Karnataka Weather Today: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಚಳಿಯ ಪ್ರಮಾಣ, ಈ ರಾಜ್ಯಗಳಲ್ಲಿ ಇಂದು-ನಾಳೆ ಮಳೆ

ಡಿಸೆಂಬರ್ 26 ಮತ್ತು 27ರಂದು ಜಮ್ಮು, ಹಿಮಾಚಲ ಪ್ರದೇಶ, ಪಂಜಾಬ್​, ಹರಿಯಾಣದ ಉತ್ತರ ಭಾಗ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗುವ ನಿರೀಕ್ಷೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Dec 26, 2021: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ಪ್ರಮಾಣ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಚಳಿ ಹಾಗೂ ಶೀತಗಾಳಿ ಹೆಚ್ಚಾಗುತ್ತಿದ್ದು, ಗಢ-ಗಢ ಚಳಿ(Winter)ಗೆ ಜನರು ನಡುಗುತ್ತಿದ್ದಾರೆ. ಡಿಸೆಂಬರ್(December) ಮೊದಲ ವಾರದವರೆಗೂ ಸುರಿದ ಮಳೆ ಈಗ ಕೊಂಚ ಬ್ರೇಕ್​​ ಕೊಟ್ಟಿದ್ದು, ಎಲ್ಲೆಡೆ ಶೀತಗಾಳಿ ಬೀಸುತ್ತಿದೆ. ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಂತೂ ದಟ್ಟ ಚಳಿಗೆ ಜನರು ತತ್ತರಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಇಂದು ಗರಿಷ್ಠ 28 ಮತ್ತು ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ದಾವಣಗೆರೆಯಲ್ಲಿ ಅತೀ ಕನಿಷ್ಠ ತಾಪಮಾನ ಅಂದರೆ 11.3 ಡಿಗ್ರಿ ಸೆಲ್ಸಿಯಸ್​ ದಾಖಲಾಗಲಿದೆ. 

ಇಂದೂ ಸಹ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಹಾಗೂ ಕೆಲವು ಕಡೆ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆಗಳಿರುತ್ತವೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಷಿಯಸ್​ ಇರುವ ಸಾಧ್ಯತೆಗಳಿರುತ್ತವೆ.

ಇನ್ನು, ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಬೇರೆ ರಾಜ್ಯಗಳಲ್ಲಿ ವರುಣ ಇನ್ನೂ ಸಹ ತನ್ನ ಆರ್ಭಟ ನಿಲ್ಲಿಸಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ.

ಇದನ್ನೂ ಓದಿ:

ಹೆಚ್ಚಾದ ಚಳಿಯ ಪ್ರಮಾಣ

ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಸದಾ ಬಿಸಿಲಿನಿಂದ ಕೂಡಿರುವ ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತವಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ಈ ತಿಂಗಳ ಕೊನೆಯವರೆಗೂ ಚಳಿ ಹೆಚ್ಚಾಗಿ ಇರಲಿದೆ.

ಇದನ್ನೂ ಓದಿ: Karnataka Weather Today: ಕರ್ನಾಟಕದಲ್ಲಿ ಹೆಚ್ಚಾದ ಚಳಿ, ಡಿಸೆಂಬರ್ 26 & 27ರಂದು ಈ ರಾಜ್ಯಗಳಲ್ಲಿ ಮಳೆ ಸಾಧ್ಯತೆ

ಈ ರಾಜ್ಯಗಳಲ್ಲಿ ಇಂದು-ನಾಳೆ ಮಳೆ

ತೀವ್ರವಾದ ಚಂಡಮಾರುತವು ಡಿಸೆಂಬರ್ 26ರಿಂದ ವಾಯುವ್ಯ ಭಾರತ ಮತ್ತು ಡಿಸೆಂಬರ್ 27ರಿಂದ ಮಧ್ಯ ಭಾರತದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಡಿಸೆಂಬರ್ 26 ಮತ್ತು 27ರಂದು ಪಂಜಾಬ್​​, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ಮಧ್ಯ ಪ್ರದೇಶ, ಛತ್ತೀಸ್​ಗಢ, ವಿದರ್ಭ, ಬಿಹಾರ ಮತ್ತು ಜಾರ್ಖಂಡ್​​​ನಲ್ಲಿ ಡಿಸೆಂಬರ್ 27ರಿಂದ 29ರವರೆಗೆ ಮಳೆಯಾಗುವ ಸಾಧ್ಯತೆ ಇದೆ.

ಆಲಿಕಲ್ಲು ಮಳೆ ಸಾಧ್ಯತೆ

ಡಿಸೆಂಬರ್ 26 ಮತ್ತು 27ರಂದು ಜಮ್ಮು, ಹಿಮಾಚಲ ಪ್ರದೇಶ, ಪಂಜಾಬ್​, ಹರಿಯಾಣದ ಉತ್ತರ ಭಾಗ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ 2 ದಿನಗಳಲ್ಲಿ ವಾಯುವ್ಯ, ಪೂರ್ವ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನ 2-4 ಡಿಗ್ರಿ ಸೆಲ್ಸಿಯಸ್​​ಗೆ ಏರಿಕೆಯಾಗುವ ಸಂಭವವಿದೆ. ನಂತರ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ.

ಇದನ್ನೂ ಓದಿ: Karnataka Weather Today: ರಾಜ್ಯದಲ್ಲಿ ಹೆಚ್ಚಾದ ಶೀತಗಾಳಿ, ಇಂದಿನ ಹವಾಮಾನ ವರದಿ ಹೀಗಿದೆ

ದಟ್ಟ ಮಂಜು

ಡಿಸೆಂಬರ್ 26ರಂದು ವಾಯುವ್ಯ ರಾಜಸ್ಥಾನದ ಮೇಲೆ ಬೆಳಗ್ಗೆ ದಟ್ಟ ಮಂಜು ಆವರಿಸಿರುತ್ತದೆ. ಮುಂದಿನ 7 ದಿನಗಳಲ್ಲಿ ಒಡಿಶಾವನ್ನು ಹೊರತುಪಡಿಸಿ ದೇಶಾದ್ಯಂತ ಯಾವುದೇ ಶೀತ ಅಲೆಗಳು ಸೃಷ್ಟಿಯಾಗುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Published by:Latha CG
First published: