Karnataka Weather Today; ಬೇಸಿಗೆ ಆರಂಭ, ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆ; ತ.ನಾಡಿನಲ್ಲಿ ಮಳೆ

Karnataka Weather Today 13  Feb 2022: ಕರ್ನಾಟಕದಲ್ಲಿ ಬೇಸಿಗೆ ಆರಂಭವಾಗಿದ್ದು, ಜನರು ಶಿವ ಶಿವ ಅನ್ನುವಂತಾಗಿದೆ. : ರಾಜ್ಯದಲ್ಲಿ ಹವಾಮಾನ (Weather) ಬದಲಾಗುತ್ತಿದ್ದು, ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲು ಹೆಚ್ಚಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today 13  Feb 2022: ಕರ್ನಾಟಕದಲ್ಲಿ ಬೇಸಿಗೆ ಆರಂಭವಾಗಿದ್ದು, ಜನರು ಶಿವ ಶಿವ ಅನ್ನುವಂತಾಗಿದೆ. : ರಾಜ್ಯದಲ್ಲಿ ಹವಾಮಾನ (Weather) ಬದಲಾಗುತ್ತಿದ್ದು, ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲು ಹೆಚ್ಚಾಗುತ್ತಿದೆ. ಇತ್ತ ಚಳಿಗಾಲ(Winter)ದ ಚಳಿ (Cold) ಮಾಯವಾಗುತ್ತಿದೆ. ಸಂಜೆಯಾದ್ರೂ ಬೇಸಿಗೆ(Summer)ಯ ಧಗೆ ಜನರನ್ನು ದಣಿಸುವಂತೆ ಮಾಡುತ್ತಿದೆ. ಇತ್ತ ಬೆಳಗಿನ ಜಾವ ಸಣ್ಣ ಪ್ರಮಾಣದಲ್ಲಿ ಸುಳಿ ಗಾಳಿ ಸಹ ಬೀಸುತ್ತಿದೆ. ಕರ್ನಾಟಕ(Karnataka)ದ ಎಲ್ಲ ಜಿಲ್ಲೆಗಳಲ್ಲಿ ಒಣ ಹವೆ ಇರಲಿದ್ದು, ಇಷ್ಟು ದಿನ ಎಷ್ಟು ಚಳಿ ಅಂತ ಹೇಳುತ್ತಿದ್ದವರು, ಇಂದು ಅಯ್ಯೋ ಕೆಟ್ಟ ಬಿಸಿಲು ಎಂದು ಶಪಿಸುತ್ತಿದ್ದಾರೆ.  ಇನ್ನೂ ಕರಾವಳಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಬೆಂಗಳೂರಿನಲ್ಲಿ ಗರಿಷ್ಠ 29 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇನ್ನೂ ಮಲೆನಾಡು, ದಕ್ಷಿಣ ಒಳನಾಡು ಭಾಗದಲ್ಲಿ ಸಣ್ಣ ಚಳಿ ಇರಲಿದೆ. ಉತ್ತರ ಕರ್ನಾಟಕ (North Karnataka) ಭಾಗಗಳಲ್ಲಿ ಪೂರ್ಣ ಒಣ ಹವೆ ಇರಲಿದ್ದು, ಬೆಳಗ್ಗೆ 10 ಗಂಟೆಯ ನಂತರ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ರಾತ್ರಿಯ ವೇಳೆ ಸಣ್ಣ ಪ್ರಮಾಣದ ಚಳಿ ಬಿಸಿಲಿನಿಂದ ಬಳಲಿದ ಜನತೆಗೆ ತಂಪಾದ ಹಿತವನ್ನು ನೀಡುತ್ತಿದೆ

ರಾಜ್ಯದ ಜಿಲ್ಲಾವರು ಹವಾಮಾನ ವರದಿ (ಗರಿಷ್ಠ ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 29-17, ಮೈಸೂರು 32-18, ಚಾಮರಾಜನಗರ 32-19, ರಾಮನಗರ 31-18, ಮಂಡ್ಯ 32-18, ಬೆಂಗಳೂರು ಗ್ರಾಮಾಂತರ 29-17, ಚಿಕ್ಕಬಳ್ಳಾಪುರ 28-15, ಕೋಲಾರ 29-17, ಹಾಸನ 31-17, ಚಿಕ್ಕಮಗಳೂರು 31-16, ದಾವಣಗೆರೆ 33-18, ಶಿವಮೊಗ್ಗ 34-18, ಕೊಡಗು 31-17, ತುಮಕೂರು 31-17

ಇದನ್ನೂ ಓದಿ:  Hijab ವಿವಾದ ಬೆನ್ನಲ್ಲೇ ಮಂಗಳೂರಿನ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ‘ನಮಾಜ್’.. Video Viral

ಉಡುಪಿ 33-24, ಮಂಗಳೂರು 33-23, ಉತ್ತರ ಕನ್ನಡ 35-19, ಧಾರವಾಡ 33-18, ಹಾವೇರಿ 34-19, ಹುಬ್ಬಳ್ಳಿ 33-18, ಬೆಳಗಾವಿ 32-18, ಗದಗ 32-19, ಕೊಪ್ಪಳ 31-19, ವಿಜಯಪುರ 32-19, ಬಾಗಲಕೋಟ 33-19, ಕಲಬುರಗಿ 32-18, ಬೀದರ್ 30-16, ಯಾದಗಿರಿ 33-19, ರಾಯಚೂರ 32-19, ಬಳ್ಳಾರಿ 32-19

ಇತ್ತ ತಮಿಳುನಾಡು ಭಾಗದಲ್ಲಿ ಮಳೆ ಆಗಿದೆ. ಕಳೆದ ಎರಡು ದಿನಗಳಲ್ಲಿ ಅಲ್ಲಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗಿರುವ ವರದಿಗಳು ಆಗಿವೆ. ಆಂಧ್ರ ಪ್ರದೇಶ, ತೆಲಂಗಾಣದ ಕರಾವಳಿ ಭಾಗದಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ತಮಿಳುನಾಡಿನಲ್ಲಿ ಮಳೆಯ ನಿರೀಕ್ಷೆ

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಲಘುವಾಗಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ಕಾರೈಕಲ್, ತಿರುವರೂರ್, ತಂಜಾವೂರು, ಪುದುಕೊಟ್ಟೈ, ನೀಲಗಿರಿ, ತೇಣಿ, ದಿಂಡಿಗಲ್, ಮಧುರೈ, ವಿರುಧುನಗರ, ಶಿವಗಂಗಾ, ತೆಂಕಶಿ, ರಾಮನಾಥಪುರಂ, ತೂತುಕುಡಿ, ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿಯಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ.

ಇದನ್ನೂ ಓದಿ:  Hijab Row: ಶಾಸಕ ರಘುಪತಿ ಭಟ್ ಗೆ ಬೆದರಿಕೆ ಕರೆ; ವಿವಾದದಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ ಅಂದ್ರು ಚಲುವರಾಯಸ್ವಾಮಿ

ಮುಂದಿನ ಎರಡು ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಚದುರಿದ ಮಳೆಯಾದ್ರೆ, ಕೆಲವು ಕಡೆ ಗುಡುಗು- ಮಿಂಚಿನ ಸಹಿತ ಮಳೆಯಾಗಲಿದೆ. ತಮಿಳುನಾಡಿನ ಕರಾವಳಿ ಭಾಗ ವಾರಂತ್ಯದಲ್ಲಿ ಭಾರೀ ಮಳೆ ಎದುರಿಸುವ ಸಾಧ್ಯತೆ ಇದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ ಇಳಿಕೆ

ಫೆಬ್ರವರಿ ತಿಂಗಳಲ್ಲೇ ರಾಜ್ಯದ ಬಹುತೇಕ ಕಡೆ ಈಗಾಗಲೇ ಬಿಸಿಲಿನ ಆರ್ಭಟ ಜೋರಾಗುತ್ತಿದೆ. ಇದರ ಪ್ರಭಾವ ರಾಜ್ಯದ ಬಹುತೇಕ ಜಲಾಶಯಗಳ ಮೇಲೂ ಬಿದ್ದಿದೆ. ಕಳೆದ ವರ್ಷ ಮುಂಗಾರು ಮಳೆ ಹಾಗೂ ಅಕಾಲಿಕ ಮಳೆಗೆ ಸುರಿದಿದ್ದ ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ಹಾಗೂ ಬಹುತೇಕ ತುಂಬಿದ್ದ ಜಲಾಶಯಗಳಲ್ಲೂ ಈಗ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

ಇನ್ನು, ಬಿಸಿಲು ಹೆಚ್ಚಾಗುತ್ತಿರುವುದಿಂದ ಹಾಗೂ ಜಲಾಶಯಗಳಲ್ಲಿ ಒಳಹರಿವು ಸಹ ಕಡಿಮೆಯಾಗುತ್ತಿರುವುದರಿಂದ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ.
Published by:Mahmadrafik K
First published: