• Home
 • »
 • News
 • »
 • state
 • »
 • Karnataka Weather Report: ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ, ಮೂರನೇ ಬಾರಿ ಮುಳುಗಿದ ಯಲ್ಲಮ್ಮ ದೇವಸ್ಥಾನ

Karnataka Weather Report: ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ, ಮೂರನೇ ಬಾರಿ ಮುಳುಗಿದ ಯಲ್ಲಮ್ಮ ದೇವಸ್ಥಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಮಳೆ ಬಿದ್ದಿದೆ. ಜಯನಗರ, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ವೃತ್ತ, ಲಾಲ್‌ಬಾಗ್ ಸೇರಿದಂತೆ ಹಲವೆಡೆ ಸಾಧಾರಣ ಮಳೆ ಆಗಿದೆ.  5 ದಿನಗಳ ಕಾಲ ಮಳೆ ಬೀಳುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

 • Share this:

  ಸೋಮವಾರದಿಂದ ರಾಜ್ಯದಲ್ಲಿ ಮಳೆ (Karnataka Rains) ಆರಂಭಗೊಂಡಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಮುಂದಿನ ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಹೇಳಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಸೋಮವಾರದಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗ್ತಿದ್ದಂತೆ ತುಂತುರು ಮಳೆಯಾಗುತ್ತಿದೆ. ಹೀಗಾಗಿ ಸಂಜೆ ಬೆಂಗಳೂರು ನಗರ ಪ್ರದೇಶದಲ್ಲಿ ಟ್ರಾಫಿಕ್ ಹೆಚ್ಚಾಗುತ್ತಿದೆ. ಯಾದಗಿರಿ, ರಾಯಚೂರು, ಚಿತ್ರದುರ್ಗ, ಚಾಮರಾಜನಗರ, ಮಂಡ್ಯ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಯೆಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿಯೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.


  ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


  ಬೆಂಗಳೂರು: 27-19, ಮಂಗಳೂರು: 28-24, ಶಿವಮೊಗ್ಗ: 28-21, ಚಿತ್ರದುರ್ಗ: 28-21, ಬೆಳಗಾವಿ: 27-21, ಮಡಿಕೇರಿ: 24-17, ರಾಮನಗರ: 26-19, ಹಾಸನ: 26-19, ಕೊಪ್ಪಳ: 29-22, ರಾಯಚೂರು: 30-22, ಗದಗ: 28-21, ಹಾವೇರಿ: 29-21, ಉಡುಪಿ: 28-24, ಬಳ್ಳಾರಿ: 30-22, ಕಲಬುರಗಿ: 29-22


  ತುಮಕೂರು: 27-20, ಯಾದಗಿರಿ: 29-22, ಕಾರವಾರ: 28-24, ಚಾಮರಾಜನಗರ: 27-20, ಚಿಕ್ಕಬಳ್ಳಾಪುರ: 27-19, ಕೋಲಾರ: 27-20, ವಿಜಯಪುರ: 28-22, ಚಿಕ್ಕಮಗಳೂರು: 26-18, ಬಾಗಲಕೋಟೆ: 29-22, ಮಂಡ್ಯ: 28-20, ಬೀದರ್: 28-21, ದಾವಣಗೆರೆ: 29-21 ಮತ್ತು  ಮೈಸೂರು: 28-20


  ಸಂಜೆ ಆಗ್ತಿದ್ದಂತೆ ಮಳೆ


  ಬೆಂಗಳೂರಿನಲ್ಲಿ ಮಳೆ ಬಿದ್ದಿದೆ. ಜಯನಗರ, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ವೃತ್ತ, ಲಾಲ್‌ಬಾಗ್ ಸೇರಿದಂತೆ ಹಲವೆಡೆ ಸಾಧಾರಣ ಮಳೆ ಆಗಿದೆ.  5 ದಿನಗಳ ಕಾಲ ಮಳೆ ಬೀಳುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅತ್ತ ಆನೆಪಾಳ್ಯ ಬಳಿ ಧರೆಗುರುಳಿದೆ ಮರ . ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ಮಾಡಿದ್ದಾರೆ.


  Karnataka Weather Report 11th October 2022 mrq
  ಸಾಂದರ್ಭಿಕ ಚಿತ್


  ಸೋಮವಾರ ಸಂಜೆ ಸುರಿದ ಭಾರೀ‌ ಮಳೆ ಹಿನ್ನೆಲೆಯಲ್ಲಿ ಶಿವಾನಂದ ಸರ್ಕಲ್ ಬಳಿ ಇರುವ ಹೋಟೆಲ್‌ಗೆ  ಮಳೆ ನೀರು ನುಗ್ಗಿದೆ. ಹೋಟೆಲ್ ತುಂಬಾ ನೀರು  ತುಂಬಿಕೊಂಡಿದೆ. ಹೋಟೆಲ್‌ನಲ್ಲಿ ತುಂಬಿರುವ ನೀರು ಹೊರಹಾಕಲು ಸಿಬ್ಬಂದಿ ಪರದಾಡಿದ್ದಾರೆ. ಮಳೆ ನೀರಿನ ಮಧ್ಯವೇ ಗ್ರಾಹಕರು ಊಟ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.


  ವರುಣನ ಆರ್ಭಟಕ್ಕೆ ನಲುಗಿದ ಹುಬ್ಬಳ್ಳಿ


  ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಯಾಗಿದೆ. ವರುಣನ ಆರ್ಭಟಕ್ಕೆ ಹುಬ್ಬಳ್ಳಿ ನಲುಗಿದ್ದು, ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಆಗಿದೆ. ದಾಜೀಬಾನ ಪೇಟೆ, ಕುಂಬಾರ ಓಣಿಯ ಮನೆಗಳಿಗೆ  ನೀರು ನುಗ್ಗಿದೆ. ನೀರು ಹೊರಹಾಕಲು ನಿವಾಸಿಗಳು ಹರಸಾಹಸ ಪಟ್ಟಿದ್ದಾರೆ.  ಮಕ್ಕಳು, ವಯೋವೃದ್ದರು  ನೀರಿನಲ್ಲಿಯೇ ಜೀವನ ಕಳೆಯುವಂತಾಗಿದೆ.


  ಧಾರವಾಡದಲ್ಲಿ  ಕಳೆದ ರಾತ್ರಿ ಭಾರೀ ಮಳೆಯಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸುರಿದ ಮಳೆಯಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ತಗ್ಗು ಪ್ರದೇಶದ ರಸ್ತೆಗಳು ಜಲಾವೃತ ಆಗಿವೆ. ಮಳೆಯಿಂದ ರೈತ ವರ್ಗ ಕಂಗಾಲಾಗಿದ್ದು. ಹಿಂಗಾರು ಬಿತ್ತನೆಗೆ ಅಡ್ಡಿ ಪಡಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


  Karnataka Weather Report 11th October 2022 mrq
  ಗ್ರಾಮಕ್ಕೆ ನುಗ್ಗಿದ ಕೆರೆ ನೀರು


  ಸರ್ವಿಸ್ ರಸ್ತೆ ಸಂಪೂರ್ಣ ಜಲಾವೃತ


  ಚಿತ್ರದುರ್ಗದ ಭರಮಸಾಗರ ಬಳಿಯ ಸರ್ವೀಸ್ ರಸ್ತೆಯಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಭರಮಸಾಗರ ಗ್ರಾಮದ ಬಳಿ ಸರ್ವೀಸ್ ರಸ್ತೆ ಸಂಪೂರ್ಣ ಜಲಾವೃತ ಆಗಿದೆ. ಸರ್ವೀಸ್ ರಸ್ತೆಯಲ್ಲಿದ್ದ 1 ಕಾರು, 1 ಆಟೋ, ಟ್ರ್ಯಾಕ್ಟರ್ ಬಹುತೇಕ ಮುಳುಗಡೆ ಆಗಿವೆ. ಅದೃಷ್ಟವಶಾತ್ ವಾಹನಗಳಲ್ಲಿದ್ದ ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸರ್ವೀಸ್ ರಸ್ತೆ ಬಳಿಯ ಅಂಡರ್ ಬ್ರಿಡ್ಜ್ ಮೂಲಕ ನೀರು ಹರಿದಿದೆ.


  ಇದನ್ನೂ ಓದಿ:  Hasanamba Temple: ಅಕ್ಟೋಬರ್​ 13ರಂದು ತೆರೆಯಲಿದೆ ಹಾಸನಾಂಬೆ ದೇಗುಲ; ಬೆಳ್ಳಿ ರಥದಲ್ಲಿ ಬಂತು ದೇವಿ ಆಭರಣ


  ಅರ್ಧದಷ್ಟು ಮುಳುಗಿದ ಶಕ್ತಿದೇವತೆ


  ಬೆಳಗಾವಿಯ ಚಿಕ್ಕೋಡಿ ಉಪ ವಿಭಾಗದಲ್ಲಿ ಧಾರಾಕಾರ ಮಳೆ ಆಗ್ತಿದ್ದು, ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಅಥಣಿ ತಾಲೂಕಿನ ಯಲ್ಲಮ್ಮವಾಡಿ ದೇವಾಲಯ ಗರ್ಭಗುಡಿಯೊಳಗೆ ಮಳೆ ನೀರು ನುಗ್ಗಿದೆ. ಶಕ್ತಿ ದೇವತೆ ಮೂರ್ತಿ ಅರ್ಧದಷ್ಟು  ಜಲಾವೃತ ಆಗಿದೆ. ಯಲ್ಲಮ್ಮವಾಡಿ ಯಲ್ಲಮ್ಮ ದೇವಸ್ಥಾನ ಜಲ ದಿಗ್ಬಂಧನ ಆಗಿದೆ. ಹಳ್ಳದಲಲ್ಲಿ ಅಪಾರ ಪ್ರಮಾಣದ ನೀರು ಹರಿದು ಅರ್ಧದಷ್ಟು ಶಕ್ತಿ ದೇವತೆ ಮೂರ್ತಿ ಜಲಾವೃತ ಆಗಿದೆ. ಈ ವರ್ಷದಲ್ಲಿ ಮೂರನೇ ಬಾರಿಗೆ ಜಲ ದಿಗ್ಬಂಧನ ಆದಂತಾಗಿದೆ.


  ಮನೆ ಗೋಡೆ ಕುಸಿದು ವ್ಯಕ್ತಿ ಸಾವು


  ಮನೆಯ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಮುಳಗುಂದ ಗ್ರಾಮದಲ್ಲಿ ಘಟನೆ ನಡೆದಿದೆ. ಮುಳಗುಂದ ಗ್ರಾಮದ 50 ವರ್ಷದ ತಿಮ್ಮಣ್ಣ ಉರ್ಫ್ ಅಪ್ಪಣ್ಣ ಕಳ್ಳಿಮನಿ ಮೃತ ದುರ್ದೈವಿ ಆಗಿದ್ದಾರೆ. ತಿಪ್ಪಣ್ಣ ಮನೆಯಲ್ಲಿ ಮಲಗಿದ್ದ ವೇಳೆ ಕುಸಿದು ಗೋಡೆ ಕುಸಿದು ಬಿದ್ದಿದೆ. ಗೋಡೆಯ ಅಡಿಯಲ್ಲಿ ಸಿಲುಕಿದ ತಿಪ್ಪಣ್ಣ ಸಾವನ್ನಪ್ಪಿದ್ದಾರೆ.


  ಇದನ್ನೂ ಓದಿ:  Haveri: ಆ್ಯಕ್ಷನ್ ಕಿಂಗ್‌ ಹೋರಿಯ ಗುಟುರು ಇನ್ನು ನೆನಪು ಮಾತ್ರ, ಚರ್ಮ ಗಂಟು ರೋಗಕ್ಕೆ ಓಂ ಕೊನೆಯುಸಿರು


  ತಿಪ್ಪಣ್ಣನ ಮೃತ ದೇಹವನ್ನು ಹೊರಗಡೆ ತೆಗೆದಿದ್ದಾರೆ ಗ್ರಾಮಸ್ಥರು.. ಸ್ಥಳಕ್ಕೆ ತಹಶೀಲ್ದಾರ ಕಿಶನ್ ಕಲಾಲ್, ಕಂದಾಯ ನಿರೀಕ್ಷಕ ಎಮ್.ಎ ನದಾಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  Published by:Mahmadrafik K
  First published: