Karnataka Weather: ತಗ್ಗಿದ ಮಳೆ, ಜಲಾಶಯಗಳು ಭರ್ತಿ; ಇಲ್ಲಿದೆ ಇವತ್ತಿನ ಹವಾಮಾನ ವರದಿ

ರಾಜಸ್ಥಾನ, ಗುಜರಾತ್ ಮತ್ತು ಕೊಂಕಣ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಮಳೆ ಪ್ರಮಾಣ (Karnataka RainFall) ಬಹುತೇಕ ತಗ್ಗಿದ್ದು,  ಚಳಿಯ (Cold Weather) ಪ್ರಮಾಣ ಏರಿಕೆಯಾಗುತ್ತಿದೆ. ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಚದುರಿದ ರೀತಿ ಮಳೆ ಸುರಿಯಲಿದೆ. ಇನ್ನು ಮಲೆನಾಡು ಭಾಗದಲ್ಲಿ ಮಳೆಯ ಎಫೆಕ್ಟ್ ನಿಂದ ಜನರು ಹೈರಾಣು ಆಗಿದ್ದಾರೆ. ಕೊಡಗು (Kodagu), ಚಿಕ್ಕಮಗಳೂರು (Chikkamagaluru) ಸೇರಿದಂತೆ ಕೆಲವು ಕಡೆ ಭೂಕುಸಿತ (Landslide) ಉಂಟಾಗುತ್ತಿರುವ ವರದಿಗಳು ಬರುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು  ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನುಳಿದಂತೆ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಭಾಗಗಳಲ್ಲಿ ಮಳೆಯ ಸಿಂಚನ ಇರಲಿದೆ. ಜೂನ್, ಜುಲೈನಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಎಲ್ಲಾ ಜಲಾಶಯಗಳು (Karnataka Dams) ಭರ್ತಿಯಾಗಿದ್ದು, ರೈತ ವರ್ಗದಲ್ಲಿ ಸಂತಸ ಮನೆ ಮಾಡಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ  ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 29-20, ಮೈಸೂರು 31-20, ಚಾಮರಾಜನಗರ 31-21, ರಾಮನಗರ 31-21, ಮಂಡ್ಯ 32-21, ಬೆಂಗಳೂರು ಗ್ರಾಮಾಂತರ 29-20, ಚಿಕ್ಕಬಳ್ಳಾಪುರ 30-19, ಕೋಲಾರ 31-21, ಹಾಸನ 29-18, ಚಿತ್ರದುರ್ಗ 29-20, ಚಿಕ್ಕಮಗಳೂರು 27-17, ದಾವಣಗೆರೆ 29-21, ಶಿವಮೊಗ್ಗ 29-20, ಕೊಡಗು 27-17, ತುಮಕೂರು 30-19, ಉಡುಪಿ 29-24

ಮಂಗಳೂರು 29-24, ಉತ್ತರ ಕನ್ನಡ 27-21, ಧಾರವಾಡ 27-20, ಹಾವೇರಿ 28-21, ಹುಬ್ಬಳ್ಳಿ 28-21, ಬೆಳಗಾವಿ 26-20, ಗದಗ 29-21, ಕೊಪ್ಪಳ 32-27, ವಿಜಯಪುರ 29-21, ಬಾಗಲಕೋಟ 30-21, ಕಲಬುರಗಿ 30-22, ಬೀದರ್ 28-20, ಯಾದಗಿರಿ 32-22, ರಾಯಚೂರ 32-22 ಮತ್ತು ಬಳ್ಳಾರಿ 32-22

ಇದನ್ನೂ ಓದಿ:  Bidar Accident: ದೇವರ ದರ್ಶನಕ್ಕೆ ಹೊರಟವರು ಮಸಣ ಸೇರಿದ್ರು! ಬೀದರ್​​ನಲ್ಲಿ ದುರಂತ

 ಈ ಭಾಗದಲ್ಲಿ ಮಳೆ ಸಾಧ್ಯತೆ

ರಾಜಸ್ಥಾನ, ಗುಜರಾತ್ ಮತ್ತು ಕೊಂಕಣ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಲಡಾಖ್ ಭಾಗದಲ್ಲಿ ಹಿಮಪಾತ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

Karnataka Weather Report 16 August 2022 mrq
ಕೊಡಗು ಮಳೆ


ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಗಂಗಾ-ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಕೊಡಗಿನಲ್ಲಿ ನಿಲ್ಲದ ಮೇಘಸ್ಫೋಟ, ಭೂಕುಸಿತ

ಕಳೆದ ನಾಲ್ಕೈದು ದಿನಗಳಿಂದ ಮಳೆರಾಯನ ಅಬ್ಬರ (Rainfall) ಕಡಿಮೆಯಾಗಿದೆ. ಒಂದು ತಿಂಗಳಿನಿಂದ ಸುರಿಯುತ್ತಿದ್ದ ಮಳೆಗೆ ಜನರು ಹೈರಾಣು ಆಗಿದ್ದರು. ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮಳೆಯಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಲಬುರಗಿ, ಬೆಳಗಾವಿ, ಧಾರವಾಡ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಕೊಡಗಿನಲ್ಲಂತು (Kodagu) ಮಳೆ ಬಂದರೆ ಸಾಕು ಭೂಕುಸಿತದ ಆತಂಕ (Tension) ಹೆಚ್ಚಾಗ್ತಿದೆ.

ಕಾವೇರಿ ನದಿಪಾಲಾಗ್ತಿದೆ ಮಣ್ಣು

ಇದರಿಂದಾಗಿ ಕಾವೇರಿ ನದಿಯ ದಂಡೆಯಲ್ಲಿ ಭೂಕುಸಿತ ಉಂಟಾಗುತ್ತಿದೆ. ಒಳಚರಂಡಿ ಕಾಮಗಾರಿ ಮಾಡುವುದಕ್ಕೆ ಹೊಳೆಯ ದಂಡೆಯಲ್ಲೇ ಮಣ್ಣು ತೆಗೆದಿದ್ದರಿಂದ ಕುವೆಂಪು ಬಡಾವಣೆಗೆ ಹೊಂದಿಕೊಂಡಿದ್ದ ಜಾಗ ಈಗ ಕುಸಿದು ಹೋಗುತ್ತಿದೆ. ಈಗಾಗಲೇ ಸಾಕಷ್ಟು ಮಣ್ಣು ಕುಸಿದು ಕಾವೇರಿ ನದಿ ಪಾಲಾಗಿದ್ದು, ಸ್ಥಳದಲ್ಲಿದ್ದ ಬೃಹತ್ ಗಾತ್ರದ ಹೊಂಗೆ ಮರವು ಉರುಳಿ ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಅವಾಂತರಗಳು

ಕಾಫಿನಾಡಿನ ಜನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಅನಾಹುತಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಬೆಟ್ಟ-ಗುಡ್ಡ ಕುಸಿಯುವುದು, ರಸ್ತೆ ಸಂಪರ್ಕ ಕಡಿತ, ತೋಟಗಳ ಮಣ್ಣು ಜರಿಯುವುದು ಮಾತ್ರ ನಿಂತಿಲ್ಲ. ಕಳೆದೊಂದು ವಾರದಿಂದ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ವರುಣದೇವ ತಕ್ಕಮಟ್ಟಿಗೆ ಶಾಂತನಾಗಿದ್ದರೂ ಸುಮಾರು 20 ಮೀಟರ್ ಕಾಂಕ್ರೀಟ್ ರಸ್ತೆ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಬಳಿ ನಡೆದಿದೆ.

Karnataka Weather Report 16 August 2022 mrq
ಕೊಡಗಿನಲ್ಲಿ ಭೂಕುಸಿತ


ಇದನ್ನೂ ಓದಿ: Pramod Mutalik: ಹಿಂದೂಗಳು ತಮ್ಮ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ! ಕರೆ ಕೊಟ್ಟಿದ್ದೇಕೆ ಪ್ರಮೋದ್ ಮುತಾಲಿಕ್?

ಕಲ್ಲತ್ತಿಗರಿಯಿಂದ ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಕುಸಿತ

ಕಲ್ಲತ್ತಿಗರಿಯಿಂದ ಕೆಮ್ಮಣ್ಣುಗುಂಡಿ ಸಂಪರ್ಕ ಕಲ್ಪಿಸುವ ಮಾರ್ಗದ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು ಭೂಮಿಯ ಸುಮಾರು 2 ಅಡಿಯಷ್ಟು ಕುಸಿದಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸಲು ಪ್ರವಾಸಿಗರು ಕಂಗಾಲಾಗಿದ್ದಾರೆ. ಕೆಲ ಪ್ರವಾಸಿಗರು ಸಂಚರಿಸಲು ಭಯಪಟ್ಟು ವಾಪಸ್ಸಾಗಿದ್ದಾರೆ.
Published by:Mahmadrafik K
First published: