Karnataka Weather Report: ರಾಜ್ಯದಲ್ಲಿ ಮತ್ತೆ ಹೆಚ್ಚಾದ ಚಳಿ: ನಿಮ್ಮೂರಿನ ಹವಾಮಾನ ವರದಿ ಇಲ್ಲಿದೆ

ಉತ್ತರ ಭಾರತದಲ್ಲಿ (North India) ಜೋರು ಮಳೆ(Rain fall)ಯಾಗುತ್ತಿದ್ರೆ, ದಕ್ಷಿಣ ಭಾಗದಲ್ಲಿ ಒಣ ಹವೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಇಳಿಕೆಯತ್ತ ಸಾಗಿದ್ದ ಚಳಿ ಪ್ರಮಾಣ (Cold Weather) ಮುಂದಿನ ಎರಡ್ಮೂರು ದಿನ ಕೊಂಚ ಏರಿಕೆಯಾಗುವ ಸಾಧ್ಯತೆಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಉತ್ತರ ಭಾರತದಲ್ಲಿ (North India) ಜೋರು ಮಳೆ(Rain fall)ಯಾಗುತ್ತಿದ್ರೆ, ದಕ್ಷಿಣ ಭಾಗದಲ್ಲಿ ಒಣ ಹವೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಇಳಿಕೆಯತ್ತ ಸಾಗಿದ್ದ ಚಳಿ ಪ್ರಮಾಣ (Cold Weather) ಮುಂದಿನ ಎರಡ್ಮೂರು ದಿನ ಕೊಂಚ ಏರಿಕೆಯಾಗುವ ಸಾಧ್ಯತೆಗಳಿವೆ. ಇನ್ನು ಚಳಿಗಾಲದ ನಡುವೆ ಸುರಿಯುತ್ತಿರುವ ಅಕಾಲಿಕ ಮಳೆ (Unseasonal Rains), ಜನ ಜೀವನದ ಮೇಲೆ ವ್ಯತ್ಯರಿಕ್ತ ಪರಿಣಾಮ ಬೀರುತ್ತಿದೆ.  ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಳಲ್ಲಿ ಮಾತ್ರ ಬೆಳಗ್ಗೆ ದಟ್ಟವಾದ ಮಂಜು ಆವರಿಸಿಕೊಂಡ ವಾತಾವರಣ ನಿರ್ಮಾಣವಾಗುತ್ತಿದೆ.ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲು ನೆತ್ತಿ ಸುಡುವಂತಿದೆ.

ಉತ್ತರ ಕರ್ನಾಟಕದ (North Karnataka) ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟುವ ಮೂಲಕ ಬೇಸಿಗೆ (Summer) ಆರಂಭದ ಸುಳಿವು ನೀಡುತ್ತಿದೆ. ಈ ಬಾರಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ವಾತಾವರಣದಲ್ಲಿ ವೈಪರೀತ್ಯ ಉಂಟಾಗಿದೆ.

ಇದನ್ನೂ ಓದಿ:  Mysuru: ಕರುಳ ಕುಡಿಯನ್ನು ಕೊಚ್ಚಿ ಕೊಲೆಗೈದ ತಾಯಿ

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 29-18, ಮೈಸೂರು 31-17, ಚಾಮರಾಜನಗರ 31-18, ರಾಮನಗರ 31-17, ಮಂಡ್ಯ 32-18, ಬೆಂಗಳೂರು ಗ್ರಾಮಾಂತರ 29-18, ಚಿಕ್ಕಬಳ್ಳಾಪುರ 29-17, ಕೋಲಾರ 29-19, ಹಾಸನ 29-14, ಚಿಕ್ಕಮಗಳೂರು 28-13, ದಾವಣಗೆರೆ 31-14, ಶಿವಮೊಗ್ಗ 31-14, ಕೊಡಗು 28-14, ತುಮಕೂರು 30-17

ಉಡುಪಿ 29-19, ಮಂಗಳೂರು 29-21, ಉತ್ತರ ಕನ್ನಡ 29-13, ಧಾರವಾಡ 28-13, ಹಾವೇರಿ 31-14, ಹುಬ್ಬಳ್ಳಿ 29-14, ಬೆಳಗಾವಿ 27-12, ಗದಗ 30-14, ಕೊಪ್ಪಳ 30-16, ವಿಜಯಪುರ 29-14, ಬಾಗಲಕೋಟ 31-14, ಕಲಬುರಗಿ 30-18, ಬೀದರ್ 27-17, ಯಾದಗಿರಿ 31-18, ರಾಯಚೂರ 30-18, ಬಳ್ಳಾರಿ 31-18

ಪಂಜಾಬ್, ಮಧ್ಯಪ್ರದೇಶ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ವಾಯವ್ಯ ಮತ್ತು ಮಧ್ಯ ಭಾರತದ ಅನೇಕ ಭಾಗಗಳಲ್ಲಿ 3-5 ಡಿಗ್ರಿ ಸೆಲ್ಸಿಯಸ್‌ನಷ್ಟು ತಲಪುತ್ತಿದೆ. ಉತ್ತರ ಭಾರತದ ಉಳಿದ ಭಾಗಗಳಲ್ಲಿ ತಾಪಮಾನ ಸಾಮಾನ್ಯವಾಗಿದೆ.

ಓಡಿಶಾದಲ್ಲಿ ಆರೆಂಜ್ ಅಲರ್ಟ್

ಒಡಿಶಾದಲ್ಲಿ  ಇಂದು ಸಹ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ. ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಆರೆಂಟ್ ಅಲರ್ಟ್ ನೀಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ Weekend Curfew, Night Curfew ವಿಸ್ತರಣೆ.. ಎಲ್ಲಿಯವರೆಗೆ..?

ಅಕಾಲಿಕ ಮಳೆಗೆ ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ (Unseasonal Rain)ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಚಳಿಯ (Winter) ಪ್ರಮಾಣ ಹೆಚ್ಚಾಗಿದ್ದು, ಜನರನ್ನು ನಡುಗಿಸುತ್ತಿದೆ.   ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್(Break) ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಉತ್ತರದ ರಾಜ್ಯಗಳಲ್ಲಿ ಹಳದಿ ಅಲರ್ಟ್

ಪಂಜಾಬ್‌ನ ಪಿಪಾ ರಂಗಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಭಾನುವಾರ ಡೈರಿಯ ಮೇಲ್ಛಾವಣಿ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದ್ದು, ಜನವರಿ 11 ಮತ್ತು 13 ರಂದು ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ.

ಪಂಜಾಬ್ ಮತ್ತು ಹರಿಯಾಣದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ, ಆದರೆ ಕನಿಷ್ಠ ತಾಪಮಾನವು ಎರಡು ರಾಜ್ಯಗಳಲ್ಲಿ ಅನೇಕ ಸ್ಥಳಗಳಲ್ಲಿ ಸಾಮಾನ್ಯ ಮಿತಿಯನ್ನು ಮೀರಿದೆ.

ಈ ಭಾಗದಲ್ಲಿ ಮಳೆ

ಚಂಡೀಗಢ, ಕಪುರ್ತಲ, ಅಮೃತಸರ, ಲೂಧಿಯಾನ, ಪಟಿಯಾಲ, ಫಿರೋಜ್‌ಪುರ, ಬಟಿಂಡಾ, ಹೋಶಿಯಾರ್‌ಪುರ, ರೂಪನಗರ್, ಮೊಹಾಲಿ, ಗುರುದಾಸ್‌ಪುರ, ಅಂಬಾಲಾ, ಹಿಸಾರ್, ಪಂಚಕುಲ, ರೋಹ್ಟಕ್, ಗುರುಗ್ರಾಮ್, ಸಿರ್ಸಾ ಮತ್ತು ಯಮುನಾನಗರ ಭಾಗದಲ್ಲಿ ಮಳೆಯಾಗಲಿದೆ.
Published by:Mahmadrafik K
First published: