Karnataka Weather Report: ಬೆಳಗ್ಗೆ ಚಳಿ, ಮಧ್ಯಾಹ್ನ ಬಿಸಿಲು: ಸೂರ್ಯನ ದರ್ಶನ  ಬಳಿಕವೂ ದಟ್ಟವಾದ ಮಂಜು

ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ (Cold Wave) ಜನರನ್ನು ನಡುಗಿಸುತ್ತಿದೆ. ಕಳೆದ ನಾಲ್ಕೈದು ದಿನ ಚಳಿಯ (Winter) ಪ್ರಮಾಣ ಏರಿಕೆಯಾಗುತ್ತಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಚಳಿ ಸಹ ಏರಿಕೆಯಾಗಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Today Dec 21, 2021: ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ (Cold Wave) ಜನರನ್ನು ನಡುಗಿಸುತ್ತಿದೆ. ಕಳೆದ ನಾಲ್ಕೈದು ದಿನ ಚಳಿಯ (Winter) ಪ್ರಮಾಣ ಏರಿಕೆಯಾಗುತ್ತಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಚಳಿ ಸಹ ಏರಿಕೆಯಾಗಿದೆ.  ರಾಜ್ಯದಲ್ಲಿ ಸುರಿಯುತ್ತಿದ್ದ ಅಕಾಲಿಕ ಮಳೆಗೆ (Unseasonal Rains) ಬ್ರೇಕ್ ಬಿದ್ದಿದ್ದು, ಚಳಿ (Cold Wave) ಹೆಚ್ಚಾಗುತ್ತಿದೆ. ವಿಜಯಪುರ, ಗದಗ, ಬಾಗಲಕೋಟೆ, ಕಲಬುರಗಿಯಲ್ಲಿ ಆಳವಾದ ಮಂಜು ಆವರಿಸುತ್ತಿದೆ. ಉತ್ತರ ಕರ್ನಾಟಕ  (North Karnataka) ಮಲೆನಾಡು ಭಾಗವಾಗಿ ಬದಲಾದಂತೆ ಕಾಣಿಸುತ್ತಿದೆ. ನಿರಂತರ ಮಳೆಯಿಂದ ಕಂಗೆಟ್ಟಿದ್ದ ಜನರು, ಇದೀಗ ಚಳಿ(Winter)ಯಿಂದ ಮನೆಯಲ್ಲಿ ಇರುವಂತಾಗಿದೆ.  ದೇಶದ ಬಹುತೇಕ ಭಾಗಗಳಲ್ಲಿ ಚಳಿ ಶುರುವಾಗಿದೆ. 

ಡಿಸೆಂಬರ್ ಅರ್ಧ ತಿಂಗಳು ಚಳಿಯ (Winter) ಪ್ರಮಾಣ ಏರಿಕೆಯಾಗುತ್ತಿದೆ. ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ಗಢ ಗಢ ನಡುಗುತ್ತಿತ್ತು ಅನ್ನೋ ಮಾತಿದೆ. ಅದೇ ರೀತಿ ರಾಜ್ಯದ ಎಲ್ಲ ಭಾಗದಲ್ಲಿ ಶೀತಲ ಗಾಳಿ (Cold War)ಆರಂಭಗೊಂಡಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-13, ಮೈಸೂರು 28-14, ಚಾಮರಾಜನಗರ 29-16, ರಾಮನಗರ 28-14, ಮಂಡ್ಯ 28-14, ಬೆಂಗಳೂರು ಗ್ರಾಮಾಂತರ 27-13, ಚಿಕ್ಕಬಳ್ಳಾಪುರ 24-12, ಕೋಲಾರ 26-13, ಹಾಸನ 27-13, ಚಿಕ್ಕಮಗಳೂರು 28-13, ದಾವಣಗೆರೆ 29-15, ಶಿವಮೊಗ್ಗ 31-15, ಕೊಡಗು 29-14

ತುಮಕೂರು 27-14, ಉಡುಪಿ 31-22, ಮಂಗಳೂರು 31-21, ಉತ್ತರ ಕನ್ನಡ 31-15, ಧಾರವಾಡ 29-15, ಹಾವೇರಿ 30-15, ಹುಬ್ಬಳ್ಳಿ 30-16, ಬೆಳಗಾವಿ 29-15, ಗದಗ 29-15, ಕೊಪ್ಪಳ 29-16, ವಿಜಯಪುರ 29-15, ಬಾಗಲಕೋಟ 30-15, ಕಲಬುರಗಿ 29-14, ಬೀದರ್ 27-12, ಯಾದಗಿರಿ 28-14, ರಾಯಚೂರ 29-14, ಬಳ್ಳಾರಿ 29-16

ಇದನ್ನೂ ಓದಿ:  Bengaluru Power Cuts: ಬೆಂಗಳೂರಿಗರೇ ಅಲರ್ಟ್.. ಇಂದು, ನಾಳೆ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ

ದೆಹಲಿಯಲ್ಲಿ ಕನಿಷ್ಠ ತಾಪಮಾನ

ಡಿಸೆಂಬರ್‌ನ ಚಳಿಗಾಲ ಆರಂಭಗೊಂಡಿದ್ದು, ಹಿಮಪಾತದ ಪರಿಣಾಮದಿಂದಾಗಿ ಇಡೀ ಉತ್ತರ ಭಾರತದಲ್ಲಿ ಶೀತ ಅಲೆಗಳ ಪ್ರಮಾಣ ಮುಂದುವರೆದಿದೆ. ಹಿಮದ ಗಾಳಿಯಿಂದಾಗಿ ರಾಷ್ಟ್ರ ರಾಜಧಾನಿಯೂ ನಡುಗುತ್ತಿದೆ. 20 ಡಿಸೆಂಬರ್ 2021ರಂದು  ದೆಹಲಿಯಲ್ಲಿ ಕನಿಷ್ಠ ತಾಪಮಾನವು 3.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಪ್ರದೇಶದಲ್ಲಿ ವಾಯುಭಾರ ಕುಸಿತದ ಪರಿಣಾಮ ಹಿಮಾಲಯದಲ್ಲಿ ಹಿಮಪಾತಕ್ಕೆ ಕಾರಣವಾಗುತ್ತದೆ. ವಾಯುಭಾರ ಕುಸಿತ ಹಿನ್ನೆಲೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪದಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಅಕಾಲಿಕ ಮಳೆಗೆ ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ(Unseasonal Rain) ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಚಳಿಯ(Winter) ಪ್ರಮಾಣ ಹೆಚ್ಚಾಗಿದ್ದು, ಜನರನ್ನು ನಡುಗಿಸುತ್ತಿದೆ.   ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಇದನ್ನೂ ಓದಿ:  ಮಂಗಳವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್(Break) ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಋತುವಿನ ಮೊದಲ ಶೀತ ಅಲೆ ಆರಂಭ

ರಾಜಧಾನಿಯಲ್ಲಿ ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ ಈ ಋತುವಿನ ಮೊದಲ ಶೀತ ಅಲೆ ಶನಿವಾರ ಆರಂಭಗೊಂಡಿದ್ದು, ಹವಾಮಾನ ಇಲಾಖೆಯ ಪ್ರಕಾರ, ರಾಜಧಾನಿ ರಾತ್ರಿ ಮತ್ತು ಹಗಲು ಎರಡೂ ಆಧಾರದ ಮೇಲೆ ಶೀತ ಅಲೆ ಸ್ಟಾರ್ಟ್ ಆಗಿದೆ. ಮುಂದಿನ ದಿನ ಚಳಿಗಾಳಿ ಏರಿಕೆ ಆಗುವ ನಿರೀಕ್ಷೆ ಇದೆ.

ಚಳಿ ಹೆಚ್ಚಾಗುವ ಸಾಧ್ಯತೆ

ಈ ಎಲ್ಲೆದರ ಪರಿಣಾಮ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕಾಶ್ಮೀರದಲ್ಲಿ ಪೈಪ್‌ಲೈನ್‌ನಲ್ಲಿಯೇ ನೀರು ಹೆಪ್ಪುಗಟ್ಟಿದೆ. ರಾಜಸ್ಥಾನದ ಹಲವೆಡೆ ಕನಿಷ್ಠ ತಾಪಮಾನ ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಮುಂದಿನ ಕೆಲ ದಿನಗಳ ಕಾಲ ರಾಜ್ಯದಲ್ಲಿ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Published by:Mahmadrafik K
First published: