Karnataka Weather Today: ಬೆಳಗ್ಗೆ 10 ಗಂಟೆ ನಂತ್ರ ಬೇಸಿಗೆಯ ಬಿಸಿಲು ಆರಂಭ; ಇಲ್ಲಿದೆ ನಿಮ್ಮೂರಿನ ಹವಾಮಾನ ವರದಿ

Karnataka Weather Today Feb 11, 2022: ರಾಜ್ಯದಲ್ಲಿಯ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮತ್ತೊಂದು ಕಡೆ ಚಳಿ (Winter) ಪ್ರಮಾಣ ಇಳಿಕೆಯಾಗುತ್ತಿದ್ದು, ಬಿಸಿಲು ಹೆಚ್ಚಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today Feb 11, 2022: ರಾಜ್ಯದಲ್ಲಿಯ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮತ್ತೊಂದು ಕಡೆ ಚಳಿ (Winter) ಪ್ರಮಾಣ ಇಳಿಕೆಯಾಗುತ್ತಿದ್ದು, ಬಿಸಿಲು ಹೆಚ್ಚಾಗುತ್ತಿದೆ. ಆದ್ರೂ ಕೋಲಾರ, ಚಿಕ್ಕಬಳ್ಳಾಪುರ, ಕೊಡಗು ಭಾಗದಲ್ಲಿ ಚಳಿ 16 ಡಿಗ್ರಿ ಸೆಲ್ಸಿಯಸ್ ನಷ್ಟು ಇರಲಿದೆ. ಇನ್ನೂ ಕರಾವಳಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಇನ್ನೂ ಮಲೆನಾಡು, ದಕ್ಷಿಣ ಒಳನಾಡು ಭಾಗದಲ್ಲಿ ಸಣ್ಣ ಚಳಿ ಇರಲಿದೆ. ಉತ್ತರ ಕರ್ನಾಟಕ (North Karnataka) ಭಾಗಗಳಲ್ಲಿ ಪೂರ್ಣ ಒಣ ಹವೆ ಇರಲಿದ್ದು, ಬೆಳಗ್ಗೆ 10 ಗಂಟೆಯ ನಂತರ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ರಾತ್ರಿಯ ವೇಳೆ ಸಣ್ಣ ಪ್ರಮಾಣದ ಚಳಿ ಬಿಸಿಲಿನಿಂದ ಬಳಲಿದ ಜನತೆಗೆ ತಂಪಾದ ಹಿತವನ್ನು ನೀಡುತ್ತಿದೆ

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 30-16, ಮೈಸೂರು 32-17, ಚಾಮರಾಜನಗರ 32-18, ರಾಮನಗರ 32-17, ಮಂಡ್ಯ 32-17, ಬೆಂಗಳೂರು ಗ್ರಾಮಾಂತರ 30-16, ಚಿಕ್ಕಬಳ್ಳಾಪುರ 29-16, ಕೋಲಾರ 29-16, ಹಾಸನ 25-18, ಚಿಕ್ಕಮಗಳೂರು 26-18, ದಾವಣಗೆರೆ 26-21, ಶಿವಮೊಗ್ಗ 29-21, ಕೊಡಗು 31-16

ತುಮಕೂರು 31-17, ಉಡುಪಿ 33-23, ಮಂಗಳೂರು 33-23, ಉತ್ತರ ಕನ್ನಡ 34-19, ಧಾರವಾಡ 33-18, ಹಾವೇರಿ 33-18, ಹುಬ್ಬಳ್ಳಿ 33-18, ಬೆಳಗಾವಿ 32-18, ಗದಗ 32-19, ಕೊಪ್ಪಳ 32-19, ವಿಜಯಪುರ 32-20, ಬಾಗಲಕೋಟ 33-21, ಕಲಬುರಗಿ 32-19, ಬೀದರ್ 29-16, ಯಾದಗಿರಿ 33-21, ರಾಯಚೂರ 33-21, ಬಳ್ಳಾರಿ 33-19

ಇದನ್ನೂ ಓದಿ:  Gadag Farmers: ವೀಳ್ಯದೆಲೆಯೇ ಈ ಊರಿನ ಗುರುತು.. ರೈತರಿಗೆ ಶ್ರೀಮಂತಿಕೆ ತಂದ ಕಥೆ ಇದು!

ರಾಜ್ಯದ ಜಲಾಶಯಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಪ್ರಮಾಣ

ಕಳೆದ ವರ್ಷ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆಯ ಅಬ್ಬರವಿತ್ತು. ಅಲ್ಲದೆ, ಹೆಚ್ಚು ಸೈಕ್ಲೋನ್‌ಗಳು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸುರಿದ ಅಕಾಲಿಕ ಮಳೆಯಿಂದ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಅಲ್ಲದೆ, ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದವು.

ತಮಿಳುನಾಡಿನಲ್ಲಿ ಮತ್ತೆ ಮಳೆ

ಈ ವರ್ಷದಲ್ಲಿ ಮಳೆಯಿಂದ ತತ್ತರಿಸಿರುವ ತಮಿಳುನಾಡಿಗೆ ಮತ್ತೆ ವರುಣರಾಯ ಎಂಟ್ರಿ ಕೊಡಲಿದ್ದಾರೆ. ಇಂದಿನಿಂದ ಮುಂದಿನ ಮೂರು ದಿನ  ಮಳೆಯಾಗಲಿದೆ. ಮಧುರೈ, ಥೇಣಿ, ದಿಂಡಿಗಲ್, ವಿರುದುನಗರ, ಶಿವಗಂಗಾ, ತೆಂಕಶಿ, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಭಾಗಗಳಲ್ಲಿ ಗುರುವಾರದಿಂದ ಶನಿವಾರದವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

 ಈ  ಭಾಗದಲ್ಲಿ ಮಳೆ, ಹಿಮಪಾತ ಸಾಧ್ಯತೆ

ಇಂದು ಅರುಣಾಚಲ ಪ್ರದೇಶದ ಮೇಲೆ ಅಲ್ಲಲ್ಲಿ ತುಂತುರು ಅಥವಾ ಹಿಮಪಾತವಾಗುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗಲಿದೆ. ಅಸ್ಸಾಂ ಮತ್ತು ಮೇಘಾಲಯದ ಮೇಲೆ ಪ್ರತ್ಯೇಕವಾದ ಮಳೆ ಅಥವಾ ಹಿಮದ ಸಾಧ್ಯತೆ ಇದೆ.

ಇದನ್ನೂ ಓದಿ:  Hijab Controversy: ಹಿಜಾಬ್ ವಿವಾದ, ಪ್ರಿಯಾಂಕಾ ಗಾಂಧಿ ಟ್ವೀಟ್ ಬಗ್ಗೆ ಸಂಸದೆ Sumalatha Ambareesh ಹೇಳಿದ್ದೇನು?

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಮತ್ತು ಕೇರಳ ಮತ್ತು ಮಾಹೆಯಲ್ಲಿ ಗುಡುಗು ಸಹಿತ ಪ್ರತ್ಯೇಕ ಮಳೆ ಆಗುವ ನಿರೀಕ್ಷೆಗಳಿವೆ. ಈಶಾನ್ಯ ಭಾರತದ ಪ್ರತ್ಯೇಕ ಸ್ಥಳಗಳಲ್ಲಿ ಬೆಳಗ್ಗೆ ದಟ್ಟವಾದ ಮಂಜು ಉಂಟಾಗುವ ಸಾಧ್ಯತೆ ಇದೆ.

ಹಿಮಾಲಯನ್ ಪ್ರದೇಶಗಳಲ್ಲಿ ಹಿಮಪಾತ ಸಾಧ್ಯತೆ

ಇಂದು ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಲಘು ಮಳೆ ಅಥವಾ ಹಿಮಪಾತವಾಗಲಿದೆ. ಇಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದಲ್ಲಿ ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Published by:Mahmadrafik K
First published: