Karnataka Weather Report: ಮತ್ತೆ ರಾಜ್ಯದಲ್ಲಿ 2 ದಿನ ಮಳೆ ಸಾಧ್ಯತೆ

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯ ಇರಲಿದ್ದು, ಚಳಿ ಸಹ ಹೆಚ್ಚಾಗಲಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಶುಕ್ರವಾರ ಮತ್ತು  ಶನಿವಾರ ಮಳೆಯಾಗುವ (Rainfall) ಸಾಧ್ಯತೆಗಳಿವೆ. ಕಳೆದ 15 ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ (Karnataka Rains) ಮಳೆಯಾಗುತ್ತಿದೆ. ಆದ್ರೆ ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಮಳೆಯ ಪ್ರಮಾಣ ಕಡಿಮೆ. ಆದ್ರೆ ಈ ಅಕಾಲಿಕ ಮಳೆ ರೈತರಿಗೆ ಸಂಕಷ್ಟ ತಂದೊಡ್ಡುತ್ತಿದೆ. ಈಗ ಮತ್ತೆ ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯ ಇರಲಿದ್ದು, ಚಳಿ ಸಹ ಹೆಚ್ಚಾಗಲಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗಲಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ

ಬೆಂಗಳೂರು 26-18, ಮೈಸೂರು 28-19, ಚಾಮರಾಜನಗರ 28-20, ರಾಮನಗರ 28-19, ಮಂಡ್ಯ 28-20, ಬೆಂಗಳೂರು ಗ್ರಾಮಾಂತರ 26-18, ಚಿಕ್ಕಬಳ್ಳಾಪುರ 25-16, ಕೋಲಾರ 26-17, ಹಾಸನ 27-16, ಚಿಕ್ಕಮಗಳೂರು 26-18‘, ದಾವಣಗೆರೆ 29-21, ಶಿವಮೊಗ್ಗ 28-21, ಕೊಡಗು 26-18, ತುಮಕೂರು 27-18

ಉಡುಪಿ 32-25, ಮಂಗಳೂರು 32-24, ಉತ್ತರ ಕನ್ನಡ 29-22, ಧಾರವಾಡ 31-24, ಹಾವೇರಿ 28-21, ಹುಬ್ಬಳ್ಳಿ 28-21, ಬೆಳಗಾವಿ 26-20, ಗದಗ 28-20, ಕೊಪ್ಪಳ 29-21, ವಿಜಯಪುರ 28-21, ಬಾಗಲಕೋಟ 29-21, ಕಲಬುರಗಿ 29-20, ಬೀದರ್ 27-18, ಯಾದಗಿರಿ 28-19, ರಾಯಚೂರ 29-20, ಬಳ್ಳಾರಿ 29-21

ಮತ್ತೆ ಭಾರೀ ಮಳೆಯ ಅಲರ್ಟ್

ಉತ್ತರ-ಈಶಾನ್ಯಕ್ಕೆ ಚಲಿಸುವಾಗ ಲಕ್ಷದ್ವೀಪದ ಪಶ್ಚಿಮದಲ್ಲಿ ಚಂಡಮಾರುತದ ಪರಿಚಲನೆ ವೇಗ ಪಡೆದುಕೊಳ್ಳವ ಸಾಧ್ಯತೆಗಳಿವೆ. ಒಂದು ವೇಳೆ ವೇಗ ಪಡೆದುಕೊಂಡದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿ ಭಾಗದಲ್ಲಿ ಸುಮಾರು 100 ರಿಂದ 120 ಮಿ.ಮೀ.ವರೆಗೆ ಮಳೆಯಾಗುವ  ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Tirupati: ತಿರುಪತಿ ಬೆಟ್ಟದಲ್ಲಿ ಮತ್ತೆ ಭೂಕುಸಿತ : ಜಸ್ಟ್​ ಮಿಸ್​.. ಬಸ್​ನಲ್ಲಿದ್ದ 20 ಜನ ಬಚಾವ್!

ಇಂದು ರಾತ್ರಿಯಿಂದಲೇ ಮಹಾರಾಷ್ಟ್ರದ ಪಶ್ಚಿಮದಿಂದ 60 ಕಿಮೀ/ಗಂಟೆಗೆ ಗರಿಷ್ಠ ಗಾಳಿಯ ವೇಗವನ್ನು ತಲುಪುವ ನಿರೀಕ್ಷೆಯಿದೆ, ಇದು ಚಂಡಮಾರುತದ ಮಾನದಂಡಗಳಾದ 63 ಕಿಮೀ/ಗಂಗಿಂತ ಕಡಿಮೆಯಾಗಿದೆ.

ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತದ ಪರಿಚಲನೆಯು ಆರಂಭಗೊಂಡಿದೆ. ಮಂಗಳವಾರದಿಂದ ಗುರುವಾರದವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಾದ್ಯಂತ ಒಟ್ಟು 150-200 ಮಿಮೀ ನಷ್ಟು ಮಳೆಯಾಗಲಿದೆ. ಈ ಮೋಡಗಳು ಬಂಗಾಳಕೊಲ್ಲಿಯ ಮೂಲಕ ವಾಯುವ್ಯ ಭಾಗಕ್ಕೆ ತಲುಪಲಿದೆ.

ಶನಿವಾರ ಮತ್ತೆ ಮಳೆ ಸಾಧ್ಯತೆ

ಶನಿವಾರ ಬೆಳಗ್ಗೆ ಅಥವಾ ಮಧ್ಯಾಹ್ಮ ಈ ಮಾರುತಗಳು ಆಂಧ್ರ ಪ್ರದೇಶದ ಕರಾವಳಿ ತಲುಪಲಿವೆ. ಈ ಸಮಯ ಕಡಲ ತೀರದ ವ್ಯಾಪ್ತಿಯಲ್ಲಿ 60 ಕಿಮೀ/ಗಂಟೆಗೆ ವೇಗವಾಗಿ ಗಾಳಿ ಬೀಸಲಿದೆ, ಸಮುದ್ರಕ್ಕೆ ಭಾರೀ ಅಲೆಗಳು ಅಪ್ಪಳಿಸಲಿವೆ. ಇದರ ಪರಿಣಾಮ ಶನಿವಾರ ಮತ್ತು ಭಾನುವಾರ ಮತ್ತೆ ಬೆಂಗಳೂರಿನಲ್ಲಿ ಮತ್ತೊಂದು ಹಂತದ ಮಳೆಯಾಗುವ  ಸಾಧ್ಯತೆಗಳು ಹೆಚ್ಚಿವೆ.

ಶುಕ್ರವಾರದಿಂದ ವಾರಾಂತ್ಯದವರೆಗೆ ಆಂಧ್ರಪ್ರದೇಶ, ಒಡಿಶಾದಿಂದ ಗಂಗಾನದಿ ಪಶ್ಚಿಮ ಬಂಗಾಳದವರೆಗೆ ಕರಾವಳಿಯಾದ್ಯಂತ ಒಟ್ಟು 150-200 ಮಿಮೀ ಮಳೆಯ ಪ್ರಮಾಣದೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಈಶಾನ್ಯ ಭಾರತದಲ್ಲಿ ಸರಾಸರಿ ತಪಾಮಾನ ಮತ್ತಷ್ಟು ಇಳಿಕೆಯಾಗಲಿದೆ.

ಇದನ್ನೂ ಓದಿ:  Astrology: ಗುರುವಾರದ ಈ ದಿನ ಹೀಗರಲಿದೆ 12 ರಾಶಿಗಳ ದಿನಭವಿಷ್ಯ

ಮಂಗಳವಾರ(Tuesday), ಬುಧವಾರ(Wednesday) ಕೂಡ ಭಾರೀ ಮಳೆಯಾಗಿದೆ. ಪರಿಣಾಮ  ತಿರುಪತಿ ಬೆಟ್ಟದಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು, ಬಸ್ಸಿ(Bus)ನಲ್ಲಿದ್ದ 20 ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ನಡೆದಿದೆ. ಬುಧವಾರ ಬೆಳಗ್ಗೆ ಬಸ್ಸೊಂದು ಬೆಟ್ಟಏರುತ್ತಿದ್ದ ವೇಳೆ, ಏಕಾಏಕಿ ಬಂಡೆ(Rock)ಯೊಂದು ಬೆಟ್ಟದಿಂದ ಕೆಳಗೆ ಉರುಳಿದೆ. ಇದನ್ನು ಚಾಲಕ(Driver) ತಕ್ಷಣವೇ ಗಮನಿಸಿ ಬಸ್ಸನ್ನು ನಿಲ್ಲಿಸಿದ ಕಾರಣ, ಬಸ್ಸಿನಲ್ಲಿದ್ದ 20 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
Published by:Mahmadrafik K
First published: