Karnataka Weather Report: ಇಂದು ಬೆಂಗಳೂರಿನಲ್ಲಿ ಮಳೆ ಸಾಧ್ಯತೆ: ಜಿಲ್ಲಾವಾರು ಹವಾಮಾನ ವರದಿ ಇಲ್ಲಿದೆ

ಬೆಂಗಳೂರು (Bengaluru) ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾ (IMD)ಖೆ ಮುನ್ಸೂಚನೆ ನೀಡಿದಎ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today: ಇಂದು ಬೆಂಗಳೂರು (Bengaluru) ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾ (IMD)ಖೆ ಮುನ್ಸೂಚನೆ ನೀಡಿದಎ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ವೀಕೆಂಡ್ ಅಂತ ಹೊರಗೆ ತೆರಳುವ ಮುನ್ನ ಒಮ್ಮೆ ಯೋಚಿಸಿ. ಇಲ್ಲವಾದ್ರೆ ಮಳೆಯಲ್ಲಿ (Rainfall) ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಉತ್ತರ  ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ, ಸಾಧಾರಣ ಚಳಿ ಮತ್ತು  ಬೆಳಗಿನ ಜಾವ ದಟ್ಟವಾದ ಮಂಜು ಆವರಿಸಿರಲಿದೆ. ಆಂಧ್ರಪ್ರದೇಶ (Andhra Pradesh) ಮತ್ತು ತಮಿಳುನಾಡಿನಲ್ಲಿ (Tamil nadu) ಪ್ರತ್ಯೇಕ ಗುಡುಗು ಸಹಿತ ಚದುರಿದ ಮಳೆಯಾಗುವ ನಿರೀಕ್ಷೆಯಿದೆ. ಈಶಾನ್ಯ ಪ್ರದೇಶ, ಕರ್ನಾಟಕ ಮತ್ತು ಲಕ್ಷದ್ವೀಪದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ದೇಶದ ಉಳಿದ ಭಾಗಗಳಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನವನ್ನು ಮುನ್ಸೂಚಿಸಲಾಗಿದೆ. ಈಶಾನ್ಯ ಪ್ರದೇಶದ ಹಲವು ಕಡೆ ಬೆಳಗಿನ ವೇಳೆಯಲ್ಲಿ ಮಧ್ಯಮ ಮಂಜಿನ ಸಾಧ್ಯತೆ ಇರುತ್ತದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ ( ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 25-18, ಮೈಸೂರು 28-19, ಚಾಮರಾಜನಗರ 28-20, ರಾಮನಗರ 28-19, ಮಂಡ್ಯ 28-19, ಬೆಂಗಳೂರು ಗ್ರಾಮಾಂತರ 25-18, ಚಿಕ್ಕಬಳ್ಳಾಪುರ 24-17, ಕೋಲಾರ 25-18, ಹಾಸನ 27-18, ಚಿಕ್ಕಮಗಳೂರು 26-17, ದಾವಣಗೆರೆ 29-19, ಶಿವಮೊಗ್ಗ 30-19, ಕೊಡಗು 27-18

ತುಮಕೂರು 27-18, ಉಡುಪಿ 33-24, ಮಂಗಳೂರು 33-24, ಉತ್ತರ ಕನ್ನಡ 32-20, ಧಾರವಾಡ 29-18, ಹಾವೇರಿ 31-19, ಹುಬ್ಬಳ್ಳಿ 31-19, ಬೆಳಗಾವಿ 30-19, ಗದಗ 29-19, ಕೊಪ್ಪಳ 29-20, ವಿಜಯಪುರ 29-19, ಬಾಗಲಕೋಟ 31-19, ಕಲಬುರಗಿ 31-20, ಬೀದರ್ 29-18, ಯಾದಗಿರಿ 31-21, ರಾಯಚೂರ 31-20, ಬಳ್ಳಾರಿ 29-20

ಇದನ್ನೂ ಓದಿ:  ಶನಿವಾರದ ಈ ದಿನ ಕುಟುಂಬ ಕಲಹದಿಂದ ಮುಕ್ತಿಸಿಗಲಿದೆ ಈ ರಾಶಿಯವರಿಗೆ; ಇಲ್ಲಿದೆ ಈ ದಿನದ ಭವಿಷ್ಯ

ಆಂಧ್ರ ಕರಾವಳಿಯಲ್ಲಿ ಹಗುರವಾದ ಮಳೆ

ಶ್ರೀಲಂಕಾದಿಂದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಆಂಧ್ರಪ್ರದೇಶದ ಕರಾವಳಿಯ ಪೂರ್ವದಲ್ಲಿ ಕಡಿಮೆ ಮಟ್ಟದಲ್ಲಿ ಹರಿಯುವ ಸುಳಿಗಾಳಿ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೇರಳ ಮತ್ತು ಮಾಹೆಯಲ್ಲಿ ಚದುರಿದ ಲಘು / ಸಾಧಾರಣ ಮಳೆಗೆ ಕಾರಣವಾಗುತ್ತದೆ. ಮುಂದಿನ ಐದು ದಿನ ಮತ್ತು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಹಗುರವಾದ ಮಳೆಯಾಗಲಿದೆ.

ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಮುಂಗಾರು ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ (Rain) ಸ್ವಲ್ಪ ಬ್ರೇಕ್ ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ (Unseasonal Rain) ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಹವಾಮಾನ ಏಜೆನ್ಸಿಯ ಪ್ರಕಾರ, ಪೂರ್ವ ದಿಕ್ಕಿನ ಟ್ರಫ್ ನೈಋತ್ಯ ಬಂಗಾಳ ಕೊಲ್ಲಿಯಾದ್ಯಂತ ಉತ್ತರ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಿಗೆ ಕಡಿಮೆ ಮಟ್ಟದಲ್ಲಿ ವ್ಯಾಪಿಸಲು ಸಿದ್ಧವಾಗಿದೆ. ಇದು ಮುಂದಿನ 2-3 ದಿನಗಳಲ್ಲಿ ಪೂರ್ವ ಪರ್ಯಾಯ ದ್ವೀಪ ಕರಾವಳಿ ಮತ್ತು ಒಡಿಶಾದಲ್ಲಿ ಮಳೆಯನ್ನು ಪ್ರಚೋದಿಸುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ:  Covid-19: ರಾಜ್ಯದಲ್ಲಿ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಕಡಿಮೆ: 3ನೇ ಅಲೆಯ ಲಕ್ಷಣವಿಲ್ಲ ಎಂದ ತಜ್ಞರು

ವರ್ಷ ಚಳಿಯ ತೀವ್ರತೆ ಕಡಿಮೆ

ಚಂಡಮಾರುತಗಳ ಪ್ರಭಾವದಿಂದಾಗಿ ಮಳೆಯಾಗುತ್ತಿದ್ದು ಚಳಿಗಾಲ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಹವಾಮಾನ ಏರುಪೇರು ಹಿನ್ನಲೆಯಲ್ಲಿ ಈ ವರ್ಷ ಚಳಿಯ ತೀವ್ರತೆ ಕಡಿಮೆ ಇರಲಿದೆ ಎಂಬ ಮಾಹಿತಿಯೂ ಇದೆ. ಉತ್ತರ ಭಾರತದ ರಾಜ್ಯಗಳಲ್ಲಿಯೇ ಇನ್ನೂ ಚಳಿಗಾಲ ಆರಂಭವಾಗಿಲ್ಲ. ಡಿಸೆಂಬರ್ 21ರ ತನಕ ಕರ್ನಾಟಕದಲ್ಲಿ ಇದೇ ಮಾದರಿಯ ವಾತಾವರಣ ಇರಲಿದ್ದು, ಬಳಿಕ ಉಷ್ಣಾಂಶದಲ್ಲಿ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
Published by:Mahmadrafik K
First published: