Karnataka Weather Report: ಚಳಿಯ ಪ್ರಮಾಣ ಹೆಚ್ಚಳ, ತುಂತುರು ಮಳೆ

ರಾಜ್ಯದಲ್ಲಿ ಮಳೆಯ (Karnataka Rainfall) ಪ್ರಮಾಣ ಇಳಿಕೆಯಾಗಿದ್ರೆ, ಚಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲಿದೆ. ಬಿಸಿಲು ಜಿಲ್ಲೆಗಳಲ್ಲಿ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Karnataka Weather Report Today: ರಾಜ್ಯದಲ್ಲಿ ಮಳೆಯ (Karnataka Rainfall) ಪ್ರಮಾಣ ಇಳಿಕೆಯಾಗಿದ್ರೆ, ಚಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲಿದೆ. ಬಿಸಿಲು ಜಿಲ್ಲೆಗಳಲ್ಲಿ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗುತ್ತಿದೆ ಇದರ ಜೊತೆ ದಿನವವಿಡೀ ಮೋಡ ಕವಿದ ವಾತಾವರಣದಿಂದಾಗಿ (Cloudy Weather) ಜನರು ಚಳಿಯಿಂದ ಮನೆಗೆ ಹೊರಗೆ ಬರದಂತೆ ಆಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಕಾಲಿಕ ಮಳೆ (Unseasonal Rain) ಬ್ರೇಕ್ ಕೊಟ್ಟಿದ್ರೂ, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ, ಮತ್ತೊಂದು ಕಡೆ ಬೆಂಗಳೂರಿನ ಬಹುತೇಕ ಭಾಗಗಲ್ಲಿ ಮಳೆಯ ಸಿಂಚನ ಆಗುತ್ತಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 25, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

  ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

  ಬೆಂಗಳೂರು 25-17, ಮೈಸೂರು 27-17, ಚಾಮರಾಜನಗರ 25-18, ರಾಮನಗರ 27-18, ಮಂಡ್ಯ 27-20, ಬೆಂಗಳೂರು ಗ್ರಾಮಾಂತರ 25-17, ಚಿಕ್ಕಬಳ್ಳಾಪುರ 24-17, ಕೋಲಾರ 25-17, ಹಾಸನ 26-17, ಚಿಕ್ಕಮಗಳೂರು 26-17, ದಾವಣಗೆರೆ 28-19, ಶಿವಮೊಗ್ಗ 29-19, ಕೊಡಗು 27-19, ತುಮಕೂರು 27-17, ಉಡುಪಿ 32-24

  ಮಂಗಳೂರು 32-24, ಉತ್ತರ ಕನ್ನಡ 30-21, ಧಾರವಾಡ 29-18, ಹಾವೇರಿ 29-19, ಹುಬ್ಬಳ್ಳಿ 29-19, ಬೆಳಗಾವಿ 29-18, ಗದಗ 28-19, ಕೊಪ್ಪಳ 28-19, ವಿಜಯಪುರ 28-19, ಬಾಗಲಕೋಟ 29-19, ಕಲಬುರಗಿ 29-19, ಬೀದರ್ 27-17, ಯಾದಗಿರಿ 29-20, ರಾಯಚೂರ 29-20, ಬಳ್ಳಾರಿ 29-19

  ಇದನ್ನೂ ಓದಿ:  ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ; ಮಂಗಳವಾರ ಬೆಳಗಾವಿ ಬಂದ್​ಗೆ ಕರೆ

  ರಾಜ್ಯದಲ್ಲಿಂದು ಶುಷ್ಕ ಹವಾಮಾನ ಇರಲಿದ್ದು, ಕೋಲಾರದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಮೈಸೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ತುಂತುರು ಮಳೆ(Rain)ಯಾಗಲಿದೆ.

  ನಿರಂತರ ಮಳೆಗೆ ಜಲಾಶಯಗಳು ಭರ್ತಿ

  ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams) ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams) ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.

  ವಾಡಿಕೆಗಿಂತ ಹೆಚ್ಚಿನ ಮಳೆ

  ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

  ಇದನ್ನೂ ಓದಿ:  Power cut: ಬೆಂಗಳೂರಿಗರಿಗೆ ಮತ್ತೆ 3 ದಿನ ಪವರ್ ಶಾಕ್! ಹಲವು ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

  ಆಂಧ್ರ ಕರಾವಳಿಯಲ್ಲಿ ಹಗುರವಾದ ಮಳೆ

  ಶ್ರೀಲಂಕಾದಿಂದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಆಂಧ್ರಪ್ರದೇಶದ ಕರಾವಳಿಯ ಪೂರ್ವದಲ್ಲಿ ಕಡಿಮೆ ಮಟ್ಟದಲ್ಲಿ ಹರಿಯುವ ಸುಳಿಗಾಳಿ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೇರಳ ಮತ್ತು ಮಾಹೆಯಲ್ಲಿ ಚದುರಿದ ಲಘು / ಸಾಧಾರಣ ಮಳೆಗೆ ಕಾರಣವಾಗುತ್ತದೆ. ಮುಂದಿನ ಐದು ದಿನ ಮತ್ತು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಹಗುರವಾದ ಮಳೆಯಾಗಲಿದೆ.

  ಡಿಸೆಂಬರ್ 21ರವವರೆಗ ಇದೇ ರೀತಿಯ ವಾತಾವರಣ

  ಚಂಡಮಾರುತಗಳ (Cyclone) ಪ್ರಭಾವದಿಂದಾಗಿ ಮಳೆಯಾಗುತ್ತಿದ್ದು ಚಳಿಗಾಲ (Winter) ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಹವಾಮಾನ ಏರುಪೇರು ಹಿನ್ನಲೆಯಲ್ಲಿ ಈ ವರ್ಷ ಚಳಿಯ ತೀವ್ರತೆ ಕಡಿಮೆ ಇರಲಿದೆ ಎಂಬ ಮಾಹಿತಿಯೂ ಇದೆ.

  ಉತ್ತರ ಭಾರತದ (North India States) ರಾಜ್ಯಗಳಲ್ಲಿಯೇ ಇನ್ನೂ ಚಳಿಗಾಲ ಆರಂಭವಾಗಿಲ್ಲ. ಡಿಸೆಂಬರ್ 21ರ ತನಕ ಕರ್ನಾಟಕದಲ್ಲಿ ಇದೇ ಮಾದರಿಯ ವಾತಾವರಣ ಇರಲಿದ್ದು, ಬಳಿಕ ಉಷ್ಣಾಂಶದಲ್ಲಿ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ
  Published by:Mahmadrafik K
  First published: