಾಗದಲ್ಲಿ ಹಿಮಪಾತ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:  Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ 

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಗಂಗಾ-ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
Published by:Mahmadrafik K
First published: