Karnataka Weather Report: ಚಳಿಯೊಂದಿಗೆ ದಟ್ಟವಾದ ಮಂಜು, ಯಾದಗಿರಿಯಲ್ಲಿ ಕನಿಷ್ಠ ತಾಪಮಾನ

ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಚಳಿಯೊಂದಿಗೆ ದಟ್ಟವಾದ ಮಂಜು ಆವರಿಸಲಿದೆ. ಬೀದರ್, ಕಲಬುರಗಿ, ಬಾಗಲಕೋಟೆ, ಕೊಪ್ಪಳದಲ್ಲಿ ಚಳಿ ಪ್ರಮಾಣ ಇಳಿಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದೆ. ಮೈಸೂರು ಭಾಗದಲ್ಲಿ ಚಳಿ ಜೊತೆ ಶೀತಗಾಳಿ (Cold Wave) ಹಾಗೂ ಇಬ್ಬನಿ ಬೀಳಲಿದೆ. ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಚಳಿಯೊಂದಿಗೆ ದಟ್ಟವಾದ ಮಂಜು ಆವರಿಸಲಿದೆ. ಬೀದರ್, ಕಲಬುರಗಿ, ಬಾಗಲಕೋಟೆ, ಕೊಪ್ಪಳದಲ್ಲಿ ಚಳಿ ಪ್ರಮಾಣ ಇಳಿಕೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ  (Bengaluru Weather) ಗರಿಷ್ಠ 27 ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಗಡಿ ನಾಡು ಬೀದರ್ ನಲ್ಲಿ ಕಳೆದೊಂದು ವಾರಗಳಿಂದ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಮೈಕೊರೆಯುವ ಚಳಿಗೆ ಜನರು ಗಡಗಡ ನಡುಗುತ್ತಿದ್ದಾರೆ. ಬೀದರ್ (Bidar) ಜಿಲ್ಲೆಯಲ್ಲಿ ತಣ್ಣನೆಯ ವಾತಾವರಣ ಇರೋದರಿಂದ ಜನ್ರು ಹಾಸಿಗೆಯಿಂದ ಮೇಲೇಳಲು ಕಷ್ಟ ಪಡುತ್ತಿದ್ದಾರೆ. ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಯಾದರೂ ಜನ್ರನ್ನು ವಿಪರೀತ ಚಳಿ ಕಾಡುತ್ತಿದ್ದು ಗಡಿ ಜಿಲ್ಲೆ ಬೀದರ್ ನಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ 

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-16, ಮೈಸೂರು 29-17, ಚಾಮರಾಜನಗರ 29-17, ರಾಮನಗರ 29-17, ಮಂಡ್ಯ 29-17, ಬೆಂಗಳೂರು ಗ್ರಾಮಾಂತರ 27-16, ಚಿಕ್ಕಬಳ್ಳಾಪುರ 27-15, ಕೋಲಾರ 27-16, ಹಾಸನ 28-15, ಚಿಕ್ಕಮಗಳೂರು 28-15, ದಾವಣಗೆರೆ 31-18, ಶಿವಮೊಗ್ಗ 32-18, ಕೊಡಗು 29-16, ತುಮಕೂರು 29-16. ಉಡುಪಿ 33-23

ಇದನ್ನೂ ಓದಿ:  Bengaluru Power Cut: ಬೆಂಗಳೂರಿಗರೇ ಅಲರ್ಟ್.. ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರೋಲ್ಲ..!

ಮಂಗಳೂರು 32-24, ಉತ್ತರ ಕನ್ನಡ 33-24, ಧಾರವಾಡ 31-17, ಹಾವೇರಿ 32-18, ಹುಬ್ಬಳ್ಳಿ 31-18, ಬೆಳಗಾವಿ 30-17, ಗದಗ 30-17, ಕೊಪ್ಪಳ 30-18, ವಿಜಯಪುರ 29-18, ಬಾಗಲಕೋಟ 31-18, ಕಲಬುರಗಿ 30-17, ಬೀದರ್ 27-15, ಯಾದಗಿರಿ 24-14, ರಾಯಚೂರ 31-18, ಬಳ್ಳಾರಿ 31-18

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ಭೀಕರ ಚಳಿ ಇದೆ. ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಚಳಿಯಿಂದಾಗಿ ನಡುಗುತ್ತಿವೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜನವರಿ 3ರವರೆಗೆ ಚಳಿ ಹೀಗೆ ಮುಂದುವರಿಯಲಿದೆ.

ಲಘು ಮಳೆಯೊಂದಿಗೆ ಹಿಮಪಾತ

ಹವಾಮಾನ ಇಲಾಖೆ (IMD) ಪ್ರಕಾರ ಜನವರಿ 4-5 ರಂದು ವಾಯುವ್ಯ ಭಾರತದ ಬಯಲು ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಅದೇ ಸಮಯದಲ್ಲಿ, ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಲಘು ಮಳೆಯೊಂದಿಗೆ ಹಿಮಪಾತದಿಂದಾಗಿ ತಾಪಮಾನದಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:  Astrology: ಈ ರಾಶಿಯವರು ಇಂದು 3 ಹಕ್ಕಿಗಳನ್ನು ನೋಡಿದ್ರೆ ಅದೃಷ್ಟವೋ ಅದೃಷ್ಟ: 12 ರಾಶಿಗಳ ದಿನಭವಿಷ್ಯ ಹೀಗಿದೆ

ಪಂಜಾಬ್, ಉತ್ತರ ಪ್ರದೇಶದಲ್ಲಿ ದಟ್ಟವಾದ ಮಂಜು

ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಪ್ರಕಾರ, ಬಂಗಾಳಕೊಲ್ಲಿಯ ನೈಋತ್ಯದಲ್ಲಿ ಚಂಡಮಾರುತದ ಪರಿಚಲನೆ ಉಳಿದಿದೆ. ಅದೇ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರದ ಮೇಲೆ ದುರ್ಬಲವಾದ ಪಾಶ್ಚಿಮಾತ್ಯ ಅಡಚಣೆಯು ಉಳಿದಿದೆ. ಜನವರಿ 4 ರ ಹೊತ್ತಿಗೆ, ಪಶ್ಚಿಮದ ಅಡಚಣೆಯು ಬಲಗೊಳ್ಳಬಹುದು ಮತ್ತು ಪಶ್ಚಿಮ ಹಿಮಾಲಯವನ್ನು ತಲುಪಬಹುದು ಪಂಜಾಬ್ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಮತ್ತು ಉತ್ತರ ಮಧ್ಯಪ್ರದೇಶ ಮತ್ತು ಈಶಾನ್ಯ ಭಾರತದಲ್ಲಿ ಜನವರಿ 4 ರವರೆಗೆ ಸಾಧಾರಣ ಮಂಜು ಇರುತ್ತದೆ.

ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ(Unseasonal Rain) ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಚಳಿಯ(Winter) ಪ್ರಮಾಣ ಹೆಚ್ಚಾಗಿದ್ದು, ಜನರನ್ನು ನಡುಗಿಸುತ್ತಿದೆ.   ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್(Break) ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
Published by:Mahmadrafik K
First published: