Karnataka Weather: ಈ ಭಾಗದಲ್ಲಿಂದು ಕೊಂಚ ಬ್ರೇಕ್ ನೀಡಿದ ವರುಣ; ಮತ್ತೆ ನಾಳೆ ಸುರಿಯಲಿದೆ ಮಳೆ

ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲ ಭಾಗಗಳಲ್ಲಿ ಹನಿಯ ಸಿಂಚನ ಉಂಟಾಗಲಿದೆ.

ಜಲಾವೃತವಾಗಿರುವ ರಸ್ತೆ

ಜಲಾವೃತವಾಗಿರುವ ರಸ್ತೆ

 • Share this:
  Karnataka Weather: ರಾಜ್ಯದಲ್ಲಿ ವರುಣರಾಯ (Karnataka Rainfall) ಇಂದು ಕೆಲವು ಜಿಲ್ಲೆಗಳಲ್ಲಿ ಕೊಂಚ ಬ್ರೇಕ್ ನೀಡಲಿದ್ದಾರೆ. ಅಲ್ಲಲ್ಲಿ ಸೂರ್ಯದೇವನ (Sun) ದರ್ಶನ ಜನರಿಗೆ ಸಿಗಲಿದೆ. ಕಳೆದೊಂದು ವಾರದಿಂದ ಮಳೆಯಿಂದಾಗಿ ಬೇಸತ್ತ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಜಿಲ್ಲೆಯ ಜನರಿಗೆ ಇಂದು ಸೂರ್ಯನ ಶಾಖ ಸ್ಪರ್ಶವಾಗಲಿದೆ. ಆದ್ರೆ ನಾಳೆ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ಉತ್ತರ ಕರ್ನಾಟಕದ (North Karnataka) ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ತುಂತುತು ಮಳೆಯಾಗಲಿದೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲ ಭಾಗಗಳಲ್ಲಿ ಹನಿಯ ಸಿಂಚನ ಉಂಟಾಗಲಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

  ಜಿಲ್ಲಾವಾರು ಹವಾಮಾನ ವರದಿ (ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

  ಬೆಂಗಳೂರು 27-19, ಮೈಸೂರು 27-20, ಚಾಮರಾಜನಗರ 28-21, ರಾಮನಗರ 28-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 28-19, ಕೋಲಾರ 29-21, ಹಾಸನ 23-19, ಚಿತ್ರದುರ್ಗ 27-19, ಚಿಕ್ಕಮಗಳೂರು 22-18, ದಾವಣಗೆರೆ 27-22, ಶಿವಮೊಗ್ಗ 25-21, ಕೊಡಗು 21-17

  ತುಮಕೂರು 28-20, ಉಡುಪಿ 28-24, ಮಂಗಳೂರು 28-24, ಉತ್ತರ ಕನ್ನಡ 24-21, ಧಾರವಾಡ 24-21, ಹಾವೇರಿ 26-21, ಹುಬ್ಬಳ್ಳಿ 25-21, ಬೆಳಗಾವಿ 23-21, ಗದಗ 27-21, ಕೊಪ್ಪಳ 29-22, ವಿಜಯಪುರ 28-22, ಬಾಗಲಕೋಟ 28-22 , ಕಲಬುರಗಿ 29-22, ಬೀದರ್ 26-21, ಯಾದಗಿರಿ 28-22, ರಾಯಚೂರ 27-21 ಮತ್ತು ಬಳ್ಳಾರಿ 26-21

  ಇದನ್ನೂ ಓದಿ:  Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ಕಡಿತ   

  ವರುಣನ ಆರ್ಭಟಕ್ಕೆ 32 ಮಂದಿ ಬಲಿ

  ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ (Heavy Rain) ಈವರೆಗೆ 32 ಮಂದಿ ಮೃತಪಟ್ಟಿದ್ದಾರೆ. ಐವರು ಕಾಣೆಯಾಗಿದ್ದು, 34 ಮಂದಿ ಗಾಯಗೊಂಡಿದ್ದಾರೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದ್ದಾರೆ.

  355 ಹೆಕ್ಟರ್ ಬೆಳೆ ನಾಶ,  1,062 ಮನೆಗಳಿಗೆ ಹಾನಿ

  ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ 355 ಹೆಕ್ಟರ್ ಬೆಳೆ ನಾಶವಾಗಿದ್ದು,  1,062 ಮನೆಗಳಿಗೆ ಹಾನಿಯಾಗಿದೆ. ರಾಜ್ಯದ ವಿವಿಧೆಡೆ 14 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ. 4 ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡಗಳು, 4 ರಾಜ್ಯ ವಿಪತ್ತು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜುಲೈ ತಿಂಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ  ಎಂದು ತಿಳಿಸಿದರು.

  ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಳ

  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಣಾಮ, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳು (Vector Borne Diseases) ಸಮುದಾಯದಲ್ಲಿ ಹರಡುವ ಆತಂಕವಿದೆ. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ಆರೋಗ್ಯ ಸುರಕ್ಷತಾ ಕ್ರಮಗಳನ್ನು (Health Safety Measures) ಕೈಗೊಳ್ಳಬೇಕೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ (K Sudhakar) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

  ಮಲೇರಿಯಾ, ಡೆಂಘೀ, ಚಿಕನ್‌ ಗುನ್ಯಾ ಕೇಸ್​ ಹೆಚ್ಚಳ

  ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದಾಗಿ ಮಲೇರಿಯಾ, ಡೆಂಘೀ, ಚಿಕನ್‌ ಗುನ್ಯಾ, ಜಪಾನೀಸ್‌ ಎನ್ಸಫಲೈಟಿಸ್‌, ಆನೆಕಾಲು ಮೊದಲಾದ ರೋಗಗಳು ಹರಡುವ ತೀವ್ರ ಸಾಧ್ಯತೆ ಇದೆ. ಇದಕ್ಕಾಗಿ ಪ್ರತಿ ಜಿಲ್ಲಾಡಳಿತವು ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಸೂಚನೆ ನೀಡಲಾಗಿದೆ.

  ಇದನ್ನೂ ಓದಿ:  Bengaluru: ಬಿಷಪ್ ಕಾಟನ್, ಸೇಂಟ್ ಜಾನ್ಸ್ ಶಾಲೆಗಳ ಪ್ರಾಂಶುಪಾಲರು ಸಸ್ಪೆಂಡ್

  ಗೃಹಪ್ರವೇಶಕ್ಕೆ ಸಿದ್ಧಗೊಂಡಿದ್ದ ಮನೆ ನೆಲಸಮ!

  ಸುಳ್ಯ, ದಕ್ಷಿಣ ಕನ್ನಡ: ಇನ್ನೇನು ಮನೆಯ (House) ಎಲ್ಲಾ ಕೆಲಸ ಮುಗಿದು ಗೃಹ ಪ್ರವೇಶಕ್ಕೆ‌ (House Opening Ceremony) ಸಿದ್ಧಗೊಳ್ಳುತ್ತಿದ್ದ ಮನೆಯೊಂದು ಪ್ರಕೃತಿಯ ವಿಕೋಪಕ್ಕೆ ನೆಲಸಮವಾಗಿದೆ.

  ಹರಿಹರಪಳ್ಳತ್ತಡ್ಕದ  ತೇಜ್ ಕುಮಾರ್ ಮತ್ತು ತಾರಾಮತಿ ದಂಪತಿಯ ಮನೆ ಇದಾಗಿದ್ದು, ದಂಪತಿಗಳ ಇಬ್ಬರು ಮಕ್ಕಳಾದ  ಪ್ರಜ್ವಲ್ ಮತ್ತು ಉಜ್ವಲ್ ಎಂಬ ಸಹೋದರರು ಘಟನೆ ಸಂಭವಿಸುವಾಗ  ಮನೆಯಲ್ಲೇ ಇದ್ದರು
  Published by:Mahmadrafik K
  First published: