Karnataka Weather Report: ದಕ್ಷಿಣ ಒಳನಾಡಿನಲ್ಲಿ ಫೆಬ್ರವರಿವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆ  

ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today: ರಾಜ್ಯದಲ್ಲಿಂದು ಶುಷ್ಕ ಹವಾಮಾನ ಇರಲಿದ್ದು, ಕೋಲಾರದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಮೈಸೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ತುಂತುರು ಮಳೆ(Rain)ಯಾಗಲಿದೆ. ರಾಜ್ಯದ ಬಹುತೇಕ ಪ್ರದೇಶದಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 26, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಳಿಗಾಲ (Winter) ಆರಂಭವಾಗಿರೋದರಿಂದ ಬೆಳಗ್ಗೆ ಮತ್ತು ಸಂಜೆ ತಂಪು ಗಾಳಿ ಹೆಚ್ಚಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ – ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 26-18, ಮೈಸೂರು 28-19, ಚಾಮರಾಜನಗರ 28-19, ರಾಮನಗರ 29-19, ಮಂಡ್ಯ 28-19, ಬೆಂಗಳೂರು ಗ್ರಾಮಾಂತರ 26-18, ಚಿಕ್ಕಬಳ್ಳಾಪುರ 24-16, ಕೋಲಾರ 25-18, ಹಾಸನ 27-17, ಚಿಕ್ಕಮಗಳೂರು 26-17, ದಾವಣಗೆರೆ 29-19, ಶಿವಮೊಗ್ಗ 30-19, ಕೊಡಗು 27-17

ತುಮಕೂರು 27-18, ಉಡುಪಿ 33-24, ಮಂಗಳೂರು 33-24, ಉತ್ತರ ಕನ್ನಡ 33-25, ಧಾರವಾಡ 29-18, ಹಾವೇರಿ 31-19, ಹುಬ್ಬಳ್ಳಿ 30-19, ಬೆಳಗಾವಿ 29-18, ಗದಗ 29-19, ಕೊಪ್ಪಳ 29-19, ವಿಜಯಪುರ 29-19, ಬಾಗಲಕೋಟ 31-19, ಕಲಬುರಗಿ 31-19, ಬೀದರ್ 28-17, ಯಾದಗಿರಿ 31-19, ರಾಯಚೂರ 31-20, ಬಳ್ಳಾರಿ 29-20

ವಾಡಿಕೆಗಿಂತ ಹೆಚ್ಚಿನ ಮಳೆ

ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:  Astrology: ಇಂದು ಈ ರಾಶಿಯವರ ಬಹುನಿರೀಕ್ಷಿತ ಆಸೆಗಳು ಈಡೇರುತ್ತವೆ: 12 ರಾಶಿಗಳ ದಿನಭವಿಷ್ಯ ಹೀಗಿದೆ

ಪೂರ್ವ ದಿಕ್ಕಿನ ಟ್ರಫ್ ನೈಋತ್ಯ ಬಂಗಾಳ ಕೊಲ್ಲಿಯಾದ್ಯಂತ ಉತ್ತರ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಿಗೆ ಕಡಿಮೆ ಮಟ್ಟದಲ್ಲಿ ವ್ಯಾಪಿಸಲು ಸಿದ್ಧವಾಗಿದೆ. ಇದು ಮುಂದಿನ 2 ದಿನಗಳಲ್ಲಿ ಪೂರ್ವ ಪರ್ಯಾಯ ದ್ವೀಪ ಕರಾವಳಿ ಮತ್ತು ಒಡಿಶಾದಲ್ಲಿ ಮಳೆಯನ್ನು ಪ್ರಚೋದಿಸುತ್ತದೆ ಎಂದು ತಿಳಿಸಿದೆ.

ಚಂಡಮಾರುತಗಳ ಪ್ರಭಾವದಿಂದಾಗಿ ಮಳೆಯಾಗುತ್ತಿದ್ದು ಚಳಿಗಾಲ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಹವಾಮಾನ ಏರುಪೇರು ಹಿನ್ನಲೆಯಲ್ಲಿ ಈ ವರ್ಷ ಚಳಿಯ ತೀವ್ರತೆ ಕಡಿಮೆ ಇರಲಿದೆ ಎಂಬ ಮಾಹಿತಿಯೂ ಇದೆ. ಉತ್ತರ ಭಾರತದ ರಾಜ್ಯಗಳಲ್ಲಿಯೇ ಇನ್ನೂ ಚಳಿಗಾಲ ಆರಂಭವಾಗಿಲ್ಲ. ಡಿಸೆಂಬರ್ 21ರ ತನಕ ಕರ್ನಾಟಕದಲ್ಲಿ ಇದೇ ಮಾದರಿಯ ವಾತಾವರಣ ಇರಲಿದ್ದು, ಬಳಿಕ ಉಷ್ಣಾಂಶದಲ್ಲಿ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ

ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಮುಂಗಾರು ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ (Rain) ಸ್ವಲ್ಪ ಬ್ರೇಕ್ ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ (Unseasonal Rain) ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಇದನ್ನೂ ಓದಿ:  ಬೇವಿನ ಮರದಲ್ಲಿ ಹಾಲಿನಂತಹ ದ್ರವ: ಟೆಂಟ್ ಹಾಕಿ ಗ್ರಾಮಸ್ಥರಿಂದ ಪೂಜೆ

ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಲೆ ಏರಿಕೆ

ಅಕಾಲಿಕ ಮಳೆಯ (Unseasonal Rain)ಕಾರಣದಿಂದಾಗಿ ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆ(Vegetables Price) ಗಗನಕ್ಕೇರುತ್ತಿದ್ದು, ಗ್ರಾಹಕರ(Customers) ಸೇಬು ಸುಡುತ್ತಿದೆ. ಇನ್ನೂ ಎರಡು ತಿಂಗಳು ತರಕಾರಿ ಬೆಲೆ ಕಡಿಮೆ ಆಗುವುದು ಅನುಮಾನ ಎನ್ನಲಾಗುತ್ತಿದೆ.

ಮಳೆಯಿಂದಾಗಿ ತರಕಾರಿಗಳು ಜಮೀನಿನಲ್ಲೇ ಕೊಳೆಯುತ್ತಿದ್ದು, ರೈತರು ಹಾಗೂ ಗ್ರಾಹಕರನ್ನು ಕಂಗೆಡಿಸಿದೆ. ಬೆಳೆದ ರೈತನಿಗೆ ಫಲ ಕೈಗೆ ಸಿಕ್ಕಿಲ್ಲ ಎಂಬ ಚಿಂತೆಯಾದರೆ, ಗ್ರಾಹಕನಿಗೆ ದುಪ್ಪಟ್ಟು ಹಣ ಕೊಟ್ಟು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಮಳೆ ಹೀಗೆ ಮುಂದುವರೆದರೆ ತರಕಾರಿ ಬೆಲೆ ಮತ್ತಷ್ಟು ಗಗನಕ್ಕೇರುವುದರಲ್ಲಿ ಯಾವುದೇ ಅನುಮಾನ ಇಲ್ಲ.  ಬೆಳೆ ಮಾರುಕಟ್ಟೆಗೆ ಬರುವವರೆಗೆ ಇದೇ ಸ್ಥಿತಿ ಮುಂದುವರೆಯಲಿದೆ.  ಮಳೆಯ ಕಾರಣದಿಂದಾಗಿ ಬೇರೆ ರಾಜ್ಯಗಳಿಂದ ಹೆಚ್ಚುವರಿಯಾಗಿ ತರಕಾರಿ ಪೂರೈಕೆಯಾಗುತ್ತಿಲ್ಲ.
Published by:Mahmadrafik K
First published: