Karnataka Weather Report: ರಾಜ್ಯದ ಈ ಭಾಗದಲ್ಲಿ ಸುರಿಯಲಿದೆ ಮಳೆ

ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಚದುರಿದ ರೀತಿಯಲ್ಲಿ ಹಗುರವಾದ ಮಳೆಯಾಗುವ ನಿರೀಕ್ಷೆಗಳಿವೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ  27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:
Karnataka Weather Report: ಇಂದು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ (Rainfall) ಕೊಂಚ ಇಳಿಕೆಯಾಗಿದೆ. ಆದ್ರೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಎರಡ್ಮೂರು ಗಂಟೆ ಸತತವಾಗಿ ಸುರಿಯುವ  ಮಳೆ, ಕೆಲ ಸಮಯದ ಬಳಿಕ ಮತ್ತೆ ಅಬ್ಬರಿಸುತ್ತಿದ್ದಾನೆ. ಸತತ ಮಳೆಯಿಂದಾಗಿ ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ (Electricity Supply) ಉಂಟಾಗಿದೆ. ಇತ್ತ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿಯೂ ಮಳೆ ಸುರಿಯಲಿದೆ. ಚಿಕ್ಕಮಗಳೂರು (Chikkamagaluru Rains) ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಚದುರಿದ ರೀತಿಯಲ್ಲಿ ಹಗುರವಾದ ಮಳೆಯಾಗುವ ನಿರೀಕ್ಷೆಗಳಿವೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ  27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 27-20, ಮೈಸೂರು 27-21, ಚಾಮರಾಜನಗರ 28-21, ರಾಮನಗರ 28-21, ಮಂಡ್ಯ 29-21, ಬೆಂಗಳೂರು ಗ್ರಾಮಾಂತರ 27-20, ಚಿಕ್ಕಬಳ್ಳಾಪುರ 26-19, ಕೋಲಾರ 28-21, ಹಾಸನ 24-19, ಚಿತ್ರದುರ್ಗ 27-21, ಚಿಕ್ಕಮಗಳೂರು 23-19, ದಾವಣಗೆರೆ 27-22, ಶಿವಮೊಗ್ಗ 26-22, ಕೊಡಗು 22-18, ತುಮಕೂರು 27-21

ಉಡುಪಿ 28-25, ಮಂಗಳೂರು 28-25, ಉತ್ತರ ಕನ್ನಡ 24-21, ಧಾರವಾಡ 24-21, ಹಾವೇರಿ 26-22, ಹುಬ್ಬಳ್ಳಿ 25-21, ಬೆಳಗಾವಿ 24-21, ಗದಗ 26-22, ಕೊಪ್ಪಳ 27-22, ವಿಜಯಪುರ 27-22, ಬಾಗಲಕೋಟ 27-22 , ಕಲಬುರಗಿ 27-23, ಬೀದರ್ 24-21, ಯಾದಗಿರಿ 28-23, ರಾಯಚೂರ 28-23 ಮತ್ತು ಬಳ್ಳಾರಿ 28-23

ಎಲ್ಲೆಲ್ಲಿ ಮಳೆ?

ಸೆ.14ರವರೆಗೆ ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಯೆಲ್ಲೋ ಅಲರ್ಟ್

ಸೆ.10, 12ರಂದು‌ ಯಾದಗಿರಿ, ಬೆಳಗಾವಿಗೆ ಯೆಲ್ಲೋ ಅಲರ್ಟ್

ಸೆ.10, 11, 12ರಂದು ಬೀದರ್, ಕಲಬುರ್ಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಸೆ.12ರಂದು ಧಾರವಾಡ, ವಿಜಯಪುರ ಜಿಲ್ಲೆಗೆ ಯೆಲ್ಲೋ ಅಲರ್ಟ್

ಸೆ. 12ರಂದು ವಿಜಯಪುರ ಯೆಲ್ಲೋ ಅಲರ್ಟ್

Bengaluru Flood Man swims in living room of luxurious villa mrq
ಬೆಂಗಳೂರು ವಿಲ್ಲಾ ಜಲಾವೃತ


ಕಲಬುರಗಿಯಲ್ಲಿ ಮೂರು ದಿನ ಮಳೆಯ ಅಲರ್ಟ್

ಸೆ 12 ರವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆ ಭೀಮಾ ನದಿ ತೀರ, ಕಾಗಿಣ ನದಿ ತೀರ, ಸನ್ನತಿ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್, ಬೆಣ್ಣತೋರಾ ಜಲಾಶಯ, ಕೆಳದಂಡೆ ಮುಲ್ಲಾಮಾರಿ ಸೇರಿದಂತೆ ಜಿಲ್ಲೆಯ ನದಿ ತೀರದ ಹಲವು ಗ್ರಾಮದ ಜನರಿಗೆ ಎಚ್ಚರಿಕೆಯಿಂದರಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ;  Women Murder: ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ; ಮೈದುನನಿಂದ ನಡೆದೇ ಹೋಯ್ತು ಬರ್ಬರ ಹತ್ಯೆ!

ಜನ ಜೀವನ ಅಸ್ತವ್ಯಸ್ತ

ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಘೋಷಣೆಯಾಗಿದ್ದು, ನದಿ ಪಾತ್ರ ಮತ್ತು ತಗ್ಗು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಗ್ರಾಮಗಳಲ್ಲಿ ಡಂಗೂರ ಮೂಲಕ ಮಾಹಿತಿ ನೀಡುತ್ತಿವೆ. ಶುಕ್ರವಾರ ಬೆಳಗಾವಿ (Belagavi) ಮತ್ತು ಕಲಬುರಗಿ (Kalaburagi) ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿತ್ತು.ವಿಲ್ಲಾದಲ್ಲಿ ಈಜಾಡಿದ ವ್ಯಕ್ತಿ

ವ್ಯಕ್ತಿಯೊಬ್ಬರು ವಿಲ್ಲಾದ ಲಿವಿಂಗ್ ರೂಮ್​ನಲ್ಲಿ ಈಜಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮನೆಯಲ್ಲಿ ಹಲವು ವಸ್ತುಗಳು ಜಲಾವೃತ ಆಗಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮನೆಯಲ್ಲಿದ್ದ ಪಿಯಾನೋ ಸಂಪೂರ್ಣವಾಗಿ ಜಲಾವೃತವಾಗಿದೆ.

Bengaluru Flood Man swims in living room of luxurious villa mrq
ಬೆಂಗಳೂರು ವಿಲ್ಲಾ ಜಲಾವೃತ


ಮತ್ತೊಂದು ವಿಡಿಯೋದಲ್ಲಿ ವಿಲ್ಲಾದ ನಿವಾಸಿಗಳು ಟ್ರ್ಯಾಕ್ಟರ್​​ಗಳಲ್ಲಿ ಕುಳಿತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ವಿಲ್ಲಾ ಮುಂದೆ ನಿಲ್ಲಿಸಲಾಗಿರುವ ಐಷಾರಾಮಿ ಕಾರ್​ಗಳು ನೀರಿನಲ್ಲಿ ನಿಂತಿರೋದನ್ನು ಗಮನಿಸಬಹುದಾಗಿದೆ. ಕೋಟಿ ಕೋಟಿ ಹಣ ನೀಡಿ ವಿಲ್ಲಾ ಖರೀದಿಸಿದ್ರೂ ಜನರು ಈಗ ಎಲ್ಲವನ್ನೂ ತೊರೆದು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ.

ಇದನ್ನೂ ಓದಿ:  Elizabeth II: ಬ್ರಿಟನ್ ರಾಣಿಗೆ ಬೆಂಗಳೂರು ನಂಟು! ಲಾಲ್‌ಬಾಗ್‌ನಲ್ಲಿ ಎಲಿಜಬೆತ್‌ ನೆಟ್ಟ ಮರ ಈಗ ಹೇಗಿದೆ ನೋಡಿ

ಅಸಮರ್ಪಕ ಒಳಚರಂಡಿ ವ್ಯವಸ್ಥ

ನಾವು ನಮ್ಮ ವಿಲ್ಲಾಗಳ ಬಡಾವಣೆಯನ್ನು ಸುಸಜ್ಜಿತವಾಗಿ ಇಟ್ಟುಕೊಂಡಿದ್ದೇವೆ. ಇಲ್ಲಿಯ ಒಳಚರಂಡಿಯ ವ್ಯವಸ್ಥೆಯ ಸರಿಯಾಗಿದೆ. ಆದ್ರೆ ಹೊರ ಭಾಗದಲ್ಲಿ ಚರಂಡಿಯ ವ್ಯವಸ್ಥೆ ಸರಿಯಾಗಿಲ್ಲ. ಆದ ಕಾರಣ ವಿಲ್ಲಾಗಳು ಜಲಾವೃತಗೊಂಡಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.
Published by:Mahmadrafik K
First published: