Karnataka Weather Report: ಚಳಿ ಜೊತೆ ಮೋಡ ಕವಿದ ವಾತಾವರಣ, ಅಲ್ಲಲ್ಲಿ ಮಳೆಯ ಸಿಂಚನ

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕ, ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒಳಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report:  ರಾಜ್ಯದ ಬಹುತೇಕ ಭಾಗಗಳಲ್ಲಿ ಶುಷ್ಕ  ಹವಾಮಾನ ಇರಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಚದುರಿದ ಮಳೆಯಾಗಲಿದೆ. ಚಳಿಗಾಲದಲ್ಲಿ (Winter) ತುಂತುರು ಮಳೆಯ ಸಿಂಚನ ಮಲೆನಾಡು ಮತ್ತು  ಉತ್ತರ ಕರ್ನಾಟಕ (North Karnataka) ಜನತೆಗೆ ಮುದ ನೀಡಲಿದೆ. ಇನ್ನು ಶನಿವಾರ  ಸಂಜೆಯೇ ಬೆಂಗಳೂರಿನಲ್ಲಿ ಬಿಟ್ಟು ಬಿಟ್ಟು ಮಳೆಯಾಗಿದ್ದು, ವೀಕೆಂಡ್ ಅಂತ ಹೊರಗೆ ಬಂದ ಜನರು ಟ್ರಾಫಿಕ್ ನಲ್ಲಿ ಸಿಲುಕುವಂತಾಯ್ತು. ಯಶವಂತಪುರ, ವಿದ್ಯಾರಣ್ಯಪುರ, ರಾಜಾಜಿನಗರ, ಜಾಲಹಳ್ಳಿ, ಮೇಕ್ರಿ ವೃತ್ತ, ಮೆಜೆಸ್ಟಿಕ್ ಸುತ್ತಮುತ್ತ ಸಂಜೆ ವೇಳೆ ತುಂತುರು ಮಳೆ(Rainfall)ಯಾಗಿದೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 26, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 26-18, ಮೈಸೂರು 28-18, ಚಾಮರಾಜನಗರ 28-19, ರಾಮನಗರ 28-19, ಮಂಡ್ಯ 28-19, ಬೆಂಗಳೂರು ಗ್ರಾಮಾಂತರ 26-18, ಚಿಕ್ಕಬಳ್ಳಾಪುರ 25-17, ಕೋಲಾರ 26-18, ಹಾಸನ 25-18, ಚಿಕ್ಕಮಗಳೂರು 26-18, ದಾವಣಗೆರೆ 30-19, ಶಿವಮೊಗ್ಗ 31-19, ಕೊಡಗು 28-17, ತುಮಕೂರು 28-18

ಉಡುಪಿ 33-24, ಮಂಗಳೂರು 34-24, ಉತ್ತರ ಕನ್ನಡ 33-26, ಧಾರವಾಡ 30-19, ಹಾವೇರಿ 31-19, ಹುಬ್ಬಳ್ಳಿ 31-19, ಬೆಳಗಾವಿ 30-18, ಗದಗ 29-19, ಕೊಪ್ಪಳ 30-20, ವಿಜಯಪುರ 30-19, ಬಾಗಲಕೋಟ 31-20, ಕಲಬುರಗಿ 32-19, ಬೀದರ್ 29-17, ಯಾದಗಿರಿ 32-20, ರಾಯಚೂರ 31-20, ಬಳ್ಳಾರಿ 30-20

ಇದನ್ನೂ ಓದಿ: Astrology: ಭಾನುವಾರದ ಈ ದಿನ ಹೇಗಿರಲಿದೆ 12 ರಾಶಿಗಳ ದಿನಭವಿಷ್ಯ

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕ, ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒಳಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ಆಂಧ್ರ ಕರಾವಳಿಯಲ್ಲಿ ಹಗುರವಾದ ಮಳೆ

ಶ್ರೀಲಂಕಾದಿಂದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಆಂಧ್ರಪ್ರದೇಶದ ಕರಾವಳಿಯ ಪೂರ್ವದಲ್ಲಿ ಕಡಿಮೆ ಮಟ್ಟದಲ್ಲಿ ಹರಿಯುವ ಸುಳಿಗಾಳಿ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೇರಳ ಮತ್ತು ಮಾಹೆಯಲ್ಲಿ ಚದುರಿದ ಲಘು / ಸಾಧಾರಣ ಮಳೆಗೆ ಕಾರಣವಾಗುತ್ತದೆ. ಮುಂದಿನ ಐದು ದಿನ ಮತ್ತು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಹಗುರವಾದ ಮಳೆಯಾಗಲಿದೆ.

ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಮುಂಗಾರು ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ (Rain) ಸ್ವಲ್ಪ ಬ್ರೇಕ್ ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ (Unseasonal Rain) ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಇದನ್ನೂ ಓದಿ:  ಪುತ್ತೂರಿನಲ್ಲಿ ನಡೆಯಲಿದೆ ಚರಿತ್ರೆಯಲ್ಲಿ ಹಿಂದೆಂದೂ ನಡೆಯದ  ಯಾಗ, ಕೋವಿಡ್​​​ ಸಂಕಷ್ಟ ನಿವಾರಣೆಗಾಗಿ ಈ‌ ಹೋಮ

ವಾಡಿಕೆಗಿಂತ ಹೆಚ್ಚಿನ ಮಳೆ

ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಪೂರ್ವ ದಿಕ್ಕಿನ ಟ್ರಫ್ ನೈಋತ್ಯ ಬಂಗಾಳ ಕೊಲ್ಲಿಯಾದ್ಯಂತ ಉತ್ತರ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಿಗೆ ಕಡಿಮೆ ಮಟ್ಟದಲ್ಲಿ ವ್ಯಾಪಿಸಲು ಸಿದ್ಧವಾಗಿದೆ. ಇದು ಮುಂದಿನ 2-3 ದಿನಗಳಲ್ಲಿ ಪೂರ್ವ ಪರ್ಯಾಯ ದ್ವೀಪ ಕರಾವಳಿ ಮತ್ತು ಒಡಿಶಾದಲ್ಲಿ ಮಳೆಯನ್ನು ಪ್ರಚೋದಿಸುತ್ತದೆ ಎಂದು ತಿಳಿಸಿದೆ.

ಚಂಡಮಾರುತಗಳ ಪ್ರಭಾವದಿಂದಾಗಿ ಮಳೆಯಾಗುತ್ತಿದ್ದು ಚಳಿಗಾಲ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಹವಾಮಾನ ಏರುಪೇರು ಹಿನ್ನಲೆಯಲ್ಲಿ ಈ ವರ್ಷ ಚಳಿಯ ತೀವ್ರತೆ ಕಡಿಮೆ ಇರಲಿದೆ ಎಂಬ ಮಾಹಿತಿಯೂ ಇದೆ. ಉತ್ತರ ಭಾರತದ ರಾಜ್ಯಗಳಲ್ಲಿಯೇ ಇನ್ನೂ ಚಳಿಗಾಲ ಆರಂಭವಾಗಿಲ್ಲ. ಡಿಸೆಂಬರ್ 21ರ ತನಕ ಕರ್ನಾಟಕದಲ್ಲಿ ಇದೇ ಮಾದರಿಯ ವಾತಾವರಣ ಇರಲಿದ್ದು, ಬಳಿಕ ಉಷ್ಣಾಂಶದಲ್ಲಿ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ
Published by:Mahmadrafik K
First published: