Karnataka Weather Report: ಚಳಿಯ ಪ್ರಮಾಣದಲ್ಲಿ ಇಳಿಕೆ: ಈ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್

ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ (Winter) ಪ್ರಮಾಣ ಇಳಿಕೆಯಾಗಿದ್ದು, ಉಷ್ಣಾಂಶ ಹೆಚ್ಚಾಗುತ್ತಿದೆ. ಆದ್ರೆ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ (Winter) ಪ್ರಮಾಣ ಇಳಿಕೆಯಾಗಿದ್ದು, ಉಷ್ಣಾಂಶ ಹೆಚ್ಚಾಗುತ್ತಿದೆ. ಆದ್ರೆ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಉತ್ತರ ಕರ್ನಾಟಕದ (North Karnataka) ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟುವ ಮೂಲಕ ಬೇಸಿಗೆ (Summer) ಆರಂಭದ ಸುಳಿವು ನೀಡುತ್ತಿದೆ. ಈ ಬಾರಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ (Unseasonal Rain) ವಾತಾವರಣದಲ್ಲಿ ವೈಪರೀತ್ಯ ಉಂಟಾಗಿದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 31-16,  ಮೈಸೂರು 32-17, ಚಾಮರಾಜನಗರ 32-17, ರಾಮನಗರ 32-15, ಮಂಡ್ಯ 33-16, ಬೆಂಗಳೂರು ಗ್ರಾಮಾಂತರ 31-16, ಚಿಕ್ಕಬಳ್ಳಾಪುರ 29-14, ಕೋಲಾರ 31-16, ಹಾಸನ 31-16, ಚಿಕ್ಕಮಗಳೂರು 31-14, ದಾವಣಗೆರೆ 34-17, ಶಿವಮೊಗ್ಗ 34-17, ಕೊಡಗು 32-16, ತುಮಕೂರು 32-15, ಉಡುಪಿ 32-23

ಮಂಗಳೂರು 32-23, ಉತ್ತರ ಕನ್ನಡ 35-16, ಧಾರವಾಡ 33-16, ಹಾವೇರಿ 34-17, ಹುಬ್ಬಳ್ಳಿ 34-16, ಬೆಳಗಾವಿ 33-16, ಗದಗ 35-16, ಕೊಪ್ಪಳ 33-17, ವಿಜಯಪುರ 33-17, ಬಾಗಲಕೋಟ 34-17, ಕಲಬುರಗಿ 33-16, ಬೀದರ್ 31-16, ಯಾದಗಿರಿ 34-17, ರಾಯಚೂರ 34-17, ಬಳ್ಳಾರಿ 34-17

ಹವಾಮಾನ ಇಲಾಖೆಯ ಪ್ರಕಾರ ಪಂಜಾಬ್, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಜನವರಿ 23 ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 2 ರಂದ 4 ಡಿಗ್ರಿ ಸೆಲ್ಸಿಯಸ್ ವರಗೆ ದಾಖಲಾಗಲಿದೆ. ಸುಳಿ ಗಾಳಿ ಚಳಿಯ ತೀವ್ರತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ:  Yadgir: ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವು: ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ

ಮೋಡ ಕವಿದ ವಾತಾವರಣ

ಮುಂಬರುವ ದಿನಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸದ್ಯಕ್ಕೆ ಶೀತ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. IMD ಪ್ರಕಾರ, ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದಲ್ಲಿ ಜನವರಿ 21 ರಿಂದ ಜನವರಿ 23 ರವರೆಗೆ ಮಳೆಯಿಂದ ಹಾನಿಯುಂಟಾಗುವ ಸಾಧ್ಯತೆಗಳು ದಟ್ಟವಾಗಿವೆ.

ಜಮ್ಮುವಿನಲ್ಲಿ ತುಂತುರು ಮಳೆ ಮತ್ತು ಹಿಮ

ಕಾಶ್ಮೀರದಲ್ಲಿ ನಿರಂತರ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜಮ್ಮುವಿನ ಕೆಲ ಭಾಗಗಳಲ್ಲಿ ಚಳಿ ಹೆಚ್ಚಿದೆ. ಇಲ್ಲಿ ದಿನದ ತಾಪಮಾನವು ಸಾಮಾನ್ಯಕ್ಕಿಂತ 7 ರಿಂದ 8 ಡಿಗ್ರಿಗಳಷ್ಟು ಕುಸಿದಿದೆ. ವಾರಾಂತ್ಯದಲ್ಲಿ ಲಘು ಮಳೆ ಮತ್ತು ಹಿಮದ ಮುನ್ಸೂಚನೆ ನೀಡಿದೆ. ಜನವರಿ 22 ಮತ್ತು 23 ರಂದು ಲಘು ಮಳೆ ಹಾಗೂ ಹಿಮ ಬೀಳುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆ ವಿಭಾಗದಲ್ಲಿ (330) ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ಬುಧವಾರ ಬೆಳಗ್ಗೆ ಗಾಜಿಯಾಬಾದ್‌ನ ಎಕ್ಯೂಐ 332, ನೋಯ್ಡಾ 324, ಗ್ರೇಟರ್ ನೋಯ್ಡಾ 322, ಫರಿದಾಬಾದ್ 354, ಗುರುಗ್ರಾಮ್ 326 ಆಗಿತ್ತು. ಮುಂದಿನ ಎರಡು ದಿನಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಮಳೆ ಸಾಧ್ಯತೆ

ರಾಜಸ್ಥಾನದಲ್ಲಿ ಚಳಿಗಾಲದ ಮುಷ್ಕರ ಮುಂದುವರಿದಿದೆ

ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ಚಳಿ ಮುಂದುವರಿದಿದೆ. ಹವಾಮಾನ ಇಲಾಖೆ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಕನಿಷ್ಠ ಉಷ್ಣಾಂಶದಲ್ಲಿ ಕೊಂಚ ಏರಿಕೆಯಾಗಿದೆ.

ಇದನ್ನೂ ಓದಿ:  ಮಲಪ್ರಭಾ ಸಕ್ಕರೆ ಕಾರ್ಖಾನೆಯ ಮತ್ತೊಂದು ಯಡವಟ್ಟು; ಕಾರ್ಖಾನೆಗೆ ಸಂಬಂಧವೇ ಇಲ್ಲದ ನೂರಾರು ಜನರ ಹೆಸರಿನಲ್ಲಿ Bank ಸಾಲ

ಜನವರಿ 22ರಂದು ಹಳದಿ ಅಲರ್ಟ್

ದೆಹಲಿ-ಎನ್‌ಸಿಆರ್‌ನಲ್ಲಿ ಜನವರಿ 21 ರಿಂದ 23 ರವರೆಗೆ ಲಘು ಮಳೆಯಾಗುವ ಸಾಧ್ಯತೆಯಿದೆ. ಜನವರಿ 22ಕ್ಕೆ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯ ಜಾಫರ್‌ಪುರ ಮತ್ತು ನರೇಲಾದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಐದು ಕಡಿಮೆಯಾಗಿದೆ.
Published by:Mahmadrafik K
First published: