• Home
  • »
  • News
  • »
  • state
  • »
  • Karnataka Weather Report: ನಿಲ್ಲುತ್ತಿಲ್ಲ ವರುಣನ ಆರ್ಭಟ, ಮುಂದಿನ ಮೂರು ದಿನ ಮಳೆ ಸಾಧ್ಯತೆ

Karnataka Weather Report: ನಿಲ್ಲುತ್ತಿಲ್ಲ ವರುಣನ ಆರ್ಭಟ, ಮುಂದಿನ ಮೂರು ದಿನ ಮಳೆ ಸಾಧ್ಯತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಕನಿಷ್ಠ 19 ಮತ್ತು ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಹಲವೆಡೆ ಮಳೆಯಾಗುತ್ತಿದೆ.

  • Share this:

Karnataka Weather Report: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ (Rainfall) ಇಂದು ಸಹ ಮುಂದುವರಿಯಲಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜನತೆ ಹೈರಾಣು ಆಗಿದ್ದಾರೆ. ಇನ್ನು ಬಿತ್ತನೆ ಮಾಡಿರುವ ರೈತರು (Farmers) ಹೀಗೆ ಮಳೆ ಮುಂದುವರಿದ್ರೆ, ಮುಂದೆ ಬೆಳೆಗಳು (Crop) ರೋಗಕ್ಕೆ ತುತ್ತಾಗುವ ಆತಂಕದಲ್ಲಿದ್ದಾರೆ. ಮತ್ತೊಂದು ಕಡೆ ಬಿತ್ತನೆ ಮಾಡಬೇಕಿರುವ ರೈತರು ಮಳೆ ನಿಂತ್ರೆ ಸಾಕು ಅಂತ ಹೇಳುತ್ತಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಜಲಾಶಯಗಳು (Karnataka Dams) ಭರ್ತಿಯಾಗಿವೆ. ಜಲಾಶಯಗಳಿಂದ ನದಿಗೆ (River) ಸಾವಿರಾರು ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿಬಿಡಲಾಗ್ತಿದೆ. ಆದ್ದರಿಂದ ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಕನಿಷ್ಠ 19 ಮತ್ತು ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಹಲವೆಡೆ ಮಳೆಯಾಗುತ್ತಿದೆ.


ಜಿಲ್ಲಾವಾರು ಹವಾಮಾನ ವರದಿ (ಡಿಗ್ರಿ ಸೆಲ್ಸಿಯಸ್ ಗಳಲ್ಲಿ)


ಬೆಂಗಳೂರು 25-19, ಮೈಸೂರು 25-20, ಚಾಮರಾಜನಗರ 26-21, ರಾಮನಗರ 27-21, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 25-19, ಚಿಕ್ಕಬಳ್ಳಾಪುರ 24-19, ಕೋಲಾರ 27-21, ಹಾಸನ 22-19, ಚಿತ್ರದುರ್ಗ 24-20, ಚಿಕ್ಕಮಗಳೂರು 21-18, ದಾವಣಗೆರೆ 24-21, ಶಿವಮೊಗ್ಗ 24-21, ಕೊಡಗು 20-17, ತುಮಕೂರು 26-20


ಉಡುಪಿ 27-25, ಮಂಗಳೂರು 27-25, ಉತ್ತರ ಕನ್ನಡ 23-21, ಧಾರವಾಡ 22-20, ಹಾವೇರಿ 24-21, ಹುಬ್ಬಳ್ಳಿ 23-21, ಬೆಳಗಾವಿ 22-20, ಗದಗ 23-21, ಕೊಪ್ಪಳ 25-22, ವಿಜಯಪುರ 23-21, ಬಾಗಲಕೋಟ 25-22 , ಕಲಬುರಗಿ 24-22, ಬೀದರ್ 22-20, ಯಾದಗಿರಿ 28-22, ರಾಯಚೂರ 27-21 ಮತ್ತು ಬಳ್ಳಾರಿ 26-21


ಇದನ್ನೂ ಓದಿ:  Siddaramaiah Vs Pralhad joshi: ಡಿಕೆಶಿಯನ್ನ ಜೈಲಿಗೆ ಕಳುಹಿಸಿದ ಕೀರ್ತಿ ನಿಮಗೆ ಸಲ್ಲುತ್ತೆ: ಜೋಶಿ ತಿರುಗೇಟು


ತುಂಬಿ ಹರಿಯುತ್ತಿರುವ ನದಿಗಳು, ಪುಣ್ಯ ಸ್ನಾನಕ್ಕೆ ಬ್ರೇಕ್


ಕೊಡಗು ಭಾಗದಲ್ಲಿ ಮಳೆ ಕೊಂಚ ಇಳಿಕೆಯಾಗಿದ್ದು, ಆದ್ರೆ ಪ್ರವಾಹದ ಆತಂಕ ಜನರಲ್ಲಿದೆ. ಮಳೆಯಿಂದಾಗಿ ಕೆಲ ಮನೆಗಳಿಗೆ ಹಾನಿಯುಂಟಾಗಿದೆ. ಕೊಡಗು ಜಿಲ್ಲೆಯ ನದಿ, ಉಪನದಿಗಳು ತುಂಬಿ ಹರಿಯುತ್ತಿವೆ. ನದಿ ತೀರದ ದೇವಸ್ಥಾನಗಳಲ್ಲಿ ಬ್ಯಾರಿಕೇಡ್ ಹಾಕಿ ಭಕ್ತರು ನೀರಿಗೆ ಇಳಿಯದಂತೆ ನಿರ್ಬಂಧ ಹಾಕಲಾಗ್ತಿದೆ. ನದಿಯ ಮಟ್ಟ ಇಳಿಕೆಯಾಗುವರೆಗೂ ಭಕ್ತರ ಪುಣ್ಯ ಸ್ನಾನಕ್ಕೆ ಬ್ರೇಕ್ ಹಾಕಲಾಗಿದೆ.


ಮಲೆನಾಡಿನಂತಾದ ಉತ್ತರ ಕರ್ನಾಟಕ


ಬಿಸಿಲು ನಾಡು ಉತ್ತರ ಕರ್ನಾಟಕ ಅಕ್ಷರಶಃ ಮಲೆನಾಡು ಆಗಿ ಬದಲಾಗಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಎಲ್ಲೆಡೆ ಹಸಿರ ವಾತಾವರಣ ಕಾಣಿಸುತ್ತಿದೆ. ತುಂತುರು ಮಳೆಯ ಜೊತೆಗೆ ಗಾಳಿಯ ವೇಗ ಸಹ ಸ್ವಲ್ಪ ಹೆಚ್ಚಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ಯಾದಗಿರಿಯಲ್ಲಿ ಬೆಳಗಿನ ಜಾವ ಮಂಜು ಹಿತ ನೀಡುತ್ತಿದೆ. ಹವಾಮಾನದಲ್ಲಿ ವೈಪರಿತ್ಯದಿಂದಾಗಿ ಜನರಲ್ಲಿ ಜ್ವರ, ಶೀತ ಸಂಬಂಧಿತ ರೋಗ ಲಕ್ಷಣಗಳು ಕಾಣಿಸುತ್ತಿವೆ.


ಹಾನಿಗೊಳಗಾದ ಮನೆಗಳಿಗೆ ಭೇಟಿ


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಇಂದು ಮಡಿಕೇರಿಯ ಮಲ್ಲಿಕಾರ್ಜುನ ನಗರ ಬಡಾವಣೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಮನೆಯ ಮಾಲೀಕರಾದ ಗೋಪಾಲ ಅವರ ಕುಟುಂಬಕ್ಕೆ ಒಟ್ಟು 1 ಲಕ್ಷದ 5 ಸಾವಿರ ರೂಪಾಯಿ ಪರಿಹಾರದ ವಿತರಿಸಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಶಿಕ್ಷಣ ಸಚಿವ ಬಿಸಿ ನಾಗೇಶ್ ಮತ್ತು ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:  Chandrashekhar Guruji ಹತ್ಯೆಗೆ ಕಾರಣವಾಯ್ತಾ ಆ ಮೂರು ಆಸ್ತಿ? ಆರೋಪಿಗಳು ಬಾಯ್ಬಿಟ್ಟ ಸ್ಫೋಟಕ ಮಾಹಿತಿ ಏನು?


ಕೃಷ್ಣೆ, ಭೀಮೆ ಒಳಹರಿವು ಹೆಚ್ಚಳ


ಒಂದು ಕಡೆ, ಕೃಷ್ಣಾ (Krishna), ಇನ್ನೊಂದು ಕಡೆ ಭೀಮಾ ನದಿಯ (Bheema River) ಪ್ರವಾಹದ (Flood) ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದ (Maharashtra) ಮಹಾಮಳೆಗೆ ಕೃಷ್ಣಾ ಹಾಗೂ ಭೀಮಾನದಿಗೆ ಒಳಹರಿವು ಹೆಚ್ಚಳವಾಗಿದೆ.


ಭೀಮಾ ನದಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಕಲಬುರಗಿ (Kalburgi) ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ 15 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಯಾದಗಿರಿ (Yadagiri) ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್ ಭರ್ತಿಯಾಗಿದ್ದು, ಭೀಮಾನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಲಾಗುತ್ತಿದೆ

Published by:Mahmadrafik K
First published: