• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Weather Today LIVE: ಕರಾವಳಿಯಲ್ಲಿ ಕಡಲ ಅಬ್ಬರ; ಮೀನುಗಾರಿಕೆ ತೆರಳದ ಪರಿಸ್ಥಿತಿ ನಿರ್ಮಾಣ

Karnataka Weather Today LIVE: ಕರಾವಳಿಯಲ್ಲಿ ಕಡಲ ಅಬ್ಬರ; ಮೀನುಗಾರಿಕೆ ತೆರಳದ ಪರಿಸ್ಥಿತಿ ನಿರ್ಮಾಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿರುವ ಕಾರಣ ನದಿಗಳು (Karnataka Rivers) ತುಂಬಿ ಹರಿಯುತ್ತಿವೆ. ಇತ್ತ ಮಹಾರಾಷ್ಟ್ರದ ಪಶ್ವಿಮ ಘಟ್ಟದಲ್ಲಿ (Western Hills, Mangaluru) ಮಳೆ ಆಗುತ್ತಿರುವ ಕಾರಣ, ಉತ್ತರ ಕರ್ನಾಟಕ (North Karnataka) ಭಾಗದ ನದಿಗಳಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಿದೆ.

ಮುಂದೆ ಓದಿ ...
 • Share this:
top videos

  ಮಂಗಳವಾರದಿಂದ ಉತ್ತರ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯ ಪ್ರಮಾಣ (Rainfall) ತಗ್ಗಿದೆ. ಆದರೆ ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿರುವ ಕಾರಣ ನದಿಗಳು (Karnataka Rivers) ತುಂಬಿ ಹರಿಯುತ್ತಿವೆ. ಇತ್ತ ಮಹಾರಾಷ್ಟ್ರದ ಪಶ್ವಿಮ ಘಟ್ಟದಲ್ಲಿ (Western Hills, Mangaluru) ಮಳೆ ಆಗುತ್ತಿರುವ ಕಾರಣ, ಉತ್ತರ ಕರ್ನಾಟಕ (North Karnataka) ಭಾಗದ ನದಿಗಳಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಿದೆ. ಬೆಂಗಳೂರಿನ ಚರಂಡಿ ನೀರು ಹರಿಯುತ್ತಿದ್ದ ಅರ್ಕಾವತಿ ನದಿ (Arkavati River) ದಶಕಗಳಗಳ ಬಳಿಕ ತನ್ನ ನೈಜರೂಪಕ್ಕೆ ಬಂದಿದೆ. ಇನ್ನು ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ (Vani vilas Sagar) ಆರು ದಶಕಗಳ ಗರಿಷ್ಠ ಮಟ್ಟ ತಲುಪಿದೆ. ಕೋಲಾರ ಜಿಲ್ಲೆಯ ಯರಗೋಳ (Yaragola Dam) ಜಲಾಶಯ ಸಹ ಭರ್ತಿಯಾಗಿದೆ. ಹಾಸನ, ಶಿವಮೊಗ್ಗ, ಮಂಗಳೂರು, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಭಾಗದಲ್ಲಿ ಮಳೆ ಮುಂದುರಿದಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರ್ತೋಜಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರ (National Highway 275) ಬದಿಯಲ್ಲಿ ಇರುವ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ (Chikkamagaluru Raifall) ಆಶ್ಲೇಷಮಳೆ ಅಬ್ಬರಿಸುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದ ಜನರು ರೋಸಿ ಹೋಗಿದ್ದಾರೆ.

  First published: