Karnataka Weather Report: ಬೆಳಗ್ಗೆ ಚಳಿಗಾಲದ ಅನುಭವ, ಮಧ್ಯಾಹ್ನ ಬೇಸಿಗೆಯ ಬಿಸಿಲು; ಇಲ್ಲಿದೆ ನಿಮ್ಮ ಜಿಲ್ಲೆಯ ಹವಾಮಾನ

Karnataka Weather Today 4th Feb 2022: ರಾಜ್ಯದಲ್ಲಿ ಮತ್ತೆ ಹವಾಮಾನ ಬದಲಾಗುತ್ತಿದ್ದು, ಸುಳಿಗಾಳಿಯ (Cold Wave) ವೇಗ ಹೆಚ್ಚಾಗುತ್ತಿದೆ. ಪರಿಣಾಮ ಚಳಿ(Winter)ಯ ತೀವ್ರತೆ ಏರಿಕೆಯಾಗ್ತಿದೆ. ಮತ್ತೊಂದು ಕಡೆ ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲಿನ ಪ್ರಖರತೆ ಬೇಸಿಗೆ(Summer)ಯನ್ನು ನೆನಪು ಮಾಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today 4th Feb 2022: ರಾಜ್ಯದಲ್ಲಿ ಮತ್ತೆ ಹವಾಮಾನ ಬದಲಾಗುತ್ತಿದ್ದು, ಸುಳಿಗಾಳಿಯ (Cold Wave) ವೇಗ ಹೆಚ್ಚಾಗುತ್ತಿದೆ. ಪರಿಣಾಮ ಚಳಿ(Winter)ಯ ತೀವ್ರತೆ ಏರಿಕೆಯಾಗ್ತಿದೆ. ಮತ್ತೊಂದು ಕಡೆ ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲಿನ ಪ್ರಖರತೆ ಬೇಸಿಗೆ(Summer)ಯನ್ನು ನೆನಪು ಮಾಡುತ್ತಿದೆ. ಉತ್ತರ ಕರ್ನಾಟಕ(North Karnataka)ದ ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ವಿಜಯಪುರ, ಕೊಪ್ಪಳ ಜಿಲ್ಲೆಯಲ್ಲಿ ನಿಧಾನವಾಗಿ ಬಿಸಿಲು ಏರಿಕೆಯಾಗತೊಡಗಿದೆ. ಬೆಳಗ್ಗೆ ಚಳಿಯ ಜೊತೆ ಮಂಜು ಕೂಡಿದ ವಾತಾವರಣ ಇರಲಿದೆ. ಕರಾವಳಿ ಭಾಗದಲ್ಲಿಯೂ ಒಣ ಹವೆ ಇರಲಿದೆ. ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಬಿಸಿಲು ಹೆಚ್ಚಾಗುತ್ತಿದೆ. ಇಂದು ಗರಿಷ್ಠ 31 ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 31-17, ಮೈಸೂರು 33-16, ಚಾಮರಾಜನಗರ 33-17, ರಾಮನಗರ 32-16, ಮಂಡ್ಯ 33-16, ಬೆಂಗಳೂರು ಗ್ರಾಮಾಂತರ 31-17, ಚಿಕ್ಕಬಳ್ಳಾಪುರ 30-16, ಕೋಲಾರ 24-19, ಹಾಸನ 32-17, ಚಿಕ್ಕಮಗಳೂರು 30-14, ದಾವಣಗೆರೆ 32-16, ಶಿವಮೊಗ್ಗ 33-15, ಕೊಡಗು 29-13, ತುಮಕೂರು 31-16

ಉಡುಪಿ 31-20, ಮಂಗಳೂರು 31-20, ಉತ್ತರ ಕನ್ನಡ 31-25, ಧಾರವಾಡ 31-15, ಹಾವೇರಿ 31-15, ಹುಬ್ಬಳ್ಳಿ 32-16, ಬೆಳಗಾವಿ 29-14, ಗದಗ 32-16, ಕೊಪ್ಪಳ 32-26, ವಿಜಯಪುರ 31-16, ಬಾಗಲಕೋಟ 32-16, ಕಲಬುರಗಿ 32-14, ಬೀದರ್ 29-16, ಯಾದಗಿರಿ 32-16, ರಾಯಚೂರ 32-16, ಬಳ್ಳಾರಿ 33-17

ಇದನ್ನೂ ಓದಿ:  Accident: ಹಾವಾಗಿ ಬಂದಿದ್ದ ಜವರಾಯ! ನಾಲೆಗೆ ಬಿದ್ದ ಕಾರ್ - ಹೆಂಡತಿ ಸಾವು, ಗಂಡ ಬಚಾವ್!

2021ರಲ್ಲಿ ಸುರಿದ ಅಕಾಲಿಕ ಮಳೆಗೆ ಇಡೀ ಕರುನಾಡು ತೊಂದರೆಗೆ ಸಿಲುಕಿತ್ತು. ನವೆಂಬರ್ ಕೊನೆಯ ವಾರ ಮತ್ತು ಡಿಸೆಂಬರ್ ನಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಜಲಾಶಯಗಳು ಭರ್ತಿಯಾಗಿದ್ದವು. ಪರಿಣಾಮ ಫೆಬ್ರವರಿ ಮೊದಲ ವಾರ ಬಂದ್ರೂ ಇಂದೂ ಸಹ ಜಲಾಶಯಗಳು ಭಾಗಶಃ ಭರ್ತಿಯಾಗಿವೆ.

ಉತ್ತರ ಭಾರತದಲ್ಲಿ ಹೇಗಿದೆ ಹವಾಮಾನ ?

ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ವ್ಯಾಪಕವಾದ ಹಿಮ ಅಥವಾ ಮಳೆ ನಿರೀಕ್ಷಿಸಲಾಗಿದೆ. ಉತ್ತರಾಖಂಡದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಅಥವಾ ಹಿಮದ ಸಾಧ್ಯತೆಯಿದೆ.  ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮಿಂಚು ಸಹಿತ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಇತ್ತ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಕೇರಳದಲ್ಲಿ ಪ್ರತ್ಯೇಕ ಮಳೆಯಾಗುವ ಸಾಧ್ಯತೆಯಿದೆ.

ಸಿಕ್ಕಿಂನ ಕೆಲವು ಭಾಗಗಳಲ್ಲಿ ಹಿಮ ಬೀಳುವ ಸಾಧ್ಯತೆಗಳಿವೆ. ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ ರಾತ್ರಿ/ಬೆಳಿಗ್ಗೆ ದಟ್ಟವಾದ ಮಂಜು ತುಂಬಾ ದಟ್ಟವಾಗಿರುತ್ತದೆ.

ಇದನ್ನೂ ಓದಿ:  Hometown of Blood Donors: 'ರಕ್ತದಾನಿಗಳ ತವರೂರು' ಎಂದು ಗೂಗಲ್‌ನಿಂದ ಕರೆಯಲ್ಪಟ್ಟ ಕರ್ನಾಟಕದ ಗ್ರಾಮ

ರಾಜ್ಯದ ಜಲಾಶಯಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಪ್ರಮಾಣ

ಕಳೆದ ವರ್ಷ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆಯ ಅಬ್ಬರವಿತ್ತು. ಅಲ್ಲದೆ, ಹೆಚ್ಚು ಸೈಕ್ಲೋನ್‌ಗಳು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸುರಿದ ಅಕಾಲಿಕ ಮಳೆಯಿಂದ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಅಲ್ಲದೆ, ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದವು.

ಆದರೆ ಪ್ರಸ್ತುತ ಚಳಿ, ಮೋಡ ಕವಿದ ವಾತಾವರಣ ಇರುವುದರಿಂದ ಜೊತೆಗೆ ಬೇಸಿಗೆ ಹತ್ತಿರವಾಗುತ್ತಿರುವುದರಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೊಂದೆಡೆ, ಬೇಸಿಗೆ ಸಹ ಬೇಗನೆ ಆರಂಭವಾಗುವ ಲಕ್ಷಣಗಳಿದ್ದು, ಜಲಾಶಯಗಳ ನೀರಿನ ಪ್ರಮಾಣ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ಸದ್ಯ, ಹಲವು ಜಲಾಶಯಗಳ ಒಳಹರಿವು ಬಹುತೇಕ ನಿಂತುಹೋಗಿದೆ.
Published by:Mahmadrafik K
First published: