Karnataka Weather Report: ರಾಜ್ಯದಲ್ಲಿ ದಟ್ಟವಾದ ಮಂಜು, ಅಲ್ಲಲ್ಲಿ ಮೋಡ ಕವಿದ ವಾತಾವರಣ

ಇಂದು ಸಹ ಚಳಿ (Cold) ಮುಂದುವರಿದಿದ್ದು, ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಈ ವರ್ಷ ಸುರಿದ ಅಕಾಲಿಕ ಮಳೆಗೂ (Unseasonal Rain) ಬ್ರೇಕ್ ಬಿದ್ದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದಟ್ಟವಾದ ಮಂಜು ಜೊತೆ ಚಳಿ ಆವರಿಸಿದ್ದು, ಜನ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಇಂದು ಸಹ ಚಳಿ (Cold) ಮುಂದುವರಿದಿದ್ದು, ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಈ ವರ್ಷ ಸುರಿದ ಅಕಾಲಿಕ ಮಳೆಗೂ (Unseasonal Rain) ಬ್ರೇಕ್ ಬಿದ್ದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದಟ್ಟವಾದ ಮಂಜು ಜೊತೆ ಚಳಿ ಆವರಿಸಿದ್ದು, ಜನ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಚಳಿಯ ಪ್ರಮಾಣ ಕೊಂಚ ಇಳಿಕೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ ಸುಮಾರು 9 ಗಂಟೆವರೆಗೂ ದಟ್ಟವಾದ ಮಂಜು ಆವರಿಸಿ ಮಲೆನಾಡಿನ ಅನುಭವ ನೀಡುತ್ತಿದೆ. ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಆವರಿಸುತ್ತಿರುವ ಮಂಜಿನಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆ ಹಾಳುಗುವ ಭಯದಲ್ಲಿದ್ದಾರೆ. ಮಧ್ಯಾಹ್ನದ ನಂತರ ಎಂದಿನಂತೆ ಸೂರ್ಯದೇವ ಅಬ್ಬರಿಸಲಿದ್ದಾನೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-15, ಮೈಸೂರು 29-16, ಚಾಮರಾಜನಗರ 29-16, ರಾಮನಗರ 29-16, ಮಂಡ್ಯ 27-20, ಬೆಂಗಳೂರು ಗ್ರಾಮಾಂತರ 27-15, ಚಿಕ್ಕಬಳ್ಳಾಪುರ 26-14, ಕೋಲಾರ 27-16, ಹಾಸನ 28-14, ಚಿಕ್ಕಮಗಳೂರು 28-14, ದಾವಣಗೆರೆ 31-17, ಶಿವಮೊಗ್ಗ 32-17, ಕೊಡಗು 29-13, ತುಮಕೂರು 30-19, ಉಡುಪಿ 31-22, ಮಂಗಳೂರು 32-22

ಇದನ್ನೂ ಓದಿ: Astrology: ಕಟಕ ರಾಶಿಯವರು ಮಾನಸಿಕ-ದೈಹಿಕ ಆರೋಗ್ಯದ ಮೇಲೆ ಗಮನಹರಿಸಿ; ಇಲ್ಲಿದೆ ದಿನ ಭವಿಷ್ಯ

ಉತ್ತರ ಕನ್ನಡ 32-17, ಧಾರವಾಡ 30-16, ಹಾವೇರಿ 32-17,. ಹುಬ್ಬಳ್ಳಿ 31-16, ಬೆಳಗಾವಿ 29-15, ಗದಗ 30-16, ಕೊಪ್ಪಳ 29-17, ವಿಜಯಪುರ 30-17, ಬಾಗಲಕೋಟ 31-17, ಕಲಬುರಗಿ 29-17, ಬೀದರ್ 27-15, ಯಾದಗಿರಿ 29-17, ರಾಯಚೂರ 30-17, ಬಳ್ಳಾರಿ 31-18

ಮಾವಿನ ಬೆಳೆಯ ಮೇಲೆ ಅಕಾಲಿಕ ಮಳೆಯ ಎಫೆಕ್ಟ್

ಕರ್ನಾಟಕದ ಕೆಲವು ಭಾಗಗಳಲ್ಲಿ ಇತ್ತೀಚಿನ ಅಕಾಲಿಕ ಮಳೆ ಮತ್ತು ಮೋಡ ಕವಿದ ವಾತಾವರಣವು ಸತತ ಎರಡನೇ ವರ್ಷವೂ ಮಾವಿನ ಬೆಳೆಯ ಮೇಲೆ ಪರಿಣಾಮ ಬೀರಬಹುದು. ಅಕಾಲಿಕ ಮಳೆಯಿಂದಾಗಿ ಹೂ ಬಿಡುವ ಪ್ರಕ್ರಿಯೆಗೂ ಅಡ್ಡಿಯಾಗಿದೆ. ಚಳಿಗಾಲದ ಆರಂಭದ ಹೊರತಾಗಿಯೂ, ಇನ್ನೂ ಅನೇಕ ಭಾಗಗಳಲ್ಲಿ ಮಳೆಯಾಗುತ್ತಿದೆ.

ಇದರಿಂದಾಗಿ ಹೂಬಿಡುವ ಪ್ರಕ್ರಿಯೆಗೆ ಅನುಕೂಲಕರ ಹವಾಮಾನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿಲ್ಲ ಹೂ ಬಿಡುವ ಪ್ರಕಿಯೆಗೆ ಶುಷ್ಕ ಮತ್ತು ಶೀತ ಹವಾಮಾನ ಅಗತ್ಯ. ಆದರೆ ನಿರಂತರ ಸುರಿಯುತ್ತಿರುವ ಮಳೆ ಈ ನೈಸರ್ಗಿಕ ಹೂ ಬಿಡುವ ಪ್ರಕ್ರಿಯೆಗೆ ಅಡ್ಡಿಯುನ್ನುಂಟು ಮಾಡುತ್ತಿದೆ.

ಇದನ್ನೂ ಓದಿ:  ರಾಜ್ಯಾದ್ಯಂತ Night Curfew ಶುರು.. ಬೇಕಾಬಿಟ್ಟಿ ರಸ್ತೆಗಿಳಿದ್ರೆ ಬೀಳುತ್ತೆ ಸೀರಿಯಸ್ ಕೇಸ್.. ಹುಷಾರ್!

ಕಾಶ್ಮೀರದಲ್ಲಿ ಮೈನಸ್ ತಾಪಮಾನ

ಕಾಶ್ಮೀರದ ಕೊಕರ್ನಾಗ್ ಮತ್ತು ಪಹಲ್ಗಾಮ್ ಹೊರತುಪಡಿಸಿ ಹೆಚ್ಚಿನ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಘನೀಕರಿಸುವ ಹಂತಕ್ಕಿಂತ ಕಡಿಮೆಯಾಗಿದೆ. ಶನಿವಾರ ರಾತ್ರಿ ಕಣಿವೆಯಾದ್ಯಂತ ಕನಿಷ್ಠ ತಾಪಮಾನ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದಲ್ಲಿ ಶನಿವಾರ ರಾತ್ರಿ ಕನಿಷ್ಠ ಮೈನಸ್ 1.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಹಿಂದಿನ ರಾತ್ರಿಯ 1.7 ಡಿಗ್ರಿ ಸೆಲ್ಸಿಯಸ್‌ನಿಂದ ಕಡಿಮೆಯಾಗಿದೆ. ಕಣಿವೆಯ ಗೇಟ್‌ವೇ ಪಟ್ಟಣವಾದ ಖಾಜಿಗುಂಡ್‌ನಲ್ಲಿ ಕನಿಷ್ಠ ಮೈನಸ್ 1.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಛತ್ತೀಸ್‌ಗಢದಲ್ಲಿ ಭತ್ತದ ಕೃಷಿ ಕಾರ್ಯ ಭರದಿಂದ ಸಾಗುತ್ತಿದೆ. ಅಕಾಲಿಕ ಮಳೆಯಿಂದ ರೈತರ ಭತ್ತ, ತರಕಾರಿ ಜತೆಗೆ ದ್ವಿದಳ ಧಾನ್ಯಗಳ ಬೆಳೆಗಳು ಹಾಳಾಗಿವೆ. ಡಿಸೆಂಬರ್ 30ರ ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ವಾತಾವರಣ ತೆರವಾದ ನಂತರ ಕೀಟ ಬಾಧೆಯೂ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
Published by:Mahmadrafik K
First published: