Karnataka Weather Today: ಶೀತಗಾಳಿ ಹೆಚ್ಚಳ, ಇಂದು ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ದಾಖಲು

ಕಳೆದ ಮೂರು ದಿನದಂತೆ ಇಂದು ಸಹ ಹವಾಮಾನ (Weather) ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ (Cold Wave) ಜನರನ್ನು ನಡುಗಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Today December 20, 2021:  ಕಳೆದ ಮೂರು ದಿನದಂತೆ ಇಂದು ಸಹ ಹವಾಮಾನ (Weather) ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ (Cold Wave) ಜನರನ್ನು ನಡುಗಿಸುತ್ತಿದೆ. ಮುಂದಿನ ನಾಲ್ಕೈದು ದಿನ ಚಳಿಯ (Winter) ಪ್ರಮಾಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೀದರ್ ಜಿಲ್ಲೆಯಲ್ಲಿ ಕನಿಷ್ಠ 11 ಡಿಗ್ರಿ ಸೆಲ್ಸಿಯಸ್ ತಾಪಮನ ದಾಖಲಾಗಲಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಚಳಿ ಸಹ ಏರಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿದ್ದ ಅಕಾಲಿಕ ಮಳೆಗೆ ಬ್ರೇಕ್ ನೀಡಿದ್ದು, ರೈತ ವರ್ಗ ನಿಟ್ಟುಸಿರು ಬಿಟ್ಟಿದೆ,

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 26-13, ಮೈಸೂರು 28-14, ಚಾಮರಾಜನಗರ 28-15, ರಾಮನಗರ 27-14, ಮಂಡ್ಯ 28-14, ಬೆಂಗಳೂರು ಗ್ರಾಮಾಂತರ 26-13, ಚಿಕ್ಕಬಳ್ಳಾಪುರ 23-12, ಕೋಲಾರ 25-13, ಹಾಸನ 26-13, ಚಿಕ್ಕಮಗಳೂರು 26-12, ದಾವಣಗೆರೆ 28-14, ಶಿವಮೊಗ್ಗ 29-14, ಕೊಡಗು 28-13, ತುಮಕೂರು 26-14

ಉಡುಪಿ 32-21, ಮಂಗಳೂರು 32-22, ಉತ್ತರ ಕನ್ನಡ 31-15, ಧಾರವಾಡ 28-14, ಹಾವೇರಿ 29-14, ಹುಬ್ಬಳ್ಳಿ 29-14, ಬೆಳಗಾವಿ 28-14, ಗದಗ 28-14, ಕೊಪ್ಪಳ 28-15, ವಿಜಯಪುರ 28-14, ಬಾಗಲಕೋಟ 29-14, ಕಲಬುರಗಿ 29-13, ಬೀದರ್ 26-11, ಯಾದಗಿರಿ 29-14, ರಾಯಚೂರ 29-14, ಬಳ್ಳಾರಿ 28-15

ಇದನ್ನೂ ಓದಿ:  Astrology: ಈ ರಾಶಿಯವರಿಂದ ಇಂದು ದೂರ ಇರೋದು ಒಳ್ಳೆಯದಂತೆ, ಸೋಮವಾರದ ದಿನಭವಿಷ್ಯ ಇಲ್ಲಿದೆ

ದೆಹಲಿಯಲ್ಲಿ ಕನಿಷ್ಠ ತಾಪಮಾನ ಇಲಾಖೆ

ದೆಹಲಿ-ಎನ್‌ಸಿಆರ್ ಸೇರಿದಂತೆ ಇಡೀ ಉತ್ತರ ಭಾರತ ಭಾಗದ ಜನರು ತೀವ್ರ ಶೀತ ಗಾಳಿಗೆ ಬೆಚ್ಚಗೆ ಮನೆ ಸೇರಿದ್ದಾರೆ, ಪರ್ವತ ಮತ್ತು ಬಯಲು ಪ್ರದೇಶಗಳಲ್ಲಿ ತಾಪಮಾನ ಮೈನಸ್ ತಲುಪಿದೆ. ಭಾನುವಾರ ಬೆಳಗ್ಗೆ ದೆಹಲಿಯ ಲೋಧಿ ರಸ್ತೆಯಲ್ಲಿ ಕನಿಷ್ಠ ತಾಪಮಾನ 3.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಹಿಮಪಾತ ಇನ್ನುಳಿದ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ,

ಚಳಿ ಹೆಚ್ಚಾಗುವ ಸಾಧ್ಯತೆ

ಈ ಎಲ್ಲೆದರ ಪರಿಣಾಮ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕಾಶ್ಮೀರದಲ್ಲಿ ಪೈಪ್‌ಲೈನ್‌ನಲ್ಲಿಯೇ ನೀರು ಹೆಪ್ಪುಗಟ್ಟಿದೆ. ರಾಜಸ್ಥಾನದ ಹಲವೆಡೆ ಕನಿಷ್ಠ ತಾಪಮಾನ ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಮುಂದಿನ ಕೆಲ ದಿನಗಳ ಕಾಲ ರಾಜ್ಯದಲ್ಲಿ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:  ನೀನು ಕಂಡ ಕನಸುಗಳೆಲ್ಲ ನನಸಾಗಲಿ: ಸೋದರ ಡಿ.ಕೆ.ಸುರೇಶ್ ಹುಟ್ಟುಹಬ್ಬಕ್ಕೆ ಡಿ.ಕೆ.ಶಿವಕುಮಾರ್ ವಿಶ್

ಋತುವಿನ ಮೊದಲ ಶೀತ ಅಲೆ ಆರಂಭ

ರಾಜಧಾನಿಯಲ್ಲಿ ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ ಈ ಋತುವಿನ ಮೊದಲ ಶೀತ ಅಲೆ ಶನಿವಾರ ಆರಂಭಗೊಂಡಿದ್ದು, ಹವಾಮಾನ ಇಲಾಖೆಯ ಪ್ರಕಾರ, ರಾಜಧಾನಿ ರಾತ್ರಿ ಮತ್ತು ಹಗಲು ಎರಡೂ ಆಧಾರದ ಮೇಲೆ ಶೀತ ಅಲೆ ಸ್ಟಾರ್ಟ್ ಆಗಿದೆ. ಮುಂದಿನ ದಿನ ಚಳಿಗಾಳಿ ಏರಿಕೆ ಆಗುವ ನಿರೀಕ್ಷೆ ಇದೆ.

ಭಾರೀ ಹಿಮಪಾತವಾಗುವ ಸಾಧ್ಯತೆ

ಡಿಸೆಂಬರ್ 17 ಮತ್ತು 19 ರ ನಡುವೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಹಿಮದ ಸಾಧ್ಯತೆಯಿದೆ. ಡಿಸೆಂಬರ್ 23 ಮತ್ತು ಡಿಸೆಂಬರ್ 25 ರ ನಡುವೆ ಕಣಿವೆ ಮತ್ತು ಲಡಾಖ್‌ನಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹರಿಯಾಣ, ಪಂಜಾಬ್, ಚಂಡೀಗಢ ಮತ್ತು ಉತ್ತರ ರಾಜಸ್ಥಾನವನ್ನು ಡಿಸೆಂಬರ್ 18 ರಿಂದ 20 ರ ನಡುವೆ ಸಂಪೂರ್ಣವಾಗಿ ಆವರಿಸುವ ನಿರೀಕ್ಷೆಯಿದೆ

ಎರಡ್ಮೂರು ದಿನಗಳಲ್ಲಿ ಕನಿಷ್ಠ ತಾಪಮಾನ ದಾಖಲೆ

ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ, ಮುಂದಿನ ನಾಲ್ಕು ದಿನಗಳಲ್ಲಿ ವಾಯುವ್ಯ ಭಾರತ ಮತ್ತು ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದೆ.
Published by:Mahmadrafik K
First published: