Karnataka Weather Report: ರಾಜ್ಯದಲ್ಲಿ ಮತ್ತೆ ಮೋಡ ಕವಿದ ವಾತಾವರಣ: ಈ ಜಿಲ್ಲೆಯಲ್ಲಿ ಮಳೆ ಸಾಧ್ಯತೆ

ಇಂದು ಉತ್ತರ ಕರ್ನಾಟಕದ (North Karnataka) ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದೆ. ಬೆಳಗ್ಗೆ ಚಳಿ (Cold) ಜೊತೆ ಮೋಡ ಕವಿದ ವಾತಾವರಣ ಜನರನ್ನು ಮತ್ತಷ್ಟು ನಡಗುವಂತೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Today: ಇಂದು ಉತ್ತರ ಕರ್ನಾಟಕದ (North Karnataka) ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದೆ. ಬೆಳಗ್ಗೆ ಚಳಿ (Cold) ಜೊತೆ ಮೋಡ ಕವಿದ ವಾತಾವರಣ ಜನರನ್ನು ಮತ್ತಷ್ಟು ನಡಗುವಂತೆ ಮಾಡಿದೆ. ಕೋಲಾರ (Kolar Rainfall) ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ, ಒಟ್ಟಾರೆಯಾಗಿ ರಾಜ್ಯದಲ್ಲಿ ಚಳಿ ಪ್ರಮಾಣ ಕಳೆದ ಒಂದು ವಾರಕ್ಕಿಂತ ಕಡಿಮೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.  

ಬೆಂಗಳೂರು ನಗರದಲ್ಲೊ ಚುಮು ಚುಮು ಚಳಿಯಲ್ಲಿ ತಂಪಾದ ಹಿತವನ್ನು ನೀಡುತ್ತಿದೆ. ಬೆಳಗಿನ ಜಾವ ಮತ್ತು ಸಂಜೆಯಾಗುತ್ತಿದ್ದಂತೆ ಬೀಸುವ ಸುಳಿಗಾಳಿಗೆ ಜನರು ಮನೆಯಿಂದ ಹೊರ ಬರದಂತೆ ತಡೆಯುತ್ತಿದೆ,

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ ( ಗರಿಷ್ಠ ಮತ್ತ ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-17, ಮೈಸೂರು 29.-17, ಚಾಮರಾಜನಗರ 29-17, ರಾಮನಗರ 28-17, ಮಂಡ್ಯ 29-17, ಬೆಂಗಳೂರು ಗ್ರಾಮಾಂತರ 27-17, ಚಿಕ್ಕಬಳ್ಳಾಪುರ 26-14, ಕೋಲಾರ 26-16, ಹಾಸನ 28-16, ಚಿಕ್ಕಮಗಳೂರು 28-15, ದಾವಣಗೆರೆ 26-21, ಶಿವಮೊಗ್ಗ 30-18, ಕೊಡಗು 29-15, ತುಮಕೂರು 28-17

ಇದನ್ನೂ ಓದಿ:  Bengaluru: ಸೆಕ್ಸ್ ಗೆ ಪೀಡಿಸ್ತಾಳೆ, ಊಟ ಹಾಕದೇ ಹಿಂಸೆ ನೀಡ್ತಾಳೆ: ಪತ್ನಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತಿ

ಉಡುಪಿ 32-25, ಮಂಗಳೂರು 33-23, ಉತ್ತರ ಕನ್ನಡ 32-18, ಧಾರವಾಡ 30-17, ಹಾವೇರಿ 31-18, ಹುಬ್ಬಳ್ಳಿ 31-17, ಬೆಳಗಾವಿ 29-17, ಗದಗ 29-17, ಕೊಪ್ಪಳ 29-18, ವಿಜಯಪುರ 29-17, ಬಾಗಲಕೋಟ 30-17, ಕಲಬುರಗಿ 30-17, ಬೀದರ್ 26-15, ಯಾದಗಿರಿ 30-18, ರಾಯಚೂರ 30-18, ಬಳ್ಳಾರಿ 29-18

ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ(Unseasonal Rain) ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಮುಂಗಾರು ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆ(Rainfall)ಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್ ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು(Dams) ಬಹುತೇಕ ಭರ್ತಿಯಾಗಿವೆ.

ಇದನ್ನೂ ಓದಿ:  TungaBhadra Dam: 40 ವರ್ಷಗಳ ನಂತರ ಡಿಸೆಂಬರ್ ನಲ್ಲಿ ಭರ್ತಿಯಾದ ಜಲಾಶಯ: ಯಾವ ರಾಜ್ಯಕ್ಕೆ ಎಷ್ಟು ನೀರು ಹಂಚಿಕೆ?

ವಾಡಿಕೆಗಿಂತ ಹೆಚ್ಚಿನ ಮಳೆ

ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಮಾವಿನ ಬೆಳೆಯ ಮೇಲೆ ಅಕಾಲಿಕ ಮಳೆಯ ಎಫೆಕ್ಟ್

ಕರ್ನಾಟಕದ ಕೆಲವು ಭಾಗಗಳಲ್ಲಿ ಇತ್ತೀಚಿನ ಅಕಾಲಿಕ ಮಳೆ ಮತ್ತು ಮೋಡ ಕವಿದ ವಾತಾವರಣವು ಸತತ ಎರಡನೇ ವರ್ಷವೂ ಮಾವಿನ ಬೆಳೆಯ ಮೇಲೆ ಪರಿಣಾಮ ಬೀರಬಹುದು. ಅಕಾಲಿಕ ಮಳೆಯಿಂದಾಗಿ ಹೂ ಬಿಡುವ ಪ್ರಕ್ರಿಯೆಗೂ ಅಡ್ಡಿಯಾಗಿದೆ. ಚಳಿಗಾಲದ ಆರಂಭದ ಹೊರತಾಗಿಯೂ, ಇನ್ನೂ ಅನೇಕ ಭಾಗಗಳಲ್ಲಿ ಮಳೆಯಾಗುತ್ತಿದೆ.

ಇದರಿಂದಾಗಿ ಹೂಬಿಡುವ ಪ್ರಕ್ರಿಯೆಗೆ ಅನುಕೂಲಕರ ಹವಾಮಾನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿಲ್ಲ ಹೂ ಬಿಡುವ ಪ್ರಕಿಯೆಗೆ ಶುಷ್ಕ ಮತ್ತು ಶೀತ ಹವಾಮಾನ ಅಗತ್ಯ. ಆದರೆ ನಿರಂತರ ಸುರಿಯುತ್ತಿರುವ ಮಳೆ ಈ ನೈಸರ್ಗಿಕ ಹೂ ಬಿಡುವ ಪ್ರಕ್ರಿಯೆಗೆ ಅಡ್ಡಿಯುನ್ನುಂಟು ಮಾಡುತ್ತಿದೆ.

ತರಕಾರಿ ಬೆಲೆ ಏರಿಕೆ

ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ (Karnataka Rains) ಮಾರುಕಟ್ಟೆಗಳಿಗೆ (Market) ಹಣ್ಣು, ತರಕಾರಿಯ (Fruits And Vegetables) ಪೂರೈಕೆ ಆಗುತ್ತಿಲ್ಲ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆ (Price Hike)ಯಾಗಿದ್ದು, ಮಳೆಯ ಚಳಿಯಲ್ಲಿ ಬೆಲೆ ಏರಿಕೆ ಗ್ರಾಹಕರ (Customer) ಜೇಬನ್ನು ಸುಡುತ್ತಿದೆ. ಹಾಪ್ ಕಾಮ್ಸ್ ಗಳಲ್ಲೂ ದರ ಏರಿಕೆಯಾಗಿದ
Published by:Mahmadrafik K
First published: