Karnataka Weather Report: ದಾಖಲೆಯ ಮಳೆಗೆ ಬೀದರ್ ಜನತೆ ಹೈರಾಣು; ನಿಮ್ಮ ಜಿಲ್ಲೆಯ ಹವಾಮಾನ ವರದಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ ಅರ್ಧಕರ್ಧ ದಿನ ಮಳೆ ಬಂದಿಲ್ಲ. ಆದರೆ, ಅನಾಹುತಗಳು ಮಾತ್ರ ಭಯಂಕರ. ಕಾಫಿನಾಡಲ್ಲಿ 391 ಕೋಟಿಗೂ ಅಧಿಕ ನಷ್ಟವಾಗಿದೆ. ಒಟ್ಟು 945 ಮನೆಗಳು ಹಾನಿಯಾಗಿವೆ.

ಬೀದರ್ ಮಳೆ

ಬೀದರ್ ಮಳೆ

  • Share this:
Weather Report: ರಾಜಧಾನಿ ಬೆಂಗಳೂರಿನ ವಾತಾವರಣ (Bengaluru Weather) ಹೇಗೆ ಎಂಬುದನ್ನು ಊಹಿಸಲು ಸಹ ಕಷ್ಟವಾಗಿದೆ. ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿನಲ್ಲಿ ಮಳೆ (Bengaluru Rains) ಆಗಬೇಕಿತ್ತು. ಆದ್ರೆ ಎರಡು ದಿನಗಳಿಂದ ರಾಜಧಾನಿಯಲ್ಲಿ ಮಳೆಯ ಪ್ರಮಾಣ ಭಾಗಶಃ ಕಡಿಮೆಯಾಗಿದ್ದು, ಮೋಡಕವಿದ ವಾತಾವರಣವಿದ್ದು (Cloudy Weather), ಚದುರಿದ ರೀತಿಯಲ್ಲಿ ಮಳೆಯ ಸಿಂಚನ ಇದೆ. ಇತ್ತ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾರೆ. ಕಲಬುರಗಿ, ಬೀದರ್, ಗದಗ, ಕೊಪ್ಪಳ, ಯಾದಗಿರಿ ಭಾಗಗಳಲ್ಲಿ ದಾಖಲೆಯ ಮಳೆಗೆ (Heavy Rainfall) ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನುಳಿದಂತೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದೆ. ಈ ಬಾರಿಯ ವರ್ಷಧಾರೆಗೆ ರಾಜ್ಯದ ಎಲ್ಲಾ ಕೆರೆಗಳ (Lakes) ಕೋಡಿ ಹರಿದಿದ್ರೆ, ಜಲಾಶಯಗಳು (Dams) ಭರ್ತಿಯಾಗಿದ್ದು, ಹೆಚ್ಚಾಗಿರುವ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 28-19, ಮೈಸೂರು 28-20, ಚಾಮರಾಜನಗರ 29-20, ರಾಮನಗರ 29-20, ಮಂಡ್ಯ 29-20, ಬೆಂಗಳೂರು ಗ್ರಾಮಾಂತರ 28-19, ಚಿಕ್ಕಬಳ್ಳಾಪುರ 28-19, ಕೋಲಾರ 28-20, ಹಾಸನ 24-19, ಚಿತ್ರದುರ್ಗ 28-21, ಚಿಕ್ಕಮಗಳೂರು 24-18, ದಾವಣಗೆರೆ 28-22, ಶಿವಮೊಗ್ಗ 27-21, ಕೊಡಗು 22-18, ತುಮಕೂರು 28-19, ಉಡುಪಿ 29-24

ಮಂಗಳೂರು 28-24, ಉತ್ತರ ಕನ್ನಡ 24-21, ಧಾರವಾಡ 25-21,ಹಾವೇರಿ 27-22, ಹುಬ್ಬಳ್ಳಿ 26-21, ಬೆಳಗಾವಿ 24-21, ಗದಗ 27-21, ಕೊಪ್ಪಳ 28-22, ವಿಜಯಪುರ 27-22, ಬಾಗಲಕೋಟ 27-22 , ಕಲಬುರಗಿ 28-22, ಬೀದರ್ 26-21, ಯಾದಗಿರಿ 29-23, ರಾಯಚೂರ 30-23 ಮತ್ತು ಬಳ್ಳಾರಿ 31-23

ಬೀದರ್​ ಜಿಲ್ಲೆಯಲ್ಲಿ ದಾಖಲೆಯ ಮಳೆ

ನಾಲ್ಕೈದು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ಜಿಲ್ಲೆಯಲ್ಲಿ ಮನೆಗಳು ಕುಸಿದಿದ್ದು ಜನರನ್ನ ಬೀದಿಪಾಲು ಮಾಡಿದೆ.  ಇನ್ನೂ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ತಾಲೂಕಿನ ಚಿಕ್ಕಪೇಟ್ ಗ್ರಾಮದಲ್ಲಿನ ಐದಾರು ಮನೆಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮವಾಗಿ ಕುಟುಂಬಸ್ಥರು ಬೀದಿಗೆ ಬಿದ್ದಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಿಂದ ಹಾಳಾಗಿದ್ದು ಬದುಕು ಬೀದಿಗೆ ಬಿದ್ದಿದ್ದು ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಪ್ರವಾಹ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

Karnataka Weather Report 12th September 2022 mrq
ತುಂಬಿ ಹರಿಯುತ್ತಿರುವ ನದಿ


ಇದನ್ನೂ ಓದಿ:  Rohini Sindhuri: ರೋಹಿಣಿ ವಿರುದ್ಧ ಸಿಡಿದೆದ್ದ ಸಾರಾ ಮಹೇಶ್! 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಈ  ಭಾಗದ ರೈತರನ್ನ ಸಂಕಷ್ಠಿಕ್ಕೆ ತಳ್ಳಿದೆ. ಜನ ಜಾನುವಾರಗಳು ತತ್ತರಿಸಿ ಹೋಗಿದ್ದು ಸರಿ ಸುಮಾರು ಒಂದು ಅಂದಾಜಿನ ಪ್ರಕಾರ 45 ಸಾವಿರ ಹೆಕ್ಟೇರ್​​ನಷ್ಟು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

ಚಿಕ್ಕಮಗಳೂರಿನಲ್ಲಿ 391 ಕೋಟಿಗೂ ಅಧಿಕ ನಷ್ಟ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ ಅರ್ಧಕರ್ಧ ದಿನ ಮಳೆ ಬಂದಿಲ್ಲ. ಆದರೆ, ಅನಾಹುತಗಳು ಮಾತ್ರ ಭಯಂಕರ. ಕಾಫಿನಾಡಲ್ಲಿ 391 ಕೋಟಿಗೂ ಅಧಿಕ ನಷ್ಟವಾಗಿದೆ. ಒಟ್ಟು 945 ಮನೆಗಳು ಹಾನಿಯಾಗಿವೆ. 71 ಮನೆ ಪೂರ್ಣ ಹಾನಿ. 386 ಮನೆಗಳು ಭಾಗಶಃ ಹಾನಿ. 468 ಮನೆಗಳಿಗೆ ಸಾಧಾರಣ ಹಾನಿಯಾಗಿದೆ. 9815 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಮಣ್ಣುಪಾಲಾಗಿದೆ. ಈರುಳ್ಳಿ 3499 ಹೆಕ್ಟೇರ್, ಅಡಿಕೆ 353 ಹೆಕ್ಟೇರ್, ಆಲೂಗೆಡ್ಡ 870 ಹೆಕ್ಟೇರ್, ಕಡ್ಲೆಕಾಯಿ 277 ಹೆಕ್ಟೇರ್ ಸೇರಿದಂತೆ ಹತ್ತಾರು ಬೆಳೆಗಳು ಮಳೆ ನೀರಲ್ಲಿ ಕೊಚ್ಚಿ ಹೋಗಿದೆ.

Karnataka Weather Report 12th September 2022 mrq
ಬೆಳೆ ಜಲಾವೃತ


ಇದನ್ನೂ ಓದಿ:  HDK with KCR: ತೆಲಂಗಾಣ ಸಿಎಂ ಜೊತೆ ಕೈ ಜೋಡಿಸ್ತಾರಾ ಕರ್ನಾಟಕ ಮಾಜಿ ಸಿಎಂ? ಎಚ್‌ಡಿಕೆ-ಕೆಸಿಆರ್‌ 3 ಗಂಟೆ ಚರ್ಚಿಸಿದ್ದೇನು?

ರಾಜ್ಯದ ಜಲಾಶಯಗಳು ಭರ್ತಿ

ಈ ಬಾರಿ ರಾಜ್ಯದಲ್ಲಿ ( (State) ಮಳೆ ಸಾಕಷ್ಟು ಸುರಿದಿದ್ದು (Heavy Rain) ಪ್ರಮುಖ ಜಲಾಶಯಗಳಲ್ಲಿ ನೀರು ಸಮೃದ್ಧವಾಗಿ ಸಂಗ್ರಹಣೆಗೊಂಡಿದೆ. ಅಲ್ಲದೆ, ಕೆಲ ಜಲಾಶಯಗಳಿಂದ ಹೆಚ್ಚುವರಿಯಾದ ನೀರನ್ನು (Water) ಈಗ ಹೊರಬಿಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಮತ್ತೆ ಕೆಲ ಜಲಾಶಯಗಳ (Dams) ಒಳ ಹರಿವು ಹೆಚ್ಚಾಗಿದೆ. ಆದಾಗ್ಯೂ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ.
Published by:Mahmadrafik K
First published: