Karnataka Weather Today: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ತುಂತುರು ಮಳೆ

ಬಂಗಾಳ ಕೊಲ್ಲಿಯುಂಟಾದ (Bay Of Bengal) ವಾಯಭಾರ ಕುಸಿತದಿಂದಾಗಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ತುಂತುರು ಮಳೆ(Rainfall)ಯಾಗಲಿದೆ. ಮಳೆಯ ಜೊತೆ ಮೋಡ ಕವಿದ (Cloudy Weather) ವಾತಾವರಣ ಸಹ ನಿರ್ಮಾಣಗೊಳ್ಳಲಿದ್ದು. ಚಳಿಯ (Winter) ಪ್ರಮಾಣವೂ ಏರಿಕೆಯಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಂಗಾಳ ಕೊಲ್ಲಿಯುಂಟಾದ (Bay Of Bengal) ವಾಯಭಾರ ಕುಸಿತದಿಂದಾಗಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ತುಂತುರು ಮಳೆ(Rainfall)ಯಾಗಲಿದೆ. ಮಳೆಯ ಜೊತೆ ಮೋಡ ಕವಿದ (Cloudy Weather) ವಾತಾವರಣ ಸಹ ನಿರ್ಮಾಣಗೊಳ್ಳಲಿದ್ದು. ಚಳಿಯ (Winter) ಪ್ರಮಾಣವೂ ಏರಿಕೆಯಾಗಲಿದೆ. ಶನಿವಾರ ಬೆಂಗಳೂರು ಇಡೀ ದಿನ ಕೂಲ್ ಕೂಲ್ ಆಗಿತ್ತು ಕೆಲವು ಭಾಗಗಳಲ್ಲಿ ಮಳೆಯ ಸಿಂಚನವೂ ಸಹ ಆಗಿತ್ತು. ಇಂದು ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ (Winter) ಸಹ ರಾಜ್ಯದಲ್ಲಿ (Karnataka Rains) ಆರಂಭವಾಗಲಿದೆ. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ. 

ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.

ತಮಿಳುನಾಡಿನಲ್ಲಿ ಮಳೆಯ ರುದ್ರ ತಾಂಡವ

ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ (Tamilnadu Rains) ಹಿನ್ನೆಲೆಯಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ರಾಜಧಾನಿ ಚೆನ್ನೈ ಸೇರಿದಂತೆ ಚೆಂಗಲಗಟ್ಟು, ತಿರುವಳ್ಳೂರ್  ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:  Astrology: ಭಾನುವಾರದ ಈ ದಿನ ವೃಶ್ಚಿಕ ರಾಶಿಗೆ ಲಾಭ; ಹೇಗಿರಲಿದೆ ಧನುರಾಶಿಯವರ ದಿನ; ಇಲ್ಲಿದೆ ದಿನಭವಿಷ್ಯ

ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನ 20 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷನೆ ಮಾಡಲಾಗಿದೆ. ತಮಿಳುನಾಡಿನ ಕರಾವಳಿಯ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಮಳೆ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಮುಂದಿನ 48 ಗಂಟೆಗಳ ಕಾಲ, ಚೆನ್ನೈ ಮತ್ತು ಉಪನಗರಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಕೊಮೊರಿನ್ ಪ್ರದೇಶ ಮತ್ತು ಪಕ್ಕದ ಶ್ರೀಲಂಕಾದಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಭಾರೀ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಎಲ್ಲೆಲ್ಲಿ ಮಳೆ?

ಈರೋಡ್, ನಾಮಕ್ಕಲ್, ಕರೂರ್, ಸೇಲಂ, ತಿರುಚಿರಾಪಳ್ಳಿ, ರಾಮನಾಥಪುರಂ, ಶಿವಗಂಗಾ, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ವೆಲ್ಲೂರು, ರಾಣಿಪೇಟ್ ಮತ್ತು ತಿರುಪತ್ತೂರ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಡಲೂರು, ಅರಿಯಲೂರು, ಪೆರಂಬಲೂರು, ಪುದುಕೊಟ್ಟೈ, ತಂಜಾವೂರು, ತಿರುವರೂರು, ನಾಗಪಟ್ಟಣಂ ಮತ್ತು ಮೈಲಾಡುತುರೈ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಲ್ ನಲ್ಲಿಯೂ ಮಳೆಯಾಗಿರುವ ವರದಿಗಳು ಬರುತ್ತಿವೆ.

ಇದನ್ನೂ ಓದಿ:  Idli : ಶೀಘ್ರವೇ ಬೆಂಗಳೂರಲ್ಲಿ ಶುರುವಾಗಲಿದೆ ಇಡ್ಲಿ ಎಟಿಎಂ..!

ಭಾನುವಾರದ ನಂತರ ಮಳೆಯ ಪ್ರಮಾಣ ಇಳಿಕೆ

ಭಾನುವಾರದ ನಂತರ, ನಾವು ಮಳೆಯಲ್ಲಿ ಕ್ರಮೇಣ ಇಳಿಕೆಯನ್ನು ನಿರೀಕ್ಷಿಸಬಹುದು ಮತ್ತು ಕೆಲವು ದಿನ ಒಣ ಹವೆ ಮುಂದುವರಿಯಲಿದೆ ಎಂದು ಚೆನ್ನೈನ IMD, ಪ್ರದೇಶ ಚಂಡಮಾರುತ ಎಚ್ಚರಿಕೆ ಕೇಂದ್ರದ ನಿರ್ದೇಶಕ ಎನ್ ಪುವಿಯರಸನ್ ಹೇಳಿದ್ದಾರೆ.

ಸಂಕಷ್ಟದಲ್ಲಿ ಕಬ್ಬು ಬೆಳೆಗಾರರು

ಅಕಾಲಿಕ ಮಳೆಯಿಂದ  ಗದ್ದೆಗಳಿಲ್ಲಿ ನೀರು ತುಂಬಿ ಜಮೀನು ಕೆಸರು ಗದ್ದೆಮತಾಗಿದೆ.  ಚಿಕ್ಕೋಡಿ, ರಾಯಬಾಗ, ಅಥಣಿ, ಹುಕ್ಕೇರಿ ತಾಲೂಕಿನಲ್ಲಿ ಸುರಿದ ಮಳೆಯಿಂದ ಕಟಾವು ಮಾಡಿದ ಕಬ್ಬು ಕಾರ್ಖಾನೆಗೆ  ಕಳಿಸಲಾಗದೆ ರೈತ ಪರದಾಡುತ್ತಿದ್ದಾನೆ. ಮಳೆಯಿಂದ ಜಮೀನುಗಳಿಗೆ ಟ್ರಾಕ್ಟರಗಳು ಬರುತ್ತಿಲ್ಲಾ. ಗದ್ದೆಗಳಲ್ಲಿ ಟ್ರಾಕ್ಟರ್ ಗಳು  ಸಿಲುಕಿ ಕೊಂಡಿದ್ದು ಟ್ರಾಕ್ಟರ್ ಗಳನ್ನ ಹೊರ ತೆಗೆಯಲು  ರೈತರು ಹರ ಸಾಹಸ ಪಡುತ್ತಿದ್ದಾರೆ. ಪರಿನಾಮ ಕಟಾವು ಮಾಡಿದ ಕಬ್ಬು ಗದ್ದೆಯಲ್ಲೇ ಬೀಳುವಂತಾಗಿದೆ.

ನೆಲ ಕಚ್ಚಿದ ಭತ್ತದ ಬೆಳೆ

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಗೆ ಭತ್ತ ನೆಲಕಚ್ಚಿದೆ. ಭತ್ತದ ಬೆಳೆ ಕಾಳು ಕಟ್ಟುವ ಸಮಯ ಇದಾಗಿದ್ದು, ಗದ್ದೆಗಳಲ್ಲಿ ನೀರಿನ ಅಂಶ ಕಡಿಮೆ ಇರಬೇಕಾಗಿತ್ತು. ಆದರೆ ತೀವ್ರ ಮಳೆ ಸುರಿಯುತ್ತಿರುವುದರಿಂದ ನೀರಿನ ಅಂಶ ಜಾಸ್ತಿಯಾಗಿ ಭತ್ತ ಸಂಪೂರ್ಣ ಜೊಳ್ಳಾಗುತ್ತಿದೆ. ಇದರಿಂದ ಮುಂದಿನ ಒಂದು ವರ್ಷದ ಜೀವನಕ್ಕೆ ಏನು ಮಾಡಬೇಕು ಎನ್ನೋ ಚಿಂತೆಗೆ ರೈತರು ಬಿದ್ದಿದ್ದಾರೆ.
Published by:Mahmadrafik K
First published: