Karnataka Weather Today; ಮಳೆರಾಯನ ಬ್ರೇಕ್, ಶೀತಗಾಳಿ ಅನುಭವ, ಮುಂದಿನ 24 ಗಂಟೆ ಹೇಗಿರಲಿದೆ ಹವಾಮಾನ?

ಬೆಂಗಳೂರಿನಲ್ಲಿ (Bengaluru Rainfall) ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮುಂದಿನ 24 ಗಂಟೆ ಮಳೆಯ ಅಬ್ಬರ ನಿಲ್ಲಲಿದೆ. ಬುಧವಾರ ಮತ್ತೆ ಮಳೆರಾಯ ನಗರಕ್ಕೆ ಎಂಟ್ರಿ ಕೊಡಲಿದ್ದಾನೆ.

ಮೋಡ ಕವಿದ ವಾತಾವರಣ

ಮೋಡ ಕವಿದ ವಾತಾವರಣ

  • Share this:
ಬೆಂಗಳೂರು: ಮಳೆ(Rainfall)ಅರಾಯ ಬ್ರೇಕ್ ನೀಡಿದ್ದು, ಮುಂದಿನ ಎರಡು ದಿನಗಳ ರಾಜ್ಯದಲ್ಲ ಒಣಹವೆ ಮುಂದುವರಿಯಲಿದೆ. ಮಳೆಗಾಲದಿಂದ ನಿಧಾನವಾಗಿ ಚಳಿಗಾಲಕ್ಕೆ (Winter) ವಾತಾವರಣ ಬದಲಾಗುತ್ತಾ ತೆರಳುತ್ತಿದ್ದು, ಶೀತಗಾಳಿ (Cold wind) ಆರಂಭಗೊಳ್ಳುತ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಆದ್ರೆ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಕೃತಕ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ (Bengaluru Rainfall) ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮುಂದಿನ 24 ಗಂಟೆ ಮಳೆಯ ಅಬ್ಬರ ನಿಲ್ಲಲಿದೆ. ಬುಧವಾರ ಮತ್ತೆ ಮಳೆರಾಯ ನಗರಕ್ಕೆ ಎಂಟ್ರಿ ಕೊಡಲಿದ್ದಾನೆ.

ಮುಂದಿನ ಎರಡು ದಿನ ಮಳೆ ಸಾಧ್ಯತೆ

ಇನ್ನು ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಗದಗ, ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆಯಲ್ಲಿ ಒಣ ಹವೆ ಇರಲಿದೆ. ಶನಿವಾರ ಮತ್ತು ಭಾನುವಾರ ಸಹ ಈ ಭಾಗಗಳಲ್ಲಿ ಮಳೆಯಾಗಿತ್ತು. ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮೋಡದ ಕವಿದ ವಾತಾವರಣ ನಿರ್ಮಾಣವಾಗಿದ್ರೆ, ಅಲ್ಲಲ್ಲಿ ಚದುರಿದ ಮಳೆಯಾಗಿತ್ತು. ಗುರುವಾರದಿಂದ ಎರಡು ದಿನ ಮಳೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:  Astrology: ಈ ಐದು ರಾಶಿಯವರಿಗೆ ಇಂದು ಅದೃಷ್ಟದ ದಿನ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಬೆಳಗಾವಿ, ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕ ಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಹಾಸನ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ದಾವಣೆಗೆರೆಯಲ್ಲಿ ಸಂಪರ್ಕ ಕಡಿತ

ಕಳೆದ ಮೂರುದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಕೆಲ ಹಳ್ಳಿಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಾಳ- ಕೆಂಗಾಪುರ ರಸ್ತೆ ಸಂಪರ್ಕ ಕಡಿತವಾಗಿದ್ದು, ಹರನಹಳ್ಳಿ ,ಕೆಂಗಾಪುರ ಮೂಲಕ ಕಬ್ಬಾಳ ಸಂಪರ್ಕಿಸುವ 8 ಹಳ್ಳಿಗಳಿಗು ರಸ್ತೆ ಬಂದ್ ಆಗಿವೆ. ಅತಿ ಹೆಚ್ಚು ಮಳೆಯಾದ ಹಿನ್ನೆಲೆ ಏಷ್ಯಾದ ಅತಿದೊಡ್ಡ ಕೆರೆ, ಶಾಂತಿಸಾಗರ ಕೆರೆ ತುಂಬಿ ಕೊಡಿ ಒಡೆದಿದೆ. ಹರಿದ್ರಾವತಿ ಹಳ್ಳ ತುಂಬಿ 100 ಮೀಟರ್ ನಷ್ಟು ಅಗಲವಾಗಿ ಹರಿಯುತ್ತಿರುವುದರಿಂದ ಹರಿಯುವ ನೀರಿನಲ್ಲೇ ಜನರ-ವಿದ್ಯಾರ್ಥಿಗಳ ಓಡಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:  Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಕಳೆದ 24 ಗಂಟೆ ಎಲ್ಲೆಲ್ಲಿ ಮಳೆ?

ಚಿಕ್ಕಮಗಳೂರಿನಲ್ಲಿ ಸುರಿದ ಮಳೆಗೆ ಕುರುವಂಗಿ ಕೆರೆ ತುಂಬಿ ರಸ್ತೆಗೆ ನೀರು ಹರಿದಿದೆ. ಕೆರೆಯ ಸಣ್ಣ ನಾಲೆಯಿಂದ ಹರಿದ ನೀರು ಸಮೀಪದ ಮನೆಗಳಿಗೂ ನುಗ್ಗಿತ್ತು.ರಸ್ತೆಯಲ್ಲಿ ಅಪಾರ ಪ್ರಮಾಣದ  ನೀರು ಹರಿದ ಪರಿಣಾಮ ಜನರು ಪರದಾಡುವಂತಾಗಿತ್ತು. ಇನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿತ್ತು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಾಪುರ ತಾಲೂಕಿನ ಕಿರವತ್ತಿ ಖಾರೆವಾಡದ ರೈತ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಮೃತ ಮಹಿಳೆಯನ್ನು 40 ವರ್ಷದ ಜಾನುಬಾಯಿ ಕಾನು ಶಳಕೆ ಎಂದು ಗುರುತಿಸಲಾಗಿದೆ. ಕುಕನೂರು ತಾಲೂಕು ಕುದರಿಮೋತಿ ಗ್ರಾಮದ ರೈತ ಲಾಡೆನ್ ಸಾಬ್ ಮನೆಗೆ ಹಿಂದಿರುಗುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದರು.

ಉತ್ತರ ಭಾರತದಲ್ಲಿಯೂ ಅಕಾಲಿಕ ಮಳೆ, ಹಿಮಪಾತ

ಪಂಜಾಜ್ ಮತ್ತು ಹರಿಯಾಣ (Punjab and Haryana) ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಮುಂದಿನ 48 ಗಂಟೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೈತರು ಬೆಳೆದ ಬೆಳೆಗಳೆಲ್ಲ ಮಳೆಗೆ ಹಾಳಾಗಿದ್ದು, ಅನ್ನದಾತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಲಡಾಕ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮಪಾತ(Snowfall)ವಾಗುತ್ತಿದ್ದು, ಮುಂದಿನ 24 ಗಂಟೆ ಜನರು ಎಚ್ಚರಿಕೆಯಿಂದಿರಬೇಕೆಂದ ಸೂಚನೆ ನೀಡಲಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲೂ ಇವತ್ತು ಮಳೆಯಾಗಲಿದೆ.
Published by:Mahmadrafik K
First published: