Karnataka Weather Report: ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ, ಗೋಕಾಕ್​​ಗೆ ಪ್ರವಾಹ ಭೀತಿ, ಚಾರ್ಮಡಿಯಲ್ಲಿ ಭೂಕುಸಿತ; ಇಂದಿನ ಹವಾಮಾನ ವರದಿ

ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಚಾರ್ಮಾಡಿ ಘಾಟಿಯ  ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿದಿರುತಳ ಬಳಿ ಭೂ ಕುಸಿತ ಉಂಟಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karanataka Weather Report: ರಾಜ್ಯದ ಕರಾವಳಿ, ಉತ್ತರ ಒಳನಾಡು ಭಾಗದಲ್ಲಿಂದು ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆ (Rain Fall) ತನ್ನ ವೇಗ ಹೆಚ್ಚಿಸಿಕೊಳ್ಳುತ್ತಿರೋದಕ್ಕೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಚಾರ್ಮಾಡಿ ಘಾಟಿಯ (Charmadi Ghat) ಒಂದು ಭಾಗದಲ್ಲಿ ಭೂಕುಸಿತವಾಗಿರುವ  (Landslide) ಬಗ್ಗೆ ವರದಿಯಾಗಿದೆ. ಇತ್ತ ಪಶ್ಚಿಮ ಘಟ್ಟದ (Western Hills) ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ (Belagavi Rains) ಜಿಲ್ಲೆಯ ಸಪ್ತನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳಿಂದಲೂ (Dams) ಅಪಾರ ಪ್ರಮಾಣದ ನೀರು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ಗೋಕಾಕ್ (Gokak Flood) ನಗರದ ಕೆಲವು ಭಾಗಗಳು ಮುಳುಗಡೆಯಾಗುವ ಸಾಧ್ಯತೆಗಳಿವೆ. ಇನ್ನು ಕಲಬುರಗಿ, ಬೀದರ್, ವಿಜಯಪುರದಲ್ಲಿ ನಿರಂತರ ಮಳೆ ಜೊತೆ ಗಾಳಿಯ ವೇಗ ಹೆಚ್ಚಾಗಿದ್ದು, ಚಳಿಯ ಪ್ರಮಾಣ ಏರಿಕೆಯಾಗಿದೆ. ಏರಿಕೆಯಾಗುತ್ತಿರುವ ಚಳಿಯಿಂದ ಸಂಜೆ ಆಗುತ್ತಿದ್ದಂತೆ ಜನರು ಮನೆ ಸೇರಿಕೊಳ್ಳುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿಂದು (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 29-19, ಮೈಸೂರು 28-20, ಚಾಮರಾಜನಗರ 29-20, ರಾಮನಗರ 29-19, ಮಂಡ್ಯ 30-20, ಬೆಂಗಳೂರು ಗ್ರಾಮಾಂತರ 29-19, ಚಿಕ್ಕಬಳ್ಳಾಪುರ 29-19, ಕೋಲಾರ 30-20, ಹಾಸನ 26-19, ಚಿತ್ರದುರ್ಗ 29-21, ಚಿಕ್ಕಮಗಳೂರು 24-18, ದಾವಣಗೆರೆ 28-21, ಶಿವಮೊಗ್ಗ 27-21, ಕೊಡಗು 23-18, ತುಮಕೂರು 29—20, ಉಡುಪಿ 28-24

ಮಂಗಳೂರು 28-24, ಉತ್ತರ ಕನ್ನಡ 26-21, ಧಾರವಾಡ 27-21, ಹಾವೇರಿ 28-22, ಹುಬ್ಬಳ್ಳಿ 27-21, ಬೆಳಗಾವಿ 25-21, ಗದಗ 28-21, ಕೊಪ್ಪಳ 29-22, ವಿಜಯಪುರ 29-22, ಬಾಗಲಕೋಟ 30-22, ಕಲಬುರಗಿ 29-22, ಬೀದರ್ 27-21, ಯಾದಗಿರಿ 31-23, ರಾಯಚೂರ 31-23 ಮತ್ತು ಬಳ್ಳಾರಿ 31-23

ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ

ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಚಾರ್ಮಾಡಿ ಘಾಟಿಯ  ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿದಿರುತಳ ಬಳಿ ಭೂ ಕುಸಿತ ಉಂಟಾಗಿದೆ. ಮಳೆ ಮತ್ತಷ್ಟು ಮುಂದುವರೆದರೆ ವಾಹನ ಸಂಚಾರ ಕಷ್ಟ ಸಾಧ್ಯವಾಗಲಿದೆ. ಚಾರ್ಮಾಡಿ ಘಾಟಿಯ ಮೂರನೇ ತಿರುವಿನ ರಸ್ತೆ ಮೇಲೆ ಮರ ಬಿದ್ದ ಪರಿಣಾಮ ಸೋಮವಾರ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೊನೆಗೆ ಸ್ಥಳೀಯರೇ ಮರ ತೆರವು ಮಾಡಿದರು.

Karnataka Weather Report 13 September 2022 mrq
ಸಾಂದರ್ಭಿಕ ಚಿತ್ರ


ಕರಾವಳಿಯಲ್ಲಿ ಭಾರೀ ಮಳೆ

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ. ಹೊನ್ನಾವರ ತಾಲ್ಲೂಕಿನ ಚಿಕ್ಕನಗೋಡದಲ್ಲಿ ಮನೆ ತೋಟಕ್ಕೆ ನೀರು ನುಗ್ಗಿದೆ.  ಹತ್ತಿರದ ಗುಂಡಬಾಳ ನದಿ ಉಕ್ಕಿ ಹರಿದ ಪರಿಣಾಮ ತೋಟಕ್ಕೆ ನುಗ್ಗಿದ್ದರಿಂದ, ಮುಂಜಾಗ್ರತ ಕ್ರಮವಾಗಿ 20 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಸ್ಥಳೀಯ ನಿವಾಸಿಗಳಿಗೆ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.

ಪಶ್ಚಿಮ ಘಟ್ಟಗಳ ‌ಪ್ರದೇಶದಲ್ಲಿ ಭಾರೀ ಮಳೆ

ಪಶ್ಚಿಮ ಘಟ್ಟಗಳ ‌ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ  ಹಿನ್ನೆಲೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಹಿಡಕಲ್ ಜಲಾಶಯದಿಂದ 26 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಾರ್ಕಂಡೇಯ ನದಿ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿ ಸೇರಿ 51 ಸಾವಿರ ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಹರಿಬಿಡಲಾಗಿದೆ.

ಇದನ್ನೂ ಓದಿ:  Karnataka Politics: ನನ್ನನ್ನು ಲೂಟಿ ಅನ್ನೋ ಇವ್ರೇನು ಸತ್ಯಹರಿಶ್ಚಂದ್ರನ ಮಕ್ಕಳಾ? ಸಿಟಿ ರವಿ, ಸಿದ್ದು ನಡುವೆ ಟಾಕ್​ ವಾರ್!

ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಿಗೆ ಸೂಚನೆ

ಗೋಕಾಕ್ ನಗರದ ಮಟನ್ ಮಾರ್ಕೆಟ್ ಸೇರಿ ಅನೇಕ ಕಡೆಗಳಲ್ಲಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಜನರು ಗೃಹಪಯೋಗಿ ಮತ್ತು ಅಗತ್ಯ ಸಾಮಾನುಗಳಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಗೋಕಾಕ್- ಸಂಕೇಶ್ವರ ಸಂಪರ್ಕಿಸುವ ಪ್ರಮುಖ ಸೇತುವೆ ಮುಳುಗಡೆ ಹಂತಕ್ಕೆ ಬಂದಿದೆ.

Karnataka Weather Report 13 September 2022 mrq
ಸಾಂದರ್ಭಿಕ ಚಿತ್ರ


ಹವಾಮಾನ ವೈಪರೀತ್ಯಕ್ಕೆ ನಲುಗಿದ ಮೀನುಗಾರಿಕೆ

ಅಬ್ಬರದ ಮಳೆಯಿಂದಾಗಿ (Heavy Rain) ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ (Coastal) ಭಾಗದಲ್ಲಿ ಮೀನುಗಾರಿಕೆ (Fishing) ಸಂಪೂರ್ಣ ಬಂದ್ ಆಗಿದ್ದು ಮೀನುಗಾರರಿಗೆ (Fishers) ಕೋಟಿ ಕೋಟಿ ನಷ್ಟ ತಂದೊಡ್ಡಿದೆ. ಇತ್ತ ಹವಾಮಾನ ವೈಪರಿತ್ಯದಿಂದ (Climate change) ರಾಜ್ಯ ಹೊರ ರಾಜ್ಯದ ಮೀನುಗಾರಿಕಾ ಬೋಟುಗಳು ಕಾರವಾರ  (Karwar) ಬಂದರಿನಲ್ಲಿ ಲಂಗುರು ಹಾಕಿ ರಕ್ಷಣೆ ಪಡೆಯುತ್ತಿವೆ.

ಇದನ್ನೂ ಓದಿ:  Danger Journey: ಒಂದೇ ಬಸ್‌ನಲ್ಲಿ ಊರು ತಲುಪುವ ಧಾವಂತ; ಪ್ರಾಣ ಪಣಕ್ಕಿಟ್ಟು ವಿದ್ಯಾರ್ಥಿಗಳು, ಜನರ ಪ್ರಯಾಣ!

ಮೀನುಗಾರಿಕೆ ಆರಂಭದಲ್ಲೆ ಹವಾಮಾನ ವೈಪರೀತ್ಯ ಮೀನುಗಾರರಿಗೆ ಶಾಪವಾಗಿ ಕಾಡುತ್ತಿದ್ದು ಬೆನ್ನು ಬಿಡದೆ ನಷ್ಟದ ದಾರಿ ತೋರಿಸುತ್ತಿದೆ. ದಿನ ನಿತ್ಯವೂ ಒಂದೇ ಗೋಳು ಎನ್ನುವಂತೆ ಮೀನುಗಾರರು ನಷ್ಟದ ಬದುಕಲ್ಲೇ ಜೀವನ ದೂಡುತ್ತಿದ್ದಾರೆ.
Published by:Mahmadrafik K
First published: