Karnataka Weather Report: ಬೆಳಗ್ಗೆ ಚುಮು ಚುಮು ಚಳಿ, ಮಧ್ಯಾಹ್ನವಾದ್ರೂ ಎಳೆ ಬಿಸಿಲು

Karnataka Weather Report: ಕಳೆದ ಎರಡು ದಿನಗಳಿಂದ ಏರಿಕೆಯಾಗಿದ್ದ ಚಳಿ (Winter) ಕೊಂಚ ಇಳಿಕೆಯಾಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಉತ್ತರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಕಳೆದ ಎರಡು ದಿನಗಳಿಂದ ಏರಿಕೆಯಾಗಿದ್ದ ಚಳಿ (Winter) ಕೊಂಚ ಇಳಿಕೆಯಾಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಉತ್ತರ ಕರ್ನಾಟಕದಲ್ಲಿ (North Karnataka) ಚಳಿ ಜೊತೆ ಒಣ ಹವೆ ಇರಲಿದ್ದು, ಬೆಳಗ್ಗೆ ದಟ್ಟವಾದ ಮಂಜು ಆವರಿಸಲಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಬೀದರ್, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ ಇರಲಿದೆ. ಎಂದಿನಂತೆ ಬೆಳಗ್ಗೆ ಚಳಿ(Cold Weather)ಯಿಂದ ಕೂಡಿದ ವಾತಾವರಣ ಇರಲಿದೆ.

ರಾಜ್ಯದಲ್ಲಿಯ ಹವಾಮಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು ಮತ್ತು ಬೆಳಗಿನ ಜಾವ ಇಬ್ಬನಿ ಸಹ ಬೀಳುತ್ತಿದೆ.

ರಾಜ್ಯದ ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 29-18, ಮೈಸೂರು 31-19, ಚಾಮರಾಜನಗರ 31-19, ರಾಮನಗರ 31-19, ಮಂಡ್ಯ 31-19, ಬೆಂಗಳೂರು ಗ್ರಾಮಾಂತರ 25-19, ಚಿಕ್ಕಬಳ್ಳಾಪುರ 27-18, ಕೋಲಾರ 29-18, ಹಾಸನ 29-17, ಚಿಕ್ಕಮಗಳೂರು 29-14, ದಾವಣಗೆರೆ 31-18, ಶಿವಮೊಗ್ಗ 32-16, ಕೊಡಗು 29-16, ತುಮಕೂರು 29-18

ಇದನ್ನೂ ಓದಿ:  Davanagere Accident: ಸಂಕ್ರಾಂತಿಯಂದು ಭೀಕರ ಅಪಘಾತ; ನಶೆಯಲ್ಲಿ ನಿದ್ದೆಗೆ ಜಾರಿದ ಚಾಲಕ: ಏಳು ಜನರ ದುರ್ಮರಣ

ಉಡುಪಿ 31-21, ಮಂಗಳೂರು 31-21, ಉತ್ತರ ಕನ್ನಡ 31-16, ಧಾರವಾಡ 29-15, ಹಾವೇರಿ 31-27, ಹುಬ್ಬಳ್ಳಿ 29-16, ಬೆಳಗಾವಿ 29-14, ಗದಗ 30-17, ಕೊಪ್ಪಳ 30-19, ವಿಜಯಪುರ 30-18, ಬಾಗಲಕೋಟ 31-17, ಕಲಬುರಗಿ 30-18, ಬೀದರ್ 27-17, ಯಾದಗಿರಿ 31-19, ರಾಯಚೂರ 31-19, ಬಳ್ಳಾರಿ 31-21

ರಾಜ್ಯದ ಜಲಾಶಯಗಳು ಭರ್ತಿ

ಇಂದು ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಇನ್ನೂ 3 ದಿನ ಕರ್ನಾಟಕದ ಉತ್ತರ ಒಳನಾಡು(NIK) ಮತ್ತು ದಕ್ಷಿಣ ಒಳನಾಡಿನಲ್ಲಿ(SIK) ಮಳೆಯಾಗಲಿದೆ. ಅದರಲ್ಲೂ ಇಂದು ಮತ್ತು ನಾಳೆ ಸಿಲಿಕಾನ್​ ಸಿಟಿ ಬೆಂಗಳೂರು(Bengaluru) ಸೇರಿದಂತೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು IMD ಹೇಳಿದೆ.

ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಬಳ್ಳಾಪುರ, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದಲ್ಲಿಯೂ ಮಳೆಯ(Rainfall) ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಅಕಾಲಿಕ ಮಳೆಗೆ ಬೆಳೆ ಹಾನಿ

ಇತ್ತ ಮೈಸೂರು ಭಾಗದಲ್ಲಿ ಶುಷ್ಕ ಹಮಾಮಾನದ ಜೊತೆ ಚಳಿ ಸಹ ಇರಲಿದೆ. ಬೆಳಗ್ಗೆ ಬೀಳುವ ಮಂಜು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಡಲೆ, ಜೋಳ ಹಳದಿ ರೋಗಕ್ಕೆ ತುತ್ತಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ಕೊರೋನಾ, ಓಮೈಕ್ರಾನ್ (Corona Virus And Omicron Variant) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಸಣ್ಣ ನೆಗಡಿಗೂ ಜನರು ಹೆದರುವಂತಾಗಿದೆ.

ಈ ಭಾಗಗಳಲ್ಲಿ ದಟ್ಟವಾದ ಮಂಜು, ಶೀತ ಗಾಳಿ

ಮುಂದಿನ 2 ದಿನಗಳಲ್ಲಿ ಪಶ್ಚಿಮ ಹಿಮಾಲಯ ಪ್ರದೇಶ, ಈಶಾನ್ಯ ಭಾರತದ ಭಾಗಗಳಲ್ಲಿ ರಾತ್ರಿ/ಬೆಳಿಗ್ಗೆ ಪ್ರತ್ಯೇಕ ಭಾಗಗಳಲ್ಲಿ ದಟ್ಟವಾದ/ಅತಿ ದಟ್ಟವಾದ ಮಂಜು ಆವರಿಸಲಿದೆ. ಮುಂದಿನ 3 ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಉತ್ತರ ರಾಜಸ್ಥಾನ ಮತ್ತು ಮುಂದಿನ 5 ದಿನ ಯುಪಿ, ಬಿಹಾರ ಮತ್ತು ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ದಟ್ಟವಾದ ಮಂಜು ಆವರಿಸಲಿದೆ.

ಇದನ್ನೂ ಓದಿ:  Mangaluru: ಸಿನಿಮಾ ಶೈಲಿಯಲ್ಲಿ ಕಳ್ಳನನ್ನ ಹಿಡಿದ ಪೊಲೀಸ್ ಅಧಿಕಾರಿಗೆ ಬಹುಮಾನ

ಮುಂದಿನ 3 ದಿನ ಈಶಾನ್ಯ ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಶೀತ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
Published by:Mahmadrafik K
First published: