Karnataka Weather Today: ಸಂಜೆ-ಬೆಳಗ್ಗೆ ಶೀತಗಾಳಿ; ಚಳಿಗೆ ಜನರು ಗಢ ಗಢ

ದೇಶದ ಬಹುತೇಕ ಭಾಗಗಳಲ್ಲಿ ಚಳಿ ಶುರುವಾಗಿದೆ. ಉತ್ತರ ಭಾರತದ ಹಲವೆಡೆ ಶೀತಲ ಅಲೆಯ ವಾತಾವರಣವಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ತಾಪಮಾನ ಇರಲಿದೆ. ಉತ್ತರ ಭಾರತದ ಹಲವು ಸ್ಥಳಗಳಲ್ಲಿ ಕಡಿಮೆ ಕನಿಷ್ಠ ತಾಪಮಾನ ದಾಖಲಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today: ಡಿಸೆಂಬರ್ ಅರ್ಧ ತಿಂಗಳು ಚಳಿಯ (Winter) ಪ್ರಮಾಣ ಏರಿಕೆಯಾಗುತ್ತಿದೆ. ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ಗಢ ಗಢ ನಡುಗುತ್ತಿತ್ತು ಅನ್ನೋ ಮಾತಿದೆ. ಅದೇ ರೀತಿ ರಾಜ್ಯದ ಎಲ್ಲ ಭಾಗದಲ್ಲಿ ಶೀತಲ ಗಾಳಿ (Cold War)ಆರಂಭಗೊಂಡಿದೆ. ಬೆಳಗ್ಗೆ ಮತ್ತು ಸಂಜೆಗೆ ಶೀತ ಗಾಳಿ ಬೀಸಿದ್ರೆ, ಮಧ್ಯಾಹ್ನ ಒಣ ಹವೆ ಇರಲಿದೆ. ಹಾಸನ, ತುಮಕೂರು, ಬೀದರ್ ಜಿಲ್ಲೆಗಳಲ್ಲಿ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಬೆಂಗಳೂರಿನಲ್ಲಿ (Bengaluru Weather) ಮೋಡ ಕವಿದ ವಾತಾವರಣವೇ ಇರಲಿದ್ದು, ಸಿಂಚನ ಮಳೆಯಾಗಲಿದೆ. ಇನ್ನು ಉತ್ತರ ಕರ್ನಾಟಕದ (North Karnataka) ಭಾಗಗಳಲ್ಲಿ ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ.

ತಮಿಳುನಾಡು-ಪುದುಚೇರಿ-ಕಾರೈಕಲ್, ಕೇರಳ- ಮಾಹೆ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮತ್ತು ಮುಂದಿನ 2 ದಿನಗಳಲ್ಲಿ ದಕ್ಷಿಣ ಆಂಧ್ರಪ್ರದೇಶದಲ್ಲಿ ಪ್ರತ್ಯೇಕ/ಚದುರಿದ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ(Moderate Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಹೇಳಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ- ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 26-14, ಮೈಸೂರು 29-16, ಚಾಮರಾಜನಗರ 29-17, ರಾಮನಗರ 28-15, ಮಂಡ್ಯ 29-16, ಬೆಂಗಳೂರು ಗ್ರಾಮಾಂತರ 26-14, ಚಿಕ್ಕಬಳ್ಳಾಪುರ 24-12, ಕೋಲಾರ 26-13, ಹಾಸನ 27-13, ಚಿಕ್ಕಮಗಳೂರು 27-13, ದಾವಣಗೆರೆ 29-16, ಶಿವಮೊಗ್ಗ 30-16, ಕೊಡಗು 29-15, ತುಮಕೂರು 27-14

ಉಡುಪಿ 32-25, ಮಂಗಳೂರು 33-22, ಉತ್ತರ ಕನ್ನಡ 31-16, ಧಾರವಾಡ 29-15, ಹಾವೇರಿ 30-15, ಹುಬ್ಬಳ್ಳಿ 30-16, ಬೆಳಗಾವಿ 29-15, ಗದಗ 29-15, ಕೊಪ್ಪಳ 29-16, ವಿಜಯಪುರ 26-16, ಬಾಗಲಕೋಟ 30-16, ಕಲಬುರಗಿ 30-15, ಬೀದರ್ 27-13, ಯಾದಗಿರಿ 31-16, ರಾಯಚೂರ 30-16, ಬಳ್ಳಾರಿ 29-16

ಇದನ್ನೂ ಓದಿ:  ಕಟಕ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅಗತ್ಯ; ಹೀಗರಲಿದೆ 12ರಾಶಿಗಳ ದಿನಭವಿಷ್ಯ

ಡಿಸೆಂಬರ್ ತಿಂಗಳ ಅರ್ಧ ತಿಂಗಳು ಕಳೆದಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಚಳಿ ಶುರುವಾಗಿದೆ. ಉತ್ತರ ಭಾರತದ ಹಲವೆಡೆ ಶೀತಲ ಅಲೆಯ ವಾತಾವರಣವಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ತಾಪಮಾನ ಇರಲಿದೆ. ಉತ್ತರ ಭಾರತದ ಹಲವು ಸ್ಥಳಗಳಲ್ಲಿ ಕಡಿಮೆ ಕನಿಷ್ಠ ತಾಪಮಾನ ದಾಖಲಾಗಲಿದೆ.

ಚಳಿ ಹೆಚ್ಚಾಗುವ ಸಾಧ್ಯತೆ

ಕಾಶ್ಮೀರದಿಂದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಲವು ನಗರಗಳಲ್ಲಿ ಮಳೆ ಮತ್ತು ಹಿಮಪಾತದ ಮುನ್ಸೂಚನೆ ನೀಡಲಾಗಿದೆ.  ಮುಂದಿನ ಎರಡ್ಮೂರು ದಿನಗಳಲ್ಲಿ ಅಮೃತಸರ, ಅಂಬಾಲ, ಮೀರತ್, ಆಗ್ರಾ, ಜೈಪುರ ಸೇರಿದಂತೆ ಹಲವು ನಗರಗಳಲ್ಲಿ ಚಳಿಗಾಳಿ, ಚಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾವಿನ ಬೆಳೆಯ ಮೇಲೆ ಅಕಾಲಿಕ ಮಳೆಯ ಎಫೆಕ್ಟ್

ಕರ್ನಾಟಕದ ಕೆಲವು ಭಾಗಗಳಲ್ಲಿ ಇತ್ತೀಚಿನ ಅಕಾಲಿಕ ಮಳೆ ಮತ್ತು ಮೋಡ ಕವಿದ ವಾತಾವರಣವು ಸತತ ಎರಡನೇ ವರ್ಷವೂ ಮಾವಿನ ಬೆಳೆಯ ಮೇಲೆ ಪರಿಣಾಮ ಬೀರಬಹುದು. ಅಕಾಲಿಕ ಮಳೆಯಿಂದಾಗಿ ಹೂ ಬಿಡುವ ಪ್ರಕ್ರಿಯೆಗೂ ಅಡ್ಡಿಯಾಗಿದೆ. ಚಳಿಗಾಲದ ಆರಂಭದ ಹೊರತಾಗಿಯೂ, ಇನ್ನೂ ಅನೇಕ ಭಾಗಗಳಲ್ಲಿ ಮಳೆಯಾಗುತ್ತಿದೆ, ಇದರಿಂದಾಗಿ ಹೂಬಿಡುವ ಪ್ರಕ್ರಿಯೆಗೆ ಅನುಕೂಲಕರ ಹವಾಮಾನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿಲ್ಲ ಹೂ ಬಿಡುವ ಪ್ರಕಿಯೆಗೆ ಶುಷ್ಕ ಮತ್ತು ಶೀತ ಹವಾಮಾನ ಅಗತ್ಯ. ಆದರೆ ನಿರಂತರ ಸುರಿಯುತ್ತಿರುವ ಮಳೆ ಈ ನೈಸರ್ಗಿಕ ಹೂ ಬಿಡುವ ಪ್ರಕ್ರಿಯೆಗೆ ಅಡ್ಡಿಯುನ್ನುಂಟು ಮಾಡುತ್ತಿದೆ.

ಇದನ್ನೂ ಓದಿ:  Omicron: ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ ಬೆಂಗಳೂರು ನಗರದೊಳಗೆ ನೋ ಎಂಟ್ರಿ, ಬಿಬಿಎಂಪಿ ಟಫ್ ರೂಲ್ಸ್ ಜಾರಿ!

ನಿರಂತರ ಮಳೆಯಿಂದಾಗಿ ತರಕಾರಿ ಬೆಲೆ ಏರಿಕೆ

ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ (Karnataka Rains) ಮಾರುಕಟ್ಟೆಗಳಿಗೆ (Market) ಹಣ್ಣು, ತರಕಾರಿಯ (Fruits And Vegetables) ಪೂರೈಕೆ ಆಗುತ್ತಿಲ್ಲ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆ (Price Hike)ಯಾಗಿದ್ದು, ಮಳೆಯ ಚಳಿಯಲ್ಲಿ ಬೆಲೆ ಏರಿಕೆ ಗ್ರಾಹಕರ (Customer) ಜೇಬನ್ನು ಸುಡುತ್ತಿದೆ. ಹಾಪ್ ಕಾಮ್ಸ್ ಗಳಲ್ಲೂ ದರ ಏರಿಕೆಯಾಗಿದೆ. ಇದೇ ರೀತಿ ಮಳೆ ಮುಂದುವರಿದ್ರೆ ತರಕಾರಿ ಮತ್ತು ಹಣ್ಣುಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
Published by:Mahmadrafik K
First published: