Karnataka Weather Report: ರಾಜ್ಯದಲ್ಲಿ ಚಳಿ ಇಳಿಕೆ, ಮೋಡ ಕವಿದ ವಾತಾವರಣ; ಉತ್ತರ ಭಾರತದಲ್ಲಿ ಮಳೆ ಸಾಧ್ಯತೆ

ಈ ವರ್ಷ ಅಕಾಲಿಕ ಮಳೆಯಿಂದಾಗಿ (Unseasonal Rains) ಹವಾಮಾನದಲ್ಲಿ ಹೆಚ್ಚು ಬದಲಾವಣೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಚಳಿ (Cold) ಪ್ರಮಾಣ ಇಳಿಕೆಯಾಗುತ್ತಿದೆ. ಇತ್ತ ಉತ್ತರ ಕರ್ನಾಟಕ (North Karnataka) ಭಾಗದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗುತ್ತಿದೆ, ಇನ್ನುಳಿದಂತೆ ಉಳಿದ ಭಾಗಗಳಲ್ಲಿ ಒಣ ಹವೆ ಇರಲಿದೆ. ಈ ವರ್ಷ ಅಕಾಲಿಕ ಮಳೆಯಿಂದಾಗಿ (Unseasonal Rains) ಹವಾಮಾನದಲ್ಲಿ ಹೆಚ್ಚು ಬದಲಾವಣೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ ( ಗರಿಷ್ಠ – ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-16, ಮೈಸೂರು 29-17, ಚಾಮರಾಜನಗರ 29 - 17, ರಾಮನಗರ 28-17, ಮಂಡ್ಯ 29-17, ಬೆಂಗಳೂರು ಗ್ರಾಮಾಂತರ 27-16, ಚಿಕ್ಕಬಳ್ಳಾಪುರ 27-15, ಕೋಲಾರ 26-16, ಹಾಸನ 28-16, ಚಿಕ್ಕಮಗಳೂರು 28-16, ದಾವಣಗೆರೆ 31-18, ಶಿವಮೊಗ್ಗ 32-18, ಕೊಡಗು 28-16, ತುಮಕೂರು 29-16

ಉಡುಪಿ 32-24, ಮಂಗಳೂರು 33-24, ಉತ್ತರ ಕನ್ನಡ 33-19, ಧಾರವಾಡ 31-18, ಹಾವೇರಿ 32-18, ಹುಬ್ಬಳ್ಳಿ 31-18, ಬೆಳಗಾವಿ 30-17, ಗದಗ 30-18, ಕೊಪ್ಪಳ 30-18, ವಿಜಯಪುರ 30-18, ಬಾಗಲಕೋಟ 31-18, ಕಲಬುರಗಿ 31-18, ಬೀದರ್ 28-15, ಯಾದಗಿರಿ 31-18, ರಾಯಚೂರ 31-18, ಬಳ್ಳಾರಿ 31-18

ಉತ್ತರ ಭಾರತದ ಹಲವು ಭಾಗದಲ್ಲಿ ಯಲ್ಲೋ ಅಲರ್ಟ್ ಘೋಷಣೆ

ಪಂಜಾಬ್ ಹರಿಯಾಣ ಚಂಡಿಗಢ ದೆಹಲಿ ಮತ್ತು ರಾಜಸ್ಥಾನದಲ್ಲಿ ಜನವರಿ 2 ರವರೆಗೆ ಹವಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇನ್ನು ಮಹಾರಾಷ್ಟ್ರದ ಜಿಲ್ಲೆಗಳಾದ್ಯಂತ ನಿನ್ನೆ ಸಂಜೆ ಆಲಿಕಲ್ಲು ಮಳೆ, ಗುಡುಗು ಸಹಿತ ಮಿಂಚಿನ ಮಳೆಯಾಗಿದೆ. ಇಂದಿನಿಂದ ಜನವರಿ 2 ರವರೆಗೆ ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಶೀತ ಗಾಳಿ ಉಂಟಾಗಲಿದೆ.

ಇದನ್ನೂ ಓದಿ:  Astrology: ಮೀನ ರಾಶಿಯವರು ತಪ್ಪು ತಿಳುವಳಿಕೆಯನ್ನು ಬಗೆಹರಿಸಿಕೊಳ್ಳಿ: 12 ರಾಶಿಗಳ ದಿನಭವಿಷ್ಯ ಹೀಗಿದೆ

ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡದಲ್ಲಿ ದಟ್ಟವಾದ ಮಂಜು

ಉತ್ತರಪ್ರದೇಶ ಬಿಹಾರ ಜಾರ್ಖಂಡ್ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಇಂದು ದಟ್ಟವಾದ ಮಂಜು ಬೀಳುವ ಸಾಧ್ಯತೆಯಿದೆ. ಇಂದು ಪಶ್ಚಿಮ ಬಂಗಾಳದ ಡಾರ್ಜಲಿಂಗ್, ಕಾಲಿಂಪಾಂಗ್, ಪುರುಲಿಯಾ, ಬಂಕುರಾ, ಪಶ್ಚಿಮ-ಮಿಡ್ನಾಪುರ ಮತ್ತು ಜಾರ್‌ಗ್ರಾಮ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ಇನ್ನು ಹವಾಮಾನ ಸಂಸ್ಥೆ ಪ್ರಕಾರ, ದೆಹಲಿ, ಪಂಜಾಬ್, ರಾಜಸ್ಥಾನ, ಚಂಡೀಗಢ, ಹರಿಯಾಣ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಇಂದಿನಿಂದ ಜನವರಿ 2ರವರೆಗೆ ಶೀತ ಗಾಳಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಆದರೆ, ರಾಜಸ್ಥಾನದಲ್ಲಿ ಜನವರಿ 1 ಮತ್ತು 2ರಂದು ತೀವ್ರ ಚಳಿ ಉಂಟಾಗಲಿದೆ.

ಇದನ್ನೂ ಓದಿ:  Crime News: ಪರಾರಿ ಆಗೋದ್ರಲ್ಲಿ ಪಂಟರ್ ಇವನು.. 17ನೇ ಸಲ ಅರೆಸ್ಟ್ ಆದ ‘ಎಸ್ಕೇಪ್ ಕಾರ್ತಿಕ್’!

ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ(Unseasonal Rain) ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಚಳಿಯ(Winter) ಪ್ರಮಾಣ ಹೆಚ್ಚಾಗಿದ್ದು, ಜನರನ್ನು ನಡುಗಿಸುತ್ತಿದೆ. ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್(Break) ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ ಸುಮಾರು 9 ಗಂಟೆವರೆಗೂ ದಟ್ಟವಾದ ಮಂಜು ಆವರಿಸಿ ಮಲೆನಾಡಿನ ಅನುಭವ ನೀಡುತ್ತಿದೆ. ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಆವರಿಸುತ್ತಿರುವ ಮಂಜಿನಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆ ಹಾಳುಗುವ ಭಯದಲ್ಲಿದ್ದಾರೆ.
Published by:Mahmadrafik K
First published: