Karnataka Weather Report: ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆ ಜೊತೆ ಚಳಿ

ಮಲೆನಾಡು, ದಕ್ಷಿಣ ಒಳನಾಡು ಭಾಗಗಳಲ್ಲಿ ಚದುರಿದ ರೀತಿ ಹಗುರವಾದ ಮಳೆ(Low Rain)ಯಾಗಲಿದೆ. ಚಳಿಗಾಲ (Winter) ಆರಂಭವಾಗಿರೋದರಿಂದ ಬೆಳಗ್ಗೆ ಮತ್ತು ಸಂಜೆ ತಂಪು ಗಾಳಿ ಹೆಚ್ಚಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದ (Karnataka Rains) ದಕ್ಷಿಣ ಒಳನಾಡಿನ ಭಾಗದಲ್ಲಿ ಇಂದು ಸಹ ತುಂತುರು ಮಳೆಯಾಗಲಿದೆ. ನಿನ್ನೆ ಸಂಜೆಯಿಂದಲೇ ಬೆಂಗಳೂರಿನಲ್ಲಿ ವರುಣ ರಾಯ (Rainfall) ಕಾಣಿಸಿಕೊಂಡಿದ್ದಾನೆ, ಮೆಜೆಸ್ಟಿಕ್, ಮಲ್ಲೇಶ್ವರಂ, ಮೇಕ್ರಿ ಸರ್ಕಲ್, ಆರ್.ಟಿ.ನಗರ, ಯಶವಂತಪುರ, ರಾಜಾಜಿನಗರ, ಜಾಲಹಳ್ಳಿ, ವಿದ್ಯಾರಣ್ಯಪುರದ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಮಳೆಯಿಂದಾಗಿ ಸಂಜೆ ಮನೆಗೆ ಹೊರಟಿದ್ದ ವಾಹನ ಸವಾರರು ಸಿಲುಕುವಂತಾಯ್ತು.  ಮಲೆನಾಡು, ದಕ್ಷಿಣ ಒಳನಾಡು ಭಾಗಗಳಲ್ಲಿ ಚದುರಿದ ರೀತಿ ಹಗುರವಾದ ಮಳೆ(Low Rain)ಯಾಗಲಿದೆ. ಚಳಿಗಾಲ (Winter) ಆರಂಭವಾಗಿರೋದರಿಂದ ಬೆಳಗ್ಗೆ ಮತ್ತು ಸಂಜೆ ತಂಪು ಗಾಳಿ ಹೆಚ್ಚಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather Today) ಗರಿಷ್ಠ 26, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಮತ್ತೊಂದೆಡೆ ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದ್ದು, ಆಗಸದಲ್ಲಿ ಬೆಳ್ಳಿ ಮೋಡಗಳ (Cloud) ಓಡಾಟ ಹೆಚ್ಚಿದೆ. ಎಂದಿನಂತೆ ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣದ ಜೊತೆ ತುಂತುರು ಮಳೆ ಇರಲಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ  (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 26-18, ಮೈಸೂರು 28-18, ಚಾಮರಾಜನಗರ 28-18, ರಾಮನಗರ 28-19, ಮಂಡ್ಯ 28-18, ಬೆಂಗಳೂರು ಗ್ರಾಮಾಂತರ 26-18, ಚಿಕ್ಕಬಳ್ಳಾಪುರ 25-17, ಕೋಲಾರ 27-18, ಹಾಸನ 27-17, ಚಿಕ್ಕಮಗಳೂರು 27-17, ದಾವಣಗೆರೆ 29-19, ಶಿವಮೊಗ್ಗ 30-19, ಕೊಡಗು 27-17, ತುಮಕೂರು 28-18

ಇದನ್ನೂ ಓದಿ:  ಶುಕ್ರವಾರದ ಈ ದಿನ ಷೇರು ಹೂಡಿಕೆಯಲ್ಲಿ ಈ ರಾಶಿಯವರಿಗೆ ಲಾಭ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಉಡುಪಿ 33-27, ಮಂಗಳೂರು 32-24, ಉತ್ತರ ಕನ್ನಡ 31-20, ಧಾರವಾಡ 29-20, ಹಾವೇರಿ 30-19, ಹುಬ್ಬಳ್ಳಿ 29-19, ಬೆಳಗಾವಿ 29-18, ಗದಗ 29-19, ಕೊಪ್ಪಳ 29-20, ವಿಜಯಪುರ 29-20, ಬಾಗಲಕೋಟ 30-20, ಕಲಬುರಗಿ 29-21, ಬೀದರ್ 27-19, ಯಾದಗಿರಿ 30-21, ರಾಯಚೂರ 29-21, ಬಳ್ಳಾರಿ 28-20

ಆಂಧ್ರ ಪ್ರದೇಶದಲ್ಲಿ ಹೊಸ ಮಳೆ

ಬಂಗಾಳ ಕೊಲ್ಲಿಯ ಕರಾವಳಿ ಒಡಿಶಾ ಹೊಸ ಮಳೆಗೆ ಸಾಕ್ಷಿಯಾಗಲಿದೆ: ಜವಾದ್ ಚಂಡಮಾರುತದಿಂದ ಉಂಟಾದ ಆರ್ದ್ರ ಪರಿಸ್ಥಿತಿಯಿಂದ ಚೇತರಿಸಿಕೊಂಡ ನಂತರ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಶೀಘ್ರದಲ್ಲೇ ಹೊಸ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಹೇಳಿದೆ.

ಹವಾಮಾನ ಏಜೆನ್ಸಿಯ ಪ್ರಕಾರ, ಪೂರ್ವ ದಿಕ್ಕಿನ ಟ್ರಫ್ ನೈಋತ್ಯ ಬಂಗಾಳ ಕೊಲ್ಲಿಯಾದ್ಯಂತ ಉತ್ತರ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಿಗೆ ಕಡಿಮೆ ಮಟ್ಟದಲ್ಲಿ ವ್ಯಾಪಿಸಲು ಸಿದ್ಧವಾಗಿದೆ. ಇದು ಮುಂದಿನ 2-3 ದಿನಗಳಲ್ಲಿ ಪೂರ್ವ ಪರ್ಯಾಯ ದ್ವೀಪ ಕರಾವಳಿ ಮತ್ತು ಒಡಿಶಾದಲ್ಲಿ ಮಳೆಯನ್ನು ಪ್ರಚೋದಿಸುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ:  ಪದ್ಮಶ್ರೀ ಪುರಸ್ಕೃತೆಗೆ ಸ್ವಂತದ ಸೂರಿಲ್ಲ.. ಕನ್ನಡಿಗರೇ ಜೋಗತಿ ಮಂಜಮ್ಮಗೆ ನೆರವಾಗಿ, ಇದು ನ್ಯೂಸ್18 ಕಳಕಳಿ

ಈ ವರ್ಷ ಚಳಿಯ ತೀವ್ರತೆ ಕಡಿಮೆ

ಚಂಡಮಾರುತಗಳ ಪ್ರಭಾವದಿಂದಾಗಿ ಮಳೆಯಾಗುತ್ತಿದ್ದು ಚಳಿಗಾಲ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಹವಾಮಾನ ಏರುಪೇರು ಹಿನ್ನಲೆಯಲ್ಲಿ ಈ ವರ್ಷ ಚಳಿಯ ತೀವ್ರತೆ ಕಡಿಮೆ ಇರಲಿದೆ ಎಂಬ ಮಾಹಿತಿಯೂ ಇದೆ. ಉತ್ತರ ಭಾರತದ ರಾಜ್ಯಗಳಲ್ಲಿಯೇ ಇನ್ನೂ ಚಳಿಗಾಲ ಆರಂಭವಾಗಿಲ್ಲ. ಡಿಸೆಂಬರ್ 21ರ ತನಕ ಕರ್ನಾಟಕದಲ್ಲಿ ಇದೇ ಮಾದರಿಯ ವಾತಾವರಣ ಇರಲಿದ್ದು, ಬಳಿಕ ಉಷ್ಣಾಂಶದಲ್ಲಿ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ (Unseasonal Rains) ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಮುಂಗಾರು (Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆ(Rainfall)ಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ (Bengaluru Life) ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್ ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
Published by:Mahmadrafik K
First published: