Karnataka Weather Report Today: ರಾಜ್ಯದಲ್ಲಿ ಮುಂದುವರಿದ ಚಳಿ: ನಿಮ್ಮ ಜಿಲ್ಲೆಯ ವಾತಾವರಣ ಹೇಗಿದೆ?

ಇದೀಗ ಮಳೆ ಪ್ರಮಾಣ ಇಳಿಕೆಯಾಗಿದ್ದು, ಶೀತಗಾಳಿ ಶುರುವಾಗಿದೆ. ಕರಾವಳಿ (Coastal Karnataka) ಭಾಗದಲ್ಲಿ ಶುಷ್ಕ ವಾತಾವರಣದ ಜೊತೆ ಶೀತ ಹವಾಮಾನ (Cold Wave) ಇರಲಿದೆ. ಚಿಕ್ಕಬಳ್ಳಾಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report, Dec 22, 2021: ರಾಜ್ಯದಲ್ಲಿ ಇವತ್ತು ಸಹ ಚಳಿ (Cold) ಇರಲಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂದಿನ ಎರಡ್ಮೂರು ದಿನ ಇದೇ ರೀತಿಯ ವಾತಾವರಣ ಇರಲಿದೆ. ಈ ವರ್ಷ ಮಳೆಗಾಲ ಮುಗಿದ್ರೂ ವರುಣನ (Rainfall) ಅಬ್ಬರ ಕಡಿಮೆ ಆಗಿರಲಿಲ್ಲ, ಡಿಸೆಂಬರ್ ಮೊದಲ ವಾರದವರೆಗೂ ರಾಜ್ಯದಲ್ಲಿ ಮಳೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಳೆ ಪ್ರಮಾಣ ಇಳಿಕೆಯಾಗಿದ್ದು, ಶೀತಗಾಳಿ ಶುರುವಾಗಿದೆ. ಕರಾವಳಿ (Coastal Karnataka) ಭಾಗದಲ್ಲಿ ಶುಷ್ಕ ವಾತಾವರಣದ ಜೊತೆ ಶೀತ ಹವಾಮಾನ (Cold Wave) ಇರಲಿದೆ. ಚಿಕ್ಕಬಳ್ಳಾಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 26 ಮತ್ತು ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 26-13, ಮೈಸೂರು 29-16, ಚಾಮರಾಜನಗರ 29-16, ರಾಮನಗರ 28-15, ಮಂಡ್ಯ 29-15, ಬೆಂಗಳೂರು ಗ್ರಾಮಾಂತರ 26-13, ಚಿಕ್ಕಬಳ್ಳಾಪುರ 26-13, ಕೋಲಾರ 27-13, ಹಾಸನ 28-13, ಚಿಕ್ಕಮಗಳೂರು 28-14, ದಾವಣಗೆರೆ 26-21, ಶಿವಮೊಗ್ಗ 30-15, ಕೊಡಗು 29-15, ತುಮಕೂರು 28-14

ಉಡುಪಿ 31-22, ಮಂಗಳೂರು 32-24, ಉತ್ತರ ಕನ್ನಡ 29-22, ಧಾರವಾಡ 31-22, ಹಾವೇರಿ 28-21, ಹುಬ್ಬಳ್ಳಿ 31-16, ಬೆಳಗಾವಿ 29-15, ಗದಗ 30-15, ಕೊಪ್ಪಳ 29-16, ವಿಜಯಪುರ 29-16, ಬಾಗಲಕೋಟ 31-15, ಕಲಬುರಗಿ 30-14, ಬೀದರ್ 28-13, ಯಾದಗಿರಿ 29-14, ರಾಯಚೂರ 30-15, ಬಳ್ಳಾರಿ 29-16

ಇದನ್ನೂ ಓದಿ:  New Yearಗೆ ಸರ್ಕಾರದಿಂದ ಮಾರ್ಗಸೂಚಿ: ಕೊಡಗಿನಲ್ಲಿ ರೆಸಾರ್ಟ್-ಹೋಂ ಸ್ಟೇ ಬುಕ್ಕಿಂಗ್ ಪೀಕಲಾಟ!

ಇಂದಿನಿಂದ ಎರಡು ದಿನ ಹಿಮಪಾತ

ಪಶ್ಚಿಮವಾಗಿ ಬೀಸುವ ಮಾರುತಗಳಿಂದ ಡಿಸೆಂಬರ್ 22 ರಿಂದ 24ರವರೆಗೆ ಎರಡು ದಿನ ಹಿಮಾಲಯ ಭಾಗದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಮಳೆ ಮತ್ತು ಹಿಮಪಾತವಾಗಲಿದೆ. ಇದರ ಪರಿಣಾಮ ಪಂಜಾಬ್ ವರೆಗೂ ವ್ಯಾಪಿಸಲಿದ್ದು, ಡಿಸೆಂಬರ್ 24ರವರೆಗೂ ಲಘು ಮಳೆಯಾಗಲಿದೆ.

ಅಸ್ಸಾಂ, ಮೇಘಾಲಯದಲ್ಲಿ ಯೆಲ್ಲೂ ಅಲರ್ಟ್

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದ ಕೆಲವು ಭಾಗಗಳಲ್ಲಿ ಮಂಗಳವಾರದಿಂದ ಶುಕ್ರವಾರದವರೆಗೆ ಗುಡುಗು ಮಿಂಚು ಸಹಿತ ಕೆಲವು ಭಾಗಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ. ಅಸ್ಸಾಂ ಮತ್ತು ಮೇಘಾಲಯದಲ್ಲಿ ಡಿಸೆಂಬರ್ 23 ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಾವಿನ ಬೆಳೆಯ ಮೇಲೆ ಅಕಾಲಿಕ ಮಳೆಯ ಎಫೆಕ್ಟ್

ಕರ್ನಾಟಕದ ಕೆಲವು ಭಾಗಗಳಲ್ಲಿ ಇತ್ತೀಚಿನ ಅಕಾಲಿಕ ಮಳೆ ಮತ್ತು ಮೋಡ ಕವಿದ ವಾತಾವರಣವು ಸತತ ಎರಡನೇ ವರ್ಷವೂ ಮಾವಿನ ಬೆಳೆಯ ಮೇಲೆ ಪರಿಣಾಮ ಬೀರಬಹುದು. ಅಕಾಲಿಕ ಮಳೆಯಿಂದಾಗಿ ಹೂ ಬಿಡುವ ಪ್ರಕ್ರಿಯೆಗೂ ಅಡ್ಡಿಯಾಗಿದೆ. ಚಳಿಗಾಲದ ಆರಂಭದ ಹೊರತಾಗಿಯೂ, ಇನ್ನೂ ಅನೇಕ ಭಾಗಗಳಲ್ಲಿ ಮಳೆಯಾಗುತ್ತಿದೆ.

ಇದನ್ನೂ ಓದಿ:  Anti Conversion Bill: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ; ವಿಧೇಯಕದಲ್ಲಿನ ಪ್ರಮುಖ ಅಂಶಗಳೇನು?

ಹೂ ಬಿಡುವ ಪ್ರಕ್ರಿಯೆಗೆ ಅಡ್ಡಿ

ಇದರಿಂದಾಗಿ ಹೂಬಿಡುವ ಪ್ರಕ್ರಿಯೆಗೆ ಅನುಕೂಲಕರ ಹವಾಮಾನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿಲ್ಲ ಹೂ ಬಿಡುವ ಪ್ರಕಿಯೆಗೆ ಶುಷ್ಕ ಮತ್ತು ಶೀತ ಹವಾಮಾನ ಅಗತ್ಯ. ಆದರೆ ನಿರಂತರ ಸುರಿಯುತ್ತಿರುವ ಮಳೆ ಈ ನೈಸರ್ಗಿಕ ಹೂ ಬಿಡುವ ಪ್ರಕ್ರಿಯೆಗೆ ಅಡ್ಡಿಯುನ್ನುಂಟು ಮಾಡುತ್ತಿದೆ.

ನಿರಂತರ ಮಳೆಯಿಂದಾಗಿ ತರಕಾರಿ ಬೆಲೆ ಏರಿಕೆ

ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ (Karnataka Rains) ಮಾರುಕಟ್ಟೆಗಳಿಗೆ (Market) ಹಣ್ಣು, ತರಕಾರಿಯ (Fruits And Vegetables) ಪೂರೈಕೆ ಆಗುತ್ತಿಲ್ಲ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆ (Price Hike)ಯಾಗಿದ್ದು, ಮಳೆಯ ಚಳಿಯಲ್ಲಿ ಬೆಲೆ ಏರಿಕೆ ಗ್ರಾಹಕರ (Customer) ಜೇಬನ್ನು ಸುಡುತ್ತಿದೆ. ಹಾಪ್ ಕಾಮ್ಸ್ ಗಳಲ್ಲೂ ದರ ಏರಿಕೆಯಾಗಿದೆ. ಇದೇ ರೀತಿ ಮಳೆ ಮುಂದುವರಿದ್ರೆ ತರಕಾರಿ ಮತ್ತು ಹಣ್ಣುಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
Published by:Mahmadrafik K
First published: