Karnataka Weather Report: ಎಚ್ಚರ, ಎಚ್ಚರ ಮುಂದಿನ ಒಂದು ವಾರ ರಾಜಧಾನಿಯಲ್ಲಿ ಮಳೆ ಅಬ್ಬರ

ಬೆಂಗಳೂರಿನಲ್ಲಿಂದು ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದ್ದು, ವರುಣ ಅಬ್ಬರಿಸಲಿದ್ದಾನೆ. ಬೆಂಗಳೂರು ನಗರ, ವೆಂಗಳೂರು ಗ್ರಾಮಾಂತರದಲ್ಲಿ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಇನ್ನೊಂದು ವಾರ ಬೆಂಗಳೂರಿನಲ್ಲಿ ಮಳೆಯಾಗಲಿದೆ.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:
Karnataka Weather Report: ಕಳೆದ ಎರಡ್ಮೂರು ದಿನಗಳಿಂದ ಬ್ರೇಕ್ ನೀಡಿದ್ದ ಮಳೆ (Rainfall), ಇಂದಿನಿಂದ ಮತ್ತೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆಯ (IMD) ಎಚ್ಚರಿಕೆ ನೀಡಿದೆ. ಇಂದಿನಿಂದ ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಘೋಷಣೆಯಾಗಿದ್ದು, ನದಿ ಪಾತ್ರ ಮತ್ತು ತಗ್ಗು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಗ್ರಾಮಗಳಲ್ಲಿ ಡಂಗೂರ ಮೂಲಕ ಮಾಹಿತಿ ನೀಡುತ್ತಿವೆ. ಶುಕ್ರವಾರ ಬೆಳಗಾವಿ (Belagavi) ಮತ್ತು ಕಲಬುರಗಿ (Kalaburagi) ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿತ್ತು. ಬೆಂಗಳೂರಿನಲ್ಲಿ (Bengaluru Rains) ಇನ್ನೊಂದು ವಾರ ಮಳೆಯಾಗುವ ಸಾಧ್ಯತೆಗಳಿವೆ. ಇಂದ ರಾಜಧಾನಿಯಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 27-20, ಮೈಸೂರು 28-21, ಚಾಮರಾಜನಗರ 28-21, ರಾಮನಗರ 28-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-20, ಚಿಕ್ಕಬಳ್ಳಾಪುರ 27-20, ಕೋಲಾರ 28-21, ಹಾಸನ 24-19, ಚಿತ್ರದುರ್ಗ 27-21, ಚಿಕ್ಕಮಗಳೂರು 23-19, ದಾವಣಗೆರೆ 27-22, ಶಿವಮೊಗ್ಗ 26-21, ಕೊಡಗು 22-18, ತುಮಕೂರು 27-21, ಉಡುಪಿ 28-25, ಮಂಗಳೂರು 28-24, ಉತ್ತರ ಕನ್ನಡ 25-21, ಧಾರವಾಡ 26-21, ಹಾವೇರಿ 27-22

ಹುಬ್ಬಳ್ಳಿ 26-21, ಬೆಳಗಾವಿ 25-21, ಗದಗ 27-22, ಕೊಪ್ಪಳ 28-22, ವಿಜಯಪುರ 28-22, ಬಾಗಲಕೋಟ 28-23 , ಕಲಬುರಗಿ 27-22, ಬೀದರ್ 26-21, ಯಾದಗಿರಿ 28-23, ರಾಯಚೂರ 28-23 ಮತ್ತು ಬಳ್ಳಾರಿ 29-23

Karnataka Weather Report 10th September 2022 mrq
ಜಲಾವೃತ


ಕಲಬುರಗಿಯಲ್ಲಿ ನಾಲ್ಕು ದಿನ ಮಳೆಯ ಅಲರ್ಟ್

ಸೆ 9 ರಿಂದ ಸೆ 12 ರವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆ ಭೀಮಾ ನದಿ ತೀರ, ಕಾಗಿಣ ನದಿ ತೀರ, ಸನ್ನತಿ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್, ಬೆಣ್ಣತೋರಾ ಜಲಾಶಯ, ಕೆಳದಂಡೆ ಮುಲ್ಲಾಮಾರಿ ಸೇರಿದಂತೆ ಜಿಲ್ಲೆಯ ನದಿ ತೀರದ ಹಲವು ಗ್ರಾಮದ ಜನರಿಗೆ ಎಚ್ಚರಿಕೆಯಿಂದರಲು ಸೂಚನೆ ನೀಡಲಾಗಿದೆ.

ಯಾವುದೇ ಸಂದರ್ಭದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ನದಿ ತೀರಕ್ಕೆ ಹೋಗದಂತೆ ಕಲಬುರಗಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಜನರಿಗೆ ತೊಂದರೆಯಾದರೆ ಸಹಾಯವಾಣಿ ಸಂಖ್ಯೆ 0872-278677 ಗೆ ಕರೆ ಮಾಡಬಹುದಾಗಿದೆ.

ಬೆಂಗಳೂರಿಗೆ ಯೆಲ್ಲೋ ಅಲರ್ಟ್

ಬೆಂಗಳೂರಿನಲ್ಲಿಂದು ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದ್ದು, ವರುಣ ಅಬ್ಬರಿಸಲಿದ್ದಾನೆ. ಬೆಂಗಳೂರು ನಗರ, ವೆಂಗಳೂರು ಗ್ರಾಮಾಂತರದಲ್ಲಿ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಇನ್ನೊಂದು ವಾರ ಬೆಂಗಳೂರಿನಲ್ಲಿ ಮಳೆಯಾಗಲಿದೆ.

Karnataka Weather Report 10th September 2022 mrq
ಬೆಂಗಳೂರು ಮಳೆ


ಎಲ್ಲೆಲ್ಲಿ ಮಳೆ?

ಸೆ.14ರವರೆಗೆ ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಯೆಲ್ಲೋ ಅಲರ್ಟ್

ಸೆ.10, 12ರಂದು‌ ಯಾದಗಿರಿ, ಬೆಳಗಾವಿಗೆ ಯೆಲ್ಲೋ ಅಲರ್ಟ್

ಸೆ.10, 11, 12ರಂದು ಬೀದರ್, ಕಲಬುರ್ಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಸೆ.12ರಂದು ಧಾರವಾಡ, ವಿಜಯಪುರ ಜಿಲ್ಲೆಗೆ ಯೆಲ್ಲೋ ಅಲರ್ಟ್

ಸೆ. 12ರಂದು ವಿಜಯಪುರ ಯೆಲ್ಲೋ ಅಲರ್ಟ್

ಇದನ್ನೂ ಓದಿ:  Lathi Charge: ಆನೆ ದಾಳಿಗೆ ಇಬ್ಬರು ಬಲಿ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ! ಜನರ ಮೇಲೆ ಖಾಕಿ ಲಾಠಿ ಚಾರ್ಜ್

ಇಡೀ ಲೇಔಟ್ ಖಾಲಿ, ನಿವಾಸಿಗಳೆಲ್ಲ ಹೋಟೆಲ್​ನಲ್ಲಿ!

ಬೆಂಗಳೂರಿನಲ್ಲಿ ಮಳೆ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ಮಳೆಯಿಂದ ಉಂಟಾಗಿರುವ ಸಮಸ್ಯೆಗಳು ಮುಂದುವರಿದಿವೆ. ಮಳೆ ಅಬ್ಬರಕ್ಕೆ ಸರ್ಜಾಪುರ ಮುಖ್ಯರಸ್ತೆಯಲ್ಲೆ ಇರುವ ದಿ ಕಂಟ್ರಿ ಸೈಡ್ ಲೇಔಟ್ ಖಾಲಿಯಾಗಿದೆ. ಲೇಔಟ್​​ಗೆ ನೀರು ನುಗ್ಗಿದ್ದರಿಂದ  ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ.

ಒಟ್ಟು 35 ವಿಲ್ಲಾಗಳಿರುವ ಕಂಟ್ರಿ ಸೈಡ್ ಲೇಔಟ್​ನಲ್ಲಿ ಓರ್ವ ನಿವಾಸಿ ಹೊರತುಪಡಿಸಿ ಮಿಕ್ಕೆಲ್ಲರೂ ಬೇರೆಡೆ ಶಿಫ್ಟ್ ಆಗಿದ್ದಾರೆ. ಸದ್ಯ ಲೇಔಟ್​ನಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ನೀರು ಖಾಲಿಯಾದರೂ ನಿವಾಸಿಗಳು ಇನ್ನೂ ಮನೆಗಳ ಕಡೆ ಸುಳಿದಿಲ್ಲ. ಮಳೆಯಿಂದಾಗಿ ಮನೆಗಳ ಆವರಣದಲ್ಲಿ ಕೆಸರು ತುಂಬಿಕೊಂಡಿದೆ. ಕೆಲ ವಿಲ್ಲಾಗಳ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ ಎನ್ನಲಾಗಿದೆ. ಇದೆಲ್ಲದರ ರಿಪೇರಿಗೆ ಸುಮಾರು ಒಂದು ತಿಂಗಳು ಬೇಕಾಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ:  Bengaluru Breaking News: ಬೆಂಗಳೂರಿಗರೇ ಗಮನಿಸಿ, ಟ್ರಾಫಿಕ್ ಪೊಲೀಸರಿಂದ ಮಹತ್ವದ ಸೂಚನೆ

ನಾವು ನಮ್ಮ ವಿಲ್ಲಾಗಳ ಬಡಾವಣೆಯನ್ನು ಸುಸಜ್ಜಿತವಾಗಿ ಇಟ್ಟುಕೊಂಡಿದ್ದೇವೆ. ಇಲ್ಲಿಯ ಒಳಚರಂಡಿಯ ವ್ಯವಸ್ಥೆಯ ಸರಿಯಾಗಿದೆ. ಆದ್ರೆ ಹೊರ ಭಾಗದಲ್ಲಿ ಚರಂಡಿಯ ವ್ಯವಸ್ಥೆ ಸರಿಯಾಗಿಲ್ಲ. ಆದ ಕಾರಣ ವಿಲ್ಲಾಗಳು ಜಲಾವೃತಗೊಂಡಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.
Published by:Mahmadrafik K
First published: