Karnataka Weather Report: ಉತ್ತರ ಒಳನಾಡು ಭಾಗಕ್ಕೆ ಮಳೆಯ ಅಲರ್ಟ್​; ನದಿ ಅಬ್ಬರಕ್ಕೆ ಕಾಫಿ, ಅಡಿಕೆ ತೋಟ ನಾಶ

ನಾರಾಯಣಪುರದ ಬಸವ ಸಾಗರ ಜಲಾಶಯದಿಂದ 1,41,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಸಾರ್ವಜನಿಕರು ದಯವಿಟ್ಟು ನದಿ ಪಾತ್ರಕ್ಕೆ ಹೋಗಬೇಡಿ. ನದಿ ಪಾತ್ರದಲ್ಲಿ ಬಟ್ಟೆ ತೊಳೆಯುವುದು, ಮೀನು ಹಿಡಿಯುವ  ಕೆಲಸ ಮಾಡಬೇಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂದಿನ 48 ಗಂಟೆಗಳಲ್ಲಿ ಕರಾವಳಿ ಉತ್ತರ ಒಳನಾಡು, ದಕ್ಷಿಣ ಒಳನಾಡು ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವೆಡೆ ಅಲರ್ಟ್​ ಘೋಷಿಸಲಾಗಿದೆ. ಮಂಗಳವಾರ ಸಂಜೆ ವೇಳೆಗೆ ಬೆಂಗಳೂರು ನಗರದಲ್ಲಿ ಮಳೆ (Bengaluru Rains) ಸುರಿಯಲಾರಂಭಿಸಿತು. ಶಾಂತಿನಗರ, ಕಾರ್ಪೋರೇಷನ್ ಸರ್ಕಲ್, ವಿಧಾನಸೌಧದ ಸುತ್ತಮುತ್ತ ಜೋರು ಮಳೆಯಾಗಿದೆ. ಹೆಬ್ಬಾಳ, ಯಲಹಂಕ, ಆರ್.ಟಿ.ನಗರ, ಯಶವಂತಪುರ ಭಾಗದಲ್ಲಿ ಚದುರಿದ ರೀತಿ ಮಳೆಯಾಗಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather)  ಗರಿಷ್ಠ 28 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ. ಇಂದು ಸಹ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಹಗುರವಾದ ಮಳೆಯಾಗುವ ನಿರೀಕ್ಷೆಗಳಿವೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 28-19, ಮೈಸೂರು 28-19, ಚಾಮರಾಜನಗರ 29-20, ರಾಮನಗರ 27-21, ಮಂಡ್ಯ 29-24, ಬೆಂಗಳೂರು ಗ್ರಾಮಾಂತರ 28-19, ಚಿಕ್ಕಬಳ್ಳಾಪುರ 29-19, ಕೋಲಾರ 29-20, ಹಾಸನ 26-19, ಚಿತ್ರದುರ್ಗ 28-21, ಚಿಕ್ಕಮಗಳೂರು 25-18, ದಾವಣಗೆರೆ 28-21, ಶಿವಮೊಗ್ಗ 28-21, ಕೊಡಗು 23-17, ತುಮಕೂರು 28-19

ಉಡುಪಿ 29-24, ಮಂಗಳೂರು 28-24, ಉತ್ತರ ಕನ್ನಡ 26-21, ಧಾರವಾಡ 26-22, ಹಾವೇರಿ 28-22, ಹುಬ್ಬಳ್ಳಿ 27-21, ಬೆಳಗಾವಿ 26-20, ಗದಗ 29-21, ಕೊಪ್ಪಳ 30-22, ವಿಜಯಪುರ 29-22, ಬಾಗಲಕೋಟ 30-22 , ಕಲಬುರಗಿ 30-22, ಬೀದರ್ 28-21, ಯಾದಗಿರಿ 31-23, ರಾಯಚೂರ 32-22 ಮತ್ತು ಬಳ್ಳಾರಿ 32-22

ಎಲ್ಲೆಲ್ಲಿ ಮಳೆ ಸಾಧ್ಯತೆ

ಕರಾವಳಿಯ ಜಿಲ್ಲೆಯಾದ ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬು್ಗಿರಗಿ, ವಿಜಯಪುರದಲ್ಲಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.ವಿಜಯಪುರದಲ್ಲಿ ಬೆಳೆ ಹಾನಿ

ವಿಜಯಪುರ ಜಿಲ್ಲೆ ತಾಳಿಕೋಟೆ ಬಳಿಯ ಭಂಟನೂರ ಗ್ರಾಮದ ಹಳ್ಳ ತುಂಬಿ ಹರಿದ ಪರಿಣಾಮ ಇಕ್ಕೆಲ ಭಾಗದ ಜಮೀನುಗಳಿಗೆ ನೀರು ನುಗ್ಗಿದೆ. ಭಂಟನೂರ ಗ್ರಾಮದಿಂದ ಗಡಿಸೋಮನಾಳ, ಬಮ್ಮನಹಳ್ಳಿ, ಖ್ಯಾತನಾಳ ಭಾಗದಲ್ಲಿ ಹಳ್ಳ ಹರಿಯುತ್ತದೆ. ತೊಗರಿ, ಹತ್ತಿ ಸೇರಿದಂತೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿ ಆಗಿದೆ. ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:  Bengaluru Rains: ಬೆಂಗಳೂರಿನಲ್ಲಿ ಅತಿಕ್ರಮಣ ಮಾಡಿದವರ ಪಟ್ಟಿ ಇಲ್ಲಿದೆ ನೋಡಿ

ಕೆಸರು ಗದ್ದೆಗಳಾದ ಹುಬ್ಬಳ್ಳಿ ರಸ್ತೆಗಳು

ಹುಬ್ಬಳ್ಳಿಯಲ್ಲಿ ಸತತ ಮಳೆಯಾಗಿದ್ದರಿಂದ ಸಿದ್ಧಾರೂಢ ಮಠದ ಹಿಂಬದಿಯಲ್ಲಿರುವ ಗಣೇಶ ನಗರದ ರಸ್ತೆಗಳು ಕೆಸರು ಗದ್ದೆಗಳಾಗಿ ಬದಲಾಗಿವೆ. ಗಣೇಶ ನಗರದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಮಾಡಿದ್ದ ಡ್ರೈನೇಜ್ ಕಾಮಗಾರಿ ನಡೆದಿತ್ತು. ಆದರೆ ಹಾಕಿದ ಮಣ್ಣು ಸಮತಟ್ಟು ಮಾಡದ ಹಿನ್ನೆಲೆ ರಸ್ತೆಗಳು ಕೆಸರುಮಯವಾಗಿದೆ.

ಹೀಗಾಗಿ ರಸ್ತೆಗಳ ಮೇಲೆ ಜನರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯರು ಪ್ರಧಾನಿ ಮೋದಿ ಅವರಿಗೂ ಬರೆದು ಮನವಿ ಮಾಡಿಕೊಂಡಿದ್ದಾರೆ. ಪಾಲಿಕೆ ಈಗಲಾದ್ರೂ ರಸ್ತೆ ಸರಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಸವ ಸಾಗರ ಜಲಾಶಯದಿಂದ 1.41 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ

ಪಶ್ಚಿಮಘಟ್ಟದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ನಾರಾಯಣಪುರದ ಬಸವ ಸಾಗರ ಜಲಾಶಯದಿಂದ 1,41,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಸಾರ್ವಜನಿಕರು ದಯವಿಟ್ಟು ನದಿ ಪಾತ್ರಕ್ಕೆ ಹೋಗಬೇಡಿ. ನದಿ ಪಾತ್ರದಲ್ಲಿ ಬಟ್ಟೆ ತೊಳೆಯುವುದು, ಮೀನು ಹಿಡಿಯುವ  ಕೆಲಸ ಮಾಡಬೇಡಿ. ಮಕ್ಕಳು ಸೇರಿದಂತೆ ಯಾರು ಈಜಲು ನದಿಗೆ ಇಳಿಯಬೇಡಿ ಎಂದು ಯಾದಗಿರಿ  ಜಿಲ್ಲಾಧಿಕಾರಿ ಸ್ನೇಹಲ್ ಆರ್ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  Congress Campaign: ಭ್ರಷ್ಟಾಚಾರ, ಭ್ರಷ್ಟಾಚಾರ, ಇದು 40 ಪರ್ಸೆಂಟ್ ಸರ್ಕಾರ! ಹಾಡಿನ ಮೂಲಕ ಕಾಂಗ್ರೆಸ್ ಅಭಿಯಾನ ಶುರು

ನದಿ ಅಬ್ಬರಕ್ಕೆ ಕಾಫಿ, ಅಡಿಕೆ ತೋಟ ನಾಶ

ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದಲ್ಲಿ ಜಪಾವತಿ ನದಿ ಅಬ್ಬರಕ್ಕೆ ಸುಮಾರು ಒಂದು ಎಕರೆತಯಷ್ಟು ಕಾಫಿ, ಅಡಿಕೆ ತೋಟ ನಾಶವಾಗಿದೆ. ಜಪಾವತಿ ನದಿಯಲ್ಲಿ ಅಡಿಕೆ ಮರಗಳು ತೇಲುತ್ತಿವೆ. ಹೆಗ್ಗರವಳ್ಳಿ ಗ್ರಾಮದ ಸುಪ್ರಿಮ್ ಎಂಬವರಿಗೆ ಸೇರಿದ ತೋಟ ನಾಶವಾಗಿದ್ದು, ಪರಿಹಾರ ನೀಡಬೇಕೆಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ
Published by:Mahmadrafik K
First published: