Karnataka Weather Report: ರಾಜ್ಯದ ಈ ಜಿಲ್ಲೆಗಳಲ್ಲಿ ಇವತ್ತು ಮಳೆ ಸಾಧ್ಯತೆ

ರಾಜ್ಯದಲ್ಲಿಂದು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ (Rainfall) ಸಾಧ್ಯತೆಗಳಿವೆ . ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ (north Karnataka) ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆ ಶೀತ ಗಾಳಿ (Clod Wave) ಆರಂಭಗೊಂಡಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದಲ್ಲಿಂದು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ (Rainfall) ಸಾಧ್ಯತೆಗಳಿವೆ . ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ (north Karnataka) ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆ ಶೀತ ಗಾಳಿ (Clod Wave) ಆರಂಭಗೊಂಡಿತ್ತು. ಬೀದರ್ (Bidar), ಯಾದಗಿರಿ (Yadagiri) , ರಾಯಚೂರು (Raichur) ಮತ್ತು ಕೋಲಾರ (kolar) ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನುಳಿದ ಭಾಗಗಳಲ್ಲಿ ಚಳಿ (Winter) ಮುಂದುವರಿದ್ರೆ, ಕೆಲವು ಕಡೆ ಶೀತದ ಪರಿಣಾಮ ತಗ್ಗುತ್ತಿದೆ. ಬೆಳಗ್ಗೆ ಸುಮಾರು 8 ಗಂಟೆವರೆಗೂ ದಟ್ಟವಾದ ಮಂಜು ಆವರಿಸಲಿದ್ದು, ವಾಹನ ಸವಾರರು ಪರದಾಡು ಪರಿಸ್ಥಿತಿ ಮಲೆನಾಡು ಭಾಗಗಳಲ್ಲಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಇತ್ತ ಮೈಸೂರು ಭಾಗದಲ್ಲಿ ಶುಷ್ಕ ಹಮಾಮಾನದ ಜೊತೆ ಚಳಿ ಸಹ ಇರಲಿದೆ. ಬೆಳಗ್ಗೆ ಬೀಳುವ ಮಂಜು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಡಲೆ, ಜೋಳ ಹಳದಿ ರೋಗಕ್ಕೆ ತುತ್ತಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ಕೊರೋನಾ, ಓಮೈಕ್ರಾನ್ (Corona Virus And Omicron Variant) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಸಣ್ಣ ನೆಗಡಿಗೂ ಜನರು ಹೆದರುವಂತಾಗಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-18, ಮೈಸೂರು 28-17, ಚಾಮರಾಜನಗರ 29-19, ರಾಮನಗರ 29-19, ಮಂಡ್ಯ 29-18, ಬೆಂಗಳೂರು ಗ್ರಾಮಾಂತರ 27-18, ಚಿಕ್ಕಬಳ್ಳಾಪುರ 26-16, ಕೋಲಾರ 27-17, ಹಾಸನ 29-17, ಚಿಕ್ಕಮಗಳೂರು 28-17, ದಾವಣಗೆರೆ 31-18, ಶಿವಮೊಗ್ಗ 31-19, ಕೊಡಗು 28-16, ತುಮಕೂರು 29-18, ಉಡುಪಿ 31-23

ಇದನ್ನೂ ಓದಿ:  Karnataka Weekend Curfew: ಎರಡು ದಿನ ಏನಿರುತ್ತೆ? ಏನಿರಲ್ಲ?

ಮಂಗಳೂರು 31-23, ಉತ್ತರ ಕನ್ನಡ 31-16, ಧಾರವಾಡ 29-16, ಹಾವೇರಿ 30-17, ಹುಬ್ಬಳ್ಳಿ 30-16, ಬೆಳಗಾವಿ 29-14, ಗದಗ 30-17, ಕೊಪ್ಪಳ 29-19, ವಿಜಯಪುರ 27-20, ಬಾಗಲಕೋಟ 27-21, ಕಲಬುರಗಿ 30-17, ಬೀದರ್ 27-17, ಯಾದಗಿರಿ 29-17, ರಾಯಚೂರ 29-19, ಬಳ್ಳಾರಿ 30-20

ವಿವಿಧ ರಾಜ್ಯಗಳಲ್ಲಿ ಮಳೆ

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಚಂಡಮಾರುತದ ಪರಿಚಲನೆಯೊಂದಿಗೆ ದೆಹಲಿ, ಪಂಜಾಬ್​, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಳೆ ಶುರುವಾಗಿದೆ. ಜನವರಿ 7ರವರೆಗೆ ಈ ರಾಜ್ಯಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.

ಜನವರಿ 7 ಮತ್ತು 8ರ ಸುಮಾರಿಗೆ ಹೆಚ್ಚಿನ ಮಳೆಯಾಗಲಿದೆ. ಜನವರಿ 9 ರವರೆಗೂ ಈ ರಾಜ್ಯಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜನವರಿ 7 ಮತ್ತು 8 ರಂದು ಪಂಜಾಬ್ ಮತ್ತು ಹರಿಯಾಣದ ಉತ್ತರ ಭಾಗಗಳು ಮತ್ತು ದೆಹಲಿಯಲ್ಲಿ ಆಲಿಕಲ್ಲು ಮಳೆ ಬೀಳಲಿದೆ. ಇದು ಈ ರಾಜ್ಯಗಳಿಗೆ ಆತಂಕಕಾರಿ ಪರಿಸ್ಥಿತಿಯಾಗಿರಬಹುದು ಮತ್ತು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಬೆಳೆ ಹಾನಿಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ:  Mandya: ಶಾಲೆಗೆ ಮೊಬೈಲ್ ತಂದ ತಪ್ಪಿಗೆ ಬಾಲಕಿಯ ಬಟ್ಟೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ?

ಅಕಾಲಿಕ ಮಳೆಗೆ ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ (Unseasonal Rain)ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಚಳಿಯ (Winter) ಪ್ರಮಾಣ ಹೆಚ್ಚಾಗಿದ್ದು, ಜನರನ್ನು ನಡುಗಿಸುತ್ತಿದೆ.   ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್(Break) ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
Published by:Mahmadrafik K
First published: