Karnataka Weather Report: ಮೈ ನಡುಗಿಸುವ ಚಳಿ: ನಿಮ್ಮೂರಿನ ಹವಾಮಾನ ವರದಿ ಇಲ್ಲಿದೆ ನೋಡಿ

ಇಂದು ರಾಜ್ಯದಲ್ಲಿ ಶುಷ್ಕ ಹವಾಮಾನ ಇರಲಿದ್ದು, ಎಂದಿನಂತೆ ಚಳಿ ಇರಲಿದೆ. ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಇಂದು ರಾಜ್ಯದಲ್ಲಿ ಶುಷ್ಕ ಹವಾಮಾನ ಇರಲಿದ್ದು, ಎಂದಿನಂತೆ ಚಳಿ ಇರಲಿದೆ. ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ. ಇತ್ತ ಮೈಸೂರು ಭಾಗದಲ್ಲಿ ಶುಷ್ಕ ಹಮಾಮಾನದ ಜೊತೆ ಚಳಿ ಸಹ ಇರಲಿದೆ. ಬೆಳಗ್ಗೆ ಬೀಳುವ ಮಂಜು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಡಲೆ, ಜೋಳ ಹಳದಿ ರೋಗಕ್ಕೆ ತುತ್ತಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ಕೊರೋನಾ, ಓಮೈಕ್ರಾನ್ (Corona And Omicron) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಸಣ್ಣ ನೆಗಡಿಗೂ ಜನರು ಹೆದರುವಂತಾಗಿದೆ.

ರಾಜ್ಯದಲ್ಲಿ ದಿನೇ ದಿನೇ ಚಳಿಯ(Cold) ಪ್ರಮಾಣ ಹೆಚ್ಚಾಗುತ್ತಿದ್ದು, ಜನರನ್ನು ನಡುಗಿಸುತ್ತಿದೆ. ಬೆಳಗಿನ ಜಾವ ಮತ್ತು ಸಂಜೆಯಾಗುತ್ತಲೇ ಶೀತದ ಸುಳಿಗಾಳಿ(Cold Wave) ಜನರು ಹೊರಗಡೆ ಹೋಗದಂತೆ ಮಾಡುತ್ತಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ ( ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ )

ಬೆಂಗಳೂರು 27-17, ಮೈಸೂರು 30-18, ಚಾಮರಾಜನಗರ 30-18, ರಾಮನಗರ 29-18, ಮಂಡ್ಯ 30-18, ಬೆಂಗಳೂರು ಗ್ರಾಮಾಂತರ 27-17, ಚಿಕ್ಕಬಳ್ಳಾಪುರ 27-16, ಕೋಲಾರ 28-18, ಹಾಸನ 28-17, ಚಿಕ್ಕಮಗಳೂರು 28-16, ದಾವಣಗೆರೆ 32-19, ಶಿವಮೊಗ್ಗ 32-18, ಕೊಡಗು 28-16, ತುಮಕೂರು 29-17, ಉಡುಪಿ 31-23

ಇದನ್ನೂ ಓದಿ:  ಕೆಟ್ಟ ನನ್ಮಗ, ಜಿಲ್ಲೆನೇ ಹಾಳು ಮಾಡಿದ್ದಾನೆ.. ಮಾಧುಸ್ವಾಮಿ ಬಗ್ಗೆ ಸಚಿವ-ಸಂಸದರ ಗುಸು ಗುಸು Video ಸಂಚಲನ

ಮಂಗಳೂರು 31-23, ಉತ್ತರ ಕನ್ನಡ 32-17, ಧಾರವಾಡ 31-16, ಹಾವೇರಿ 32-18, ಹುಬ್ಬಳ್ಳಿ 31-17, ಬೆಳಗಾವಿ 29-16, ಗದಗ 31-18, ಕೊಪ್ಪಳ 31-19, ವಿಜಯಪುರ 31-19, ಬಾಗಲಕೋಟ 32-19, ಕಲಬುರಗಿ 30-19, ಬೀದರ್ 29-18, ಯಾದಗಿರಿ 31-19, ರಾಯಚೂರ 31-19, ಬಳ್ಳಾರಿ 31-19

ವಿವಿಧ ರಾಜ್ಯಗಳಲ್ಲಿ ಮಳೆ

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಚಂಡಮಾರುತದ ಪರಿಚಲನೆಯೊಂದಿಗೆ ದೆಹಲಿ, ಪಂಜಾಬ್​, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಳೆ ಶುರುವಾಗಿದೆ. ಜನವರಿ 7ರವರೆಗೆ ಈ ರಾಜ್ಯಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.

ಬೆಳೆ ಹಾನಿಯಾಗುವ ಸಾಧ್ಯತೆ

ಜನವರಿ 7 ಮತ್ತು 8ರ ಸುಮಾರಿಗೆ ಹೆಚ್ಚಿನ ಮಳೆಯಾಗಲಿದೆ. ಜನವರಿ 9 ರವರೆಗೂ ಈ ರಾಜ್ಯಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜನವರಿ 7 ಮತ್ತು 8 ರಂದು ಪಂಜಾಬ್ ಮತ್ತು ಹರಿಯಾಣದ ಉತ್ತರ ಭಾಗಗಳು ಮತ್ತು ದೆಹಲಿಯಲ್ಲಿ ಆಲಿಕಲ್ಲು ಮಳೆ ಬೀಳಲಿದೆ. ಇದು ಈ ರಾಜ್ಯಗಳಿಗೆ ಆತಂಕಕಾರಿ ಪರಿಸ್ಥಿತಿಯಾಗಿರಬಹುದು ಮತ್ತು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಬೆಳೆ ಹಾನಿಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ:  Weekend Curfewನಲ್ಲಿ ಮದ್ಯ ಮಾರಾಟ ವಿಚಾರ; ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟ ರಾಜ್ಯ ಸರ್ಕಾರ

ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್, ಲಡಾಖ್, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಸ್ಥಳಗಳಲ್ಲಿ ಸಾಕಷ್ಟು ವ್ಯಾಪಕವಾದ ಮಳೆ ಮತ್ತು ದಟ್ಟವಾದ ಹಿಮ ಬಿದ್ದಿದೆ.

ವಾಯುವ್ಯ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು 2-3 ಡಿಗ್ರಿಗಳಷ್ಟು ಹೆಚ್ಚಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕಂಡುಬಂದಿದೆ.

ಅಕಾಲಿಕ ಮಳೆಗೆ ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ (Unseasonal Rain)ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಚಳಿಯ (Winter) ಪ್ರಮಾಣ ಹೆಚ್ಚಾಗಿದ್ದು, ಜನರನ್ನು ನಡುಗಿಸುತ್ತಿದೆ.   ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್(Break) ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
Published by:Mahmadrafik K
First published: