• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Weather Today LIVE: ರಸ್ತೆ ಮೇಲೆ 5 ಅಡಿಗೂ ಅಧಿಕ ನೀರು; ಕಾರ್ ಚಾಲಕನ ಹುಚ್ಚಾಟ, ಇಬ್ಬರ ರಕ್ಷಣೆ

Karnataka Weather Today LIVE: ರಸ್ತೆ ಮೇಲೆ 5 ಅಡಿಗೂ ಅಧಿಕ ನೀರು; ಕಾರ್ ಚಾಲಕನ ಹುಚ್ಚಾಟ, ಇಬ್ಬರ ರಕ್ಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರಾವಳಿ ಭಾಗದಲ್ಲಿಯೂ  ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆ ನೀಡುವ ಮಾಹಿತಿ ಆಧಾರದ ಮೇಲೆ ಸ್ಥಳೀಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಇವತ್ತು ಎಲ್ಲೆಲ್ಲಿ ಮಳೆಯಾಗುತ್ತಿದೆ ಎಂಬುದರ ಲೈವ್ ಅಪ್​ಡೇಟ್ ಇಲ್ಲಿದೆ.

  • Share this:

ಕಳೆದ ಮೂರ್ನಾಲ್ಕು ವಾರಗಳಿಂದ ರಾಜ್ಯದಲ್ಲಿ (Karnataka Rains) ನಿರಂತರ ಮಳೆಯಾಗುತ್ತಿದೆ. ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾದ್ರೂ ಅದರ ಅವಾಂತರಗಳು (Rain Effect) ಮಾತ್ರ ನಿಲ್ಲುತ್ತಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳು (Karnataka Dams) ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ನದಿಗಳಿಗೆ (Rivers) ಬಿಡಲಾಗುತ್ತಿದೆ. ಕೆಆರ್​ಎಸ್ ಜಲಾಶಯದಿಂದ (KRS Dam) ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ನದಿ ತೀರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ. ಮತ್ತೊಂದು ಕಡೆ ಮಲೆನಾಡು ಭಾಗದಲ್ಲಿಯೂ (Karnataka Malenadu Rain) ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ (Landslide) ಆಗುತ್ತಿವೆ. ದಟ್ಟ ಮಂಜು ಆವರಿಸಿದ ಕಾರಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಸಣ್ಣ ಸಣ್ಣ ಅಪಘಾತಗಳು (Accident) ಸಹ ಸಂಭವಿಸುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ ಮತ್ತು ಬೀದರ್ (Kalaburagi And Bidar) ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಕರಾವಳಿ ಭಾಗದಲ್ಲಿಯೂ  ಮಳೆ (Karnataka Coastal) ಮುಂದುವರಿದಿದ್ದು, ಹವಾಮಾನ ಇಲಾಖೆ ನೀಡುವ ಮಾಹಿತಿ ಆಧಾರದ ಮೇಲೆ ಸ್ಥಳೀಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ (holiday) ಮಾಡಲಾಗುತ್ತಿದೆ. ಇವತ್ತು ಎಲ್ಲೆಲ್ಲಿ ಮಳೆಯಾಗುತ್ತಿದೆ ಎಂಬುದರ ಲೈವ್ ಅಪ್​ಡೇಟ್ ಇಲ್ಲಿದೆ.

First published: