Karnataka Weather Report: ಪಶ್ಚಿಮ ಘಟ್ಟಗಳಲ್ಲಿ ನಿಲ್ಲದ ಮಳೆ, ಕೊಯ್ನಾ ಡ್ಯಾಂ ಭರ್ತಿ, ಮೂರು ಜಿಲ್ಲೆಗಳಿಗೆ ಪ್ರವಾಹದ ಆತಂಕ

ಮಹಾರಾಷ್ಟ್ರದ ಕೊಯ್ನಾ ಜಲಾಶಯ ಭಾಗಶಃ (Koyna Dam) ಭರ್ತಿಯಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 28 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಉತ್ತರ ಕರ್ನಾಟಕದಲ್ಲಿ (North Karnataka) ಮಳೆ ತಗ್ಗಿದ್ದರೂ, ಪ್ರವಾಹದ (Flood) ಆತಂಕ ಮಾತ್ರ ಕಡಿಮೆಯಾಗಿಲ್ಲ. ಪಶ್ಚಿಮ ಘಟ್ಟಗಳಲ್ಲಿ (Western Hills) ಸುರಿಯುತ್ತಿರುವ ಮಳೆಯಿಂದಾಗಿ ಭೀಮೆ, ಕೃಷ್ಣೆ (Bhima And Krishna Rivers) ಸೇರಿದಂತೆ ಬೆಳಗಾವಿ (Belagavi) ಭಾಗದ ಎಲ್ಲಾ ನದಿಗಳು ಅಪಾಯದ ಮಟ್ಟ ತಲುಪಿವೆ. ನಿರಂತರ ಮಳೆಯಿಂದಾಗಿ ಬೆಳಗಾವಿ ಭಾಗದಲ್ಲಿ ಮೂವರು ಸಾವನ್ನಪ್ಪಿದ್ರೆ, ಹಲವು ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ. ಇತ್ತ ಮಹಾರಾಷ್ಟ್ರದ ಕೊಯ್ನಾ ಜಲಾಶಯ ಭಾಗಶಃ (Koyna Dam) ಭರ್ತಿಯಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 28 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 28-19, ಮೈಸೂರು 29-19, ಚಾಮರಾಜನಗರ 30-19, ರಾಮನಗರ 30-19, ಮಂಡ್ಯ 30-20, ಬೆಂಗಳೂರು ಗ್ರಾಮಾಂತರ 28-19, ಚಿಕ್ಕಬಳ್ಳಾಪುರ 29-19, ಕೋಲಾರ 30-19, ಹಾಸನ 26-19, ಚಿತ್ರದುರ್ಗ 29-21, ಚಿಕ್ಕಮಗಳೂರು 26-18, ದಾವಣಗೆರೆ 28-21, ಶಿವಮೊಗ್ಗ 28-21, ಕೊಡಗು 24-17, ತುಮಕೂರು 29-19

ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 26-21, ಧಾರವಾಡ 27-21, ಹಾವೇರಿ 28-21, ಹುಬ್ಬಳ್ಳಿ 27-21, ಬೆಳಗಾವಿ 25-20, ಗದಗ 28-21, ಕೊಪ್ಪಳ 30-22, ವಿಜಯಪುರ 29-22, ಬಾಗಲಕೋಟ 31-22 , ಕಲಬುರಗಿ 31-23, ಬೀದರ್ 28-21, ಯಾದಗಿರಿ 31-23, ರಾಯಚೂರ 32-23 ಮತ್ತು ಬಳ್ಳಾರಿ 32-23

ಕೊಳವೆ ಬಾವಿಯಿಂದ ಚಿಮ್ಮುತ್ತಿದೆ ನೀರು

ಕಳೆದ  20 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕೊಪ್ಪಳ ತಾಲೂಕಿನ ಬೋಚನಹಳ್ಳಿಯಲ್ಲಿ ನಿಂಗಪ್ಪ ಮೇಟಿ ಎಂಬವರ ಹೊಲದಲ್ಲಿರುವ ಕೊಳವೆ ಬಾವಿಯಿಂದ ನೀರು ಉಕ್ಕುತ್ತಿದೆ. ಕೊಳವೆ ಬಾವಿಗೆ ಯಾವುದೇ ಪಂಪ್ ಸಹ ಅಳವಡಿಸಿಲ್ಲ.

Karnataka Weather Report 15 September 2022 mrq
ಕೃಷ್ಣಾ ನದಿ


ಉಮರಾಣಿ ಸೇತುವೆ ಮುಳುಗಡೆ, ಏಳು ಗ್ರಾಮಗಳಿಗೆ ಪ್ರವಾಹ ಅತಂಕ

ಭೀಮಾ ನದಿಯಲ್ಲಿ ಪ್ರವಾಹ (Bhima River Flood) ಹೆಚ್ಚಾದ ಹಿನ್ನೆಲೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಸೇತುವೆ (Umarani Bridge Submerge) ಮುಳುಗಡೆಯಾಗಿದೆ. ಉಮರಾಣಿ ಸೇತುವೆ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕ್ಷಣ ಕ್ಷಣಕ್ಕೂ ಭೀಮಾ ನದಿಯಲ್ಲಿ ಹರಿವು ಹೆಚ್ಚಾಗುತ್ತಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಉಮರಾಣಿ ಸೇತುವೆ ವ್ಯಾಪ್ತಿಯ ಏಳೆಂಟು ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದ್ದು, ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.

ಹಿಡಕಲ್ ಜಲಾಶಯ ಭರ್ತಿ

ಬೆಳಗಾವಿ, ಬಾಗಲಕೋಟ ಜನರ ಜೀವನಾಡಿ 51 ಟಿಎಂಸಿ ಸಾಮಾರ್ಥ್ಯದ ಘಟಪ್ರಭಾ ಜಲಾಶಯ ಭರ್ತಿಯಾಗಿದ್ದು,  10 ಗೇಟ್​ಗಳ ಮೂಲಕ 28 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಬಲದಂಡೆ, ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. 1977ರಲ್ಲಿ ಘಟಪ್ರಭಾ ನದಿಗೆ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದಿಂದ 1.36 ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.

ಇದನ್ನೂ ಓದಿ:  Mysore Dasara: ಭರ್ಜರಿಯಾಗಿ ರೆಡಿಯಾಗ್ತಿದೆ ಅಭಿಮನ್ಯು ಆ್ಯಂಡ್​ ಟೀಂ, ಇಲ್ಲಿದೆ ಗಜಪಡೆ ಊಟದ​ ಮೆನು

ಕೊಯ್ನಾ ಜಲಾಶಯ ಭಾಗಶಃ ಭರ್ತಿ, ಮೂರು ಜಿಲ್ಲೆಗಳಿಗೆ ಪ್ರವಾಹದ ಆತಂಕ

ಮಹಾರಾಷ್ಟ್ರದ ಸತಾರ ಜಿಲ್ಲೆಯ 105 ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯ (Koyna Dam) ಭಾಗಶಃ ಭರ್ತಿಯಾಗಿದೆ. ಶೇ.96ರಷ್ಟು ಜಲಾಶಯ ಭರ್ತಿಯಾಗಿದ್ದು, ಒಳಹರಿವು ಹೆಚ್ಚಳವಾದ್ರೆ, ನೀರು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ 36 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ 85 ಸಾವಿರ ಕ್ಯೂಸೆಕ್ ಕೃಷ್ಣಾ ನದಿ ಹರಿವು ಹೆಚ್ಚಳವಾಗಿದೆ. ಒಳಹರಿವು ಮತ್ತಷ್ಟು ಹೆಚ್ಚಾದ್ರೆ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಲಿದೆ.

Karnataka Weather Report 15 September 2022 mrq
ಬಸವಸಾಗರ ಜಲಾಶಯ


ಹೊಳೆ ಆಲೂರು, ಬದಾಮಿ ಸಂಪರ್ಕ ಕಡಿತ

ಮಲಪ್ರಭಾ ನದಿಯ ಪ್ರವಾಹಕ್ಕೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಸೇತುವೆ ಜಲಾವೃತವಾಗಿದೆ. ಹೊಳೆ ಆಲೂರಿನಿಂದ ಬದಾಮಿ ಸಂಪರ್ಕಿಸುವ ಸೇತುವೆ ಇದಾಗಿದೆ. ಹೊಳೆ ಆಲೂರು ಬದಾಮಿ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡುವಂತಾಯ್ತು.

ಇದನ್ನೂ ಓದಿ:  Traffic Rules: ವಾಹನ ಸವಾರರೇ ಎಚ್ಚರ; ಈ ಹೆಲ್ಮೆಟ್​ಗಳನ್ನು ಧರಿಸಿದ್ರೆ ಬೀಳುತ್ತೆ ಭಾರೀ ದಂಡ!

ಬೆಳಗಾವಿಯಲ್ಲಿ ಮಳೆ ಅವಾಂತರ; ಒಂದೇ ವಾರದಲ್ಲಿ ‌ಮೂವರು ಬಲಿ!

ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ (Heavy Rain) ಬೆಳಗಾವಿಯ (Belagavi) ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ.  ಹೀಗಾಗಿ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇತ್ತ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ (Rain) ಒಂದೇ ವಾರದ ಅಂತರದಲ್ಲಿ ಮೂವರು ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬೆಳಗಾವಿಯಲ್ಲಿ ಬಿಟ್ಟೂಬಿಡದೇ ಮಳೆ ಸುರಿಯುತ್ತಿದೆ. ಮಳೆಗೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ.
Published by:Mahmadrafik K
First published: