Karnataka Weather Today; ಇಂದು ಸಹ ರಾಜ್ಯದಲ್ಲಿ ಮಳೆಯ ಸಿಂಚನ

ಶನಿವಾರ ಸಂಜೆ ಆರು ಗಂಟೆಯಿಂದಲೇ ಹಾಸನ ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸಂಜೆ ಆರಂಭವಾದ ಮಳೆಗೆ ವ್ಯಾಪಾರಸ್ಥರು ಸೇರಿದಂತೆ ಜನರು ಹೈರಾಣದರು. ರಸ್ತೆಗಳಲ್ಲಿ ನೀರು ನದಿಗಳಂತೆ ಹರಿದ ದೃಶ್ಯಗಳು ಕಂಡು ಬಂದವು. ಹಾಸನದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ.

ಮಳೆ

ಮಳೆ

  • Share this:
ಬೆಂಗಳೂರು: ಇಂದು ಬೆಂಗಳೂರು (Bengaluru Rainfall) ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿಯಲಿದ್ದು, ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶಗಳ (Coastal Karnataka) ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಇಂದು ಬೆಂಗಳೂರಿನಲ್ಲಿ (Bengaluru) ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇದೇ ವಾತಾವರಣ ಮಂಗಳವಾರದವರೆಗೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ವಾಹನ ಸವಾರರು ಹೈರಾಣೋಗೋದು ಬಹುತೇಕ ಖಚಿತವಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ಹಾಸನದಲ್ಲಿ ಭಾರೀ ಮಳೆ

ಶನಿವಾರ ಸಂಜೆ ಆರು ಗಂಟೆಯಿಂದಲೇ ಹಾಸನ ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸಂಜೆ ಆರಂಭವಾದ ಮಳೆಗೆ ವ್ಯಾಪಾರಸ್ಥರು ಸೇರಿದಂತೆ ಜನರು ಹೈರಾಣದರು. ರಸ್ತೆಗಳಲ್ಲಿ ನೀರು ನದಿಗಳಂತೆ ಹರಿದ ದೃಶ್ಯಗಳು ಕಂಡು ಬಂದವು. ಹಾಸನದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ.

ಇದನ್ನೂ ಓದಿ:  Astrology: ಭಾನುವಾರದ ಈ ದಿನದ ದ್ವಾದಶ ರಾಶಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಉಡುಪಿ, ಮಂಗಳೂರು ಮತ್ತು ಉತ್ತರ  ಕನ್ನಡ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ ಹಾಗಾಗಿ ಸಮುದ್ರ ತೀರದ ಮತ್ತು ಮೀನುಗಾರರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಇನ್ನುಳಿದಂತೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಭಾಗದಲ್ಲಿಯೂ ಮಳೆ ಆಗಲಿದೆ. ಬೆಂಗಳೂರಿನಲ್ಲಿ ಪ್ರತಿಬಾರಿಯಂತೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.

ಕೊಪ್ಪಳ, ಬೀದರ್ ಜಿಲ್ಲೆಯ ಕೆಲವು ಭಾಗ, ಕಲಬುರಗಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಯಲ್ಲಿಯೂ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಅಲ್ಲಲ್ಲಿ ಚದುರಿದ ಮಳೆಯಾಗಲಿದೆ. ಇನ್ನು ರಾಯಚೂರು ಮತ್ತು ಬಳ್ಳಾರಿಯಲ್ಲಿ ಗರಿಷ್ಠ 31 ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ  ಬಹುತೇಕ ಮೋಡ ಕವಿದ ವಾತಾವರಣವೇ ಇರಲಿದೆ. ಕಳೆದ ಎರಡು ದಿನಗಳಿಂದ ಒಂದೇ ರೀತಿಯ ತಾಪಮಾನ ದಾಖಲಾಗುತ್ತಿದೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ನಗರ ಪ್ರದೇಶದಲ್ಲಿ ಕುಸಿಯುತ್ತಿದೆ ಫಲವತ್ತತೆಯ ದರ: ಆತಂಕ ಮೂಡಿಸುತ್ತಿದೆ ವರದಿ

ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಳೆ

ಕಳೆದ ವಾರದ ಮಳೆಯಿಂದ ಚೇತರಿಸಿಕೊಳ್ಳುತ್ತಿರುವ  ಕೇರಳದಲ್ಲಿ ಮತ್ತೆ ಯೆಲ್ಲೂ ಅಲರ್ಟ್ (Yellow Alert) ಘೋಷಣೆ ಮಾಡಲಾಗಿತ್ತು. ಕೇರಳದ (Kerala) 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು. ಶುಕ್ರವಾರದಿಂದಲೇ ಮಳೆ ಆರಂಭಗೊಂಡಿದೆ. ಕೇರಳದ ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಬಗ್ಗೆ  ವರದಿಗಳು ಪ್ರಕಟವಾಗುತ್ತಿವೆ. ಇನ್ನೂ ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶ (Andhra Pradesh) ಮತ್ತು ಕರ್ನಾಟಕದಲ್ಲಿ ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

468 ಕುಟುಂಬಗಳ ಸ್ಥಳಾಂತರ

ನಿರಂತರ ಮಳೆಯಿಂದಾಗಿ ಕೇರಳದ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಡ್ಯಾಂಗಳ ಗೇಟ್ ಓಪನ್ ಮಾಡಲಾಗುತ್ತಿದೆ, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಇದುಕ್ಕಿ ಜಲಾಶಯದ ವ್ಯಾಪ್ತಿಯಲ್ಲಿರುವ ಆರು ಗ್ರಾಮಗಳ ಸುಮಾರು 468 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೇರಳದ ರಾಜಧಾನಿ ತಿರುವನಂತರಪುರಂ, ಕೊಲ್ಲಂ, ಪಥನಂಮಿಥಟ್ಟಾ, ಕೊಟ್ಟಾಯಂ ಮತ್ತು ಇದುಕ್ಕಿ ಜಿಲ್ಲೆಗಳಲ್ಲಿ ನವೆಂಬರ್ 1ರವರೆಗೆ ಮಳೆ ಬೀಳುಬ ಬಗ್ಗೆ ಅಂದಾಜಿಸಲಾಗಿದೆ.

ಬಂಗಾಳಕೊಲ್ಲಿ ಮಧ್ಯ ಭಾಗದಲ್ಲಿ ವಾಯುಭಾರ ಕುಸಿತವಾಗುತ್ತಿದೆ, ಹೀಗಾಗಿ ತಮಿಳುನಾಡು ಮುಂದಿನ ಎರಡ್ಮೂರು ದಿನ ರಣಮಳೆಗೆ ಸಾಕ್ಷಿಯಾಗಬಹುದು, ತಮಿಳುನಾಡು ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ. ಜೊತೆಗೆ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಕರಾವಳಿಯಲ್ಲಿ ಮಳೆ ಸುರಿಯಲಿದೆ ಎಂದು ಚೆನ್ನೈ ನ ಹವಾಮಾನ ಇಲಾಖೆಯ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಡ್ಯಾಂಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.  ಈ ಹಿನ್ನೆಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮೈಸೂರು ಭಾಗದ ಕೆಆರ್ ಎಸ್ ಬಹುತೇಕ ಭರ್ತಿಯಾಗಿದೆ.
Published by:Mahmadrafik K
First published: