ಕರ್ನಾಟಕದ (Karnataka Rainfall) ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಒಣ ಹವೆ ಇರಲಿದೆ. ಬೆಂಗಳೂರು, ಮೈಸೂರು, ಬೆಂಗಳೂರು ಗ್ರಾಮಾಂತರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತದಿಂದಾಗಿ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಸಣ್ಣ ಪ್ರಮಾಣದ ಮಳೆಯಾಗಿತ್ತು. ಕೊಡಗು, ಶಿವಮೊಗ್ಗ,. ಹಾಸನ, ಚಿಕ್ಕಮಗಳೂರಿನಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಂದು ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾರೀ ಮಳೆಯ ನಿರೀಕ್ಷೆಯಲ್ಲಿ ತಮಿಳುನಾಡು (Tamilnadu Rainfall) ರಾಜಧಾನಿ ಚೆನ್ನೈ (Chennai) ಸೇರಿದಂತೆ ಏಳು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯು ಇಂದು ತಿರುನಲ್ವೇಲಿ ಮತ್ತು ಕನ್ಯಾಕುಮಾರಿ, ರಾಮನಾಥಪುರಂ ಮತ್ತು ತೂತುಕುಡಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಜಿಲ್ಲಾವಾರು ವಾತವರಣ ಹೇಗಿದೆ? (ಗರಿಷ್ಠ ಮತ್ತು ಕನಿಷ್ಠ, ಡಿಗ್ರಿ ಸೆಲ್ಸಿಯಸ್)
ಬೆಂಗಳೂರು 25-19, ಮೈಸೂರು 27-20, ಚಾಮರಾಜನಗರ 27-20, ರಾಮನಗರ 27-21, ಮಂಡ್ಯ 27-20, ಬೆಂಗಳೂರು ಗ್ರಾಮಾಂತರ 25-19, ಚಿಕ್ಕಬಳ್ಳಾಪುರ 24-18, ಕೋಲಾರ 24-19, ಹಾಸನ 25-18, ಚಿಕ್ಕಮಗಳೂರು 26-18‘,
ಇದನ್ನೂ ಓದಿ: Astrology: ವಾರದ ಆರಂಭದ ದಿನ ಈ ರಾಶಿಯವರಿಗೆ ಭರ್ಜರಿ ಲಾಭ; 12 ರಾಶಿಗಳ ದಿನ ಭವಿಷ್ಯ ಹೀಗಿದೆ
ದಾವಣಗೆರೆ 26-21, ಶಿವಮೊಗ್ಗ 29-21, ಕೊಡಗು 26-18, ತುಮಕೂರು 26-20, ಉಡುಪಿ 32-25, ಮಂಗಳೂರು 32-24, ಉತ್ತರ ಕನ್ನಡ 29-22, ಧಾರವಾಡ 27-20, ಹಾವೇರಿ 28-21, ಹುಬ್ಬಳ್ಳಿ 27-21, ಬೆಳಗಾವಿ 27-20,, ಗದಗ 27-21, ಕೊಪ್ಪಳ 26-21, ವಿಜಯಪುರ 27-20, ಬಾಗಲಕೋಟ 27-21, ಕಲಬುರಗಿ 28-21, ಬೀದರ್ 27-18, ಯಾದಗಿರಿ 28-22, ರಾಯಚೂರ 27-21 ಬಳ್ಳಾರಿ 26-21
ತಮಿಳುನಾಡಿನಲ್ಲಿ ದಾಖಲೆಯ ಮಳೆ, ಇಲ್ಲಿದೆ ವಿವರ
ಭಾರಿ ಮಳೆಯ ಮುನ್ಸೂಚನೆಯ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ವರುಣರಾಯ ಕೊಂಚ ಸಮಯ ಬಿಡುವು ನೀಡಿದ್ದನು. ಚೆನ್ನೈನಲ್ಲಿ ಸಂಜೆ 5:30 ರವರೆಗೆ 6.5 ಮಿಮೀ, ಕನ್ಯಾಕುಮಾರಿ 4 ಮಿಮೀ, ನಾಗಪಟ್ಟಣಂ 17 ಮಿಮೀ, ತೂತುಕುಡಿ 0.5 ಮಿಮೀ, ತಿರುಚೆಂದೂರ್ 11 ಮಿಮೀ, ಮತ್ತು ಕೊಡೈಕೆನಾಲ್ 15 ಮಿಮೀ ಮಳೆಯಾಗಿದೆ. ಕಡಲೂರಿನಲ್ಲಿ 7 ಮತ್ತು ಪುದುಚೇರಿಯಲ್ಲಿ 6.6 ಸೆಂ.ಮೀ ಮಳೆಯಾಗಿದೆ.
ತಮಿಳುನಾಡಿನ ಮೂರನೇ ಎರಡರಷ್ಟು ಭಾಗ ಜಲಾವೃತ
ತಮಿಳುನಾಡಿನಲ್ಲಿ 50,000 ಹೆಕ್ಟೇರ್ಗಿಂತಲೂ ಹೆಚ್ಚು ಕೃಷಿ ಭೂಮಿ ಭಾರೀ ಮಳೆಗೆ ತುತ್ತಾಗಿದೆ. ಈ ಮಾನ್ಸೂನ್ ಋತುವಿನಲ್ಲಿ ಸರಾಸರಿ ಹಿಂಗಾರು ಮಳೆಗಿಂತ ಶೇಕಡಾ 68 ರಷ್ಟು ಹೆಚ್ಚು ಮಳೆಯಾಗಿದೆ. ಅಕ್ಟೋಬರ್ನಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 2,300 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ನವೆಂಬರ್ ಎರಡನೇ ವಾರದಲ್ಲಿ ಸತತ ಎರಡು ಬಾರಿ ಮಳೆ ಸುರಿದಿದ್ದರಿಂದ ರಾಜ್ಯದ ಮೂರನೇ ಎರಡರಷ್ಟು ಭಾಗ ಜಲಾವೃತಗೊಂಡಿದೆ.
ಇದನ್ನೂ ಓದಿ: Water : ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ..?
ಜನ ಜೀವನ ಸಂಪೂರ್ಣ ಅಸ್ತವ್ಯಸ್ಥ
ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳು, ಕಟ್ಟಡಗಳು ಮತ್ತು ರಸ್ತೆಗಳಿಗೆ ವ್ಯಾಪಕ ಹಾನಿಯಾಗಿದೆ. ಇದು ಇಲ್ಲಿಯವರೆಗೆ ಹಲವಾರು ಪ್ರದೇಶಗಳಲ್ಲಿ ಜಲಾವೃತ ಮತ್ತು ಪ್ರವಾಹಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಂಳೆ ಎದುರಿಸುತ್ತಿರುವ ಪರಿಣಾಮ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಮತ್ತೆ ಮಳೆಯ ಅಲರ್ಟ್
ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ಕಡಲೂರು, ನಾಗಪಟ್ಟಿಣಂ, ತಿರುವರೂರು, ತಂಜಾವೂರು, ಮೈಲಡುತುರೈ ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳಲ್ಲಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ