Karnataka Weather Report: ಈ ಭಾಗದಲ್ಲಿ ಇಬ್ಬನಿಯ ಸಿಂಚನ; ಉಳಿದೆಡೆ ಶುಷ್ಕ ಹವಾಮಾನ

Karnataka Weather Report Jan 24, 2022: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನಕ್ಕೆ (Weather) ಪ್ರತಿ ಮನೆಗಳಲ್ಲೂ ಶೀತ ಸಂಬಂಧಿತ ರೋಗಗಳು ಕಾಣಿಸಿಕೊಳ್ಳಲಾರಂಭಿಸಿವೆ. ಸಂಜೆ ಆಗುತ್ತಿದ್ದಂತೆ ಬೀಸುವ ಸುಳಿ ಗಾಳಿ (Cold wave) ಜನರನ್ನು ಹೊರ ಬರದಂತೆ ತಡೆಯುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Jan 24, 2022: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನಕ್ಕೆ (Weather) ಪ್ರತಿ ಮನೆಗಳಲ್ಲೂ ಶೀತ ಸಂಬಂಧಿತ ರೋಗಗಳು ಕಾಣಿಸಿಕೊಳ್ಳಲಾರಂಭಿಸಿವೆ. ಸಂಜೆ ಆಗುತ್ತಿದ್ದಂತೆ ಬೀಸುವ ಸುಳಿ ಗಾಳಿ (Cold wave) ಜನರನ್ನು ಹೊರ ಬರದಂತೆ ತಡೆಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಕನಿಷ್ಠ 16, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನುಳಿದಂತೆ ಬೆಂಗಳೂರಿನ ಆಸುಪಾಸಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ  (Cloudy Weather) ಜೊತೆ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಇನ್ನು ಉತ್ತರ ಕರ್ನಾಟಕದಲ್ಲಿ (North Karnataka) ಬೆಳಗ್ಗೆ ದಟ್ಟವಾದ ಮಂಜು ಮತ್ತು ಚಳಿ ಇದ್ರೆ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯನ ಬಿಸಿಲು ಚಳಿಗಾಲ(Winter)ದಲ್ಲಿಯೇ ಬೇಸಿಗೆ(Summer)ಯ ಅನುಭವವನ್ನು ನೀಡುತ್ತಿದೆ. ಕೆಲ ಭಾಗಗಳಲ್ಲಿ ಬೆಳಗಿನ ಜಾವ ಇಬ್ಬನಿ ಸಹ ಬೀಳುತ್ತಿದೆ.

ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇತ್ತ ಉತ್ತರ ಭಾರತದಲ್ಲಿ (North India Weather) ಹವಾಮಾನ ತದ್ವಿರುದ್ಧವಾಗಿದ್ದು, ಹಿಮಪಾತ (Snowfall) ಮತ್ತು ಮಳೆ(Rainfall)ಯಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ವರದಿಗಳು ಸಹ ಬರುತ್ತಿವೆ.

ಇದನ್ನೂ ಓದಿ:  Koppal: ಶಾಲೆಗೆ ಕೋಟಿ ಮೌಲ್ಯದ ಭೂಮಿ ದಾನ; ಮಕ್ಕಳಿಗೆ ಅಡುಗೆ ಮಾಡಿ ಜೀವನ ನಡೆಸ್ತಿರೋ ಮಹಾತಾಯಿಯ ಕಥೆ

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 28-16, ಮೈಸೂರು 31-16, ಚಾಮರಾಜನಗರ 31-17, ರಾಮನಗರ 30-16, ಮಂಡ್ಯ 31-16, ಬೆಂಗಳೂರು ಗ್ರಾಮಾಂತರ 28-16, ಚಿಕ್ಕಬಳ್ಳಾಪುರ 28-15, ಕೋಲಾರ 29-18, ಹಾಸನ 29-13, ಚಿಕ್ಕಮಗಳೂರು 28-12, ದಾವಣಗೆರೆ 30-14, ಶಿವಮೊಗ್ಗ 31-14, ಕೊಡಗು 28-13, ತುಮಕೂರು 29-14

ಉಡುಪಿ 29-20, ಮಂಗಳೂರು 30-20, ಉತ್ತರ ಕನ್ನಡ 29-13, ಧಾರವಾಡ 28-12, ಹಾವೇರಿ 30-14, ಹುಬ್ಬಳ್ಳಿ 29-13, ಬೆಳಗಾವಿ 27-12, ಗದಗ 29-14, ಕೊಪ್ಪಳ 29-15, ವಿಜಯಪುರ 27-14, ಬಾಗಲಕೋಟ 29-14, ಕಲಬುರಗಿ 29-15, ಬೀದರ್ 27-12, ಯಾದಗಿರಿ 29-16, ರಾಯಚೂರ 30-16, ಬಳ್ಳಾರಿ 30-17

ಅಕಾಲಿಕ ಮಳೆಯ ಅವಾಂತರ

ಈ ವರ್ಷ ಹೆಚ್ಚು ಅಕಾಲಿಕ ಮಳೆ(Unseasonal Rain)ಯನ್ನು ಕಂಡಿದ್ದು, ಈ ವಾತಾವರಣದ ಏರಿಳಿತಕ್ಕೆ ಕಾರಣವಾಗಿದೆ. ಸದ್ಯ ಅಕಾಲಿಕ ಮಳೆ ನಿಂತಿದ್ದು, ರಾಜ್ಯದ ಜಲಾಶಯಗಳು (Karnataka Dams) ಇಂದಿಗೂ ಭಾಗಶಃ ಭರ್ತಿಯಾಗಿವೆ. ಅಕಾಲಿಕ ಮಳೆ ರೈತರ (Farmers) ಬೆಳೆಯನ್ನು (Crops) ನಾಶಗೊಳಿಸಿದ ಪರಿಣಾಮ ತರಕಾರಿ ಬೆಲೆ (Vegetable Price hike) ಗಗನಕ್ಕೇರಿತ್ತು. ಈ ಫೆಬ್ರವರಿ ಅಂತ್ಯದವರೆಗೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Kolar: ಸರ್ಕಾರಿ ಶಾಲೆಯಲ್ಲಿ Namazಗೆ ಅವಕಾಶ: ಶಾಲಾ ಶಿಕ್ಷಕಿ ಅಮಾನತು; ತನಿಖೆಗೆ ಆದೇಶ

ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಸಣ್ಣ ಸುಳಿಗಾಳಿ (Cold Wave) ಹಿರಿಯ ಜನರನ್ನು ಮನೆಯಲ್ಲಿ ಕೂರುವಂತೆ ಮಾಡಿದೆ.

ರಾಜ್ಯದ ಜಲಾಶಯಗಳು ಭರ್ತಿ

ಇಂದು ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಇನ್ನೂ 3 ದಿನ ಕರ್ನಾಟಕದ ಉತ್ತರ ಒಳನಾಡು(NIK) ಮತ್ತು ದಕ್ಷಿಣ ಒಳನಾಡಿನಲ್ಲಿ(SIK) ಮಳೆಯಾಗಲಿದೆ. ಅದರಲ್ಲೂ ಇಂದು ಮತ್ತು ನಾಳೆ ಸಿಲಿಕಾನ್​ ಸಿಟಿ ಬೆಂಗಳೂರು(Bengaluru) ಸೇರಿದಂತೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು IMD ಹೇಳಿದೆ.

ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಬಳ್ಳಾಪುರ, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದಲ್ಲಿಯೂ ಮಳೆಯ(Rainfall) ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
Published by:Mahmadrafik K
First published: